Breaking News
Home / ಬೆಳಗಾವಿ / ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ ರಕ್ತದಾನ ಶಿಬಿರ

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ ರಕ್ತದಾನ ಶಿಬಿರ

Spread the love

ಮೂಡಲಗಿ: ಹಣಬಲ, ತೋಳಬಲ, ಜಾತಿಬಲಗಳ ಮಧ್ಯೆ ಸುತ್ತುತ್ತಿರುವ ರಾಜಕರಣದಲ್ಲಿ ಸಾಧಾರಣ ವ್ಯಕ್ತಿಯೊಬ್ಬ ಅಸಾಧಾರಣ ಶಕ್ತಿಯಾಗಿ ಬೆಳೆದು ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಇತಿಹಾಸ ನಮ್ಮೆಲ್ಲರಿಗೂ ಒಂದು ಜೀವಂತ ಉದಾಹರಣೆಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಿತ್ವವನ್ನು ಬಣ್ಣಿಸಿದರು.
ಬುಧವಾರದÀಂದು ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಸತ್ಯಸಾಯಿ ಮಂದಿರ ಆವರಣದ ಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಕಲ್ಯಾಣ (ಸೇವಾ) ಸಂಸ್ಥೆ, ಮಾಜಿ ಸೈನಿಕರ ಸಂಘ, ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಲ್ಲೋಳಿ ಹಾಗೂ ರೋಟರಿ ರಕ್ತ ಭಂಡಾರ ಕೇಂದ್ರ ಗೋಕಾಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಅವರು ಮಾತನಾಡಿದ ಅವರು, 370 ನೇ ಆರ್ಟಿಕಲ್ ರದ್ದತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಖ್ ರದ್ದು, ಉಚಿತ ಕೋವಿಡ್ ವ್ಯಾಕ್ಸಿನೇಷನ್, ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯುμÁ್ಮನ್ ಭಾರತ್, ಕಿಸಾನ್ ಸಮ್ಮಾನ್ ನಿಧಿ, ಉಚಿತ ಗ್ಯಾಸ್ ಸಂಪರ್ಕ, ರಾಷ್ಟ್ರೀಯ ಶಿಕ್ಷಣ ನೀತಿ, ಜಿ.ಎಸ್.ಟಿ ತೆರಿಗೆ ಜಾರಿ ಮತ್ತು ಗುರುತರ ಬದಲಾವಣೆ ಈ ರೀತಿ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅದ್ವೀತಿಯ ಬದಲಾವಣೆ ತಂದ ಪ್ರಧಾನಿ ನರೇಂದ್ರ ಮೋದಿ ವಿಕಸಿತ ಭಾರತದ ಸಂಕಲ್ಪದೊಂದಿಗೆ ಭಾರತವನ್ನು ಆತ್ಮನಿರ್ಭರ ಗೊಳಿಸುತ್ತಿದ್ದಾರೆ ಎಂದು ಅವರ ಕಾರ್ಯಶೈಲಿಯನ್ನು ಹಾಡಿ ಹೊಗಳಿದರು.
ದೇಶದ ಒಳಗೂ ಮತ್ತು ದೇಶದ ಹೊರಗೂ ಸವಾಲು ಒಡ್ಡಿರುವ ಭಯೋತ್ಪಾಧಕ ಕೃತ್ಯಗಳನ್ನು ಮೆಟ್ಟಿನಿಂತು ರಾಜತಾಂತ್ರಿಕ ನೈಪುಣ್ಯತೆಯನ್ನು ತೋರಿಸಿ, ವಿಶ್ವದ ಹಿರಿಯಣ್ಣನ ಸ್ಥಾನದಲ್ಲಿ ಅವರು ನಿಂತಿರುವುದು ಐತಿಹಾಸಿಕ ಸತ್ಯ. ಇಂತಹ ನರೇಂದ್ರ ಮೋದಿಯವರ ಜನ್ಮದಿನವಾದ ಇಂದು ಇಡಿ ದೇಶ ಹಲವಾರು ಸೇವಾ ಕಾರ್ಯಗಳಲ್ಲಿ ತೊಡಗಿ ನಿಂತಿದೆ. ಭಗವಂತ ಅವರ ಆಯುಷ್ಯ ಮತ್ತು ಆರೋಗ್ಯ ವೃದ್ದಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿ, ಶುಭ ಹಾರೈಸಿದರು.
ಶಿಬಿರದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಗಿರೀಶ್ ಜಂವರ, ಕಾರ್ಯದರ್ಶಿ ಬಸವರಾಜ ಹುಳ್ಳೇರ, ಡಾ. ಬಿ. ಆರ್. ಕಪ್ಪಲಗುದ್ದಿ, ಸೋಮಣ್ಣ ಮಗದುಮ್ಮ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ, ಶ್ರೀಶೈಲ ತುಪ್ಪದ, ಸಾಯಿ ಸಮಿತಿ ಸದಸ್ಯ ಸುರೇಶ ಕಬ್ಬೂರ, ಬಸವರಾಜ ಕಡಾಡಿ, ಡಾ ಭೀಮಪ್ಪಾ ಲಿಂಬೋಜಿ, ಅಡಿವೆಪ್ಪ ಕುರಬೇಟ, ಅಜೀತ ಚಿಕ್ಕೋಡಿ, ಶಿವಪ್ಪ ಬಿ.ಪಾಟೀಲ. ಶ್ರೀಶೈಲ ಪೂಜೇರಿ, ಬಸವರಾಜ ಹಿಡಕಲ್, ಶ್ರೀಕಾಂತ ಕೌಜಲಗಿ, ಸಿದ್ದಪ್ಪ ಹಳ್ಳೂರ, ಈಶ್ವರ ಮುರಗೋಡ, ಈರಪ್ಪ ಢವಳೇಶ್ವರ, ಗುರು ಗಂಗಣ್ಣವರ, ಮದನ ದಾನನ್ನವರ, ಸಿದ್ದಪ್ಪ ಬಿಸಗುಪ್ಪಿ, ಯಮನಪ್ಪಾ ಬಾಗಾಯಿ, ಹಣಮಂತ ಗೋಡಿಗೌಡರ, ಮಹಾದೇವ ಮಸರಗುಪ್ಪಿ, ಬಸವರಾಜ ಗಾಡವಿ, ಮಹಾಂತೇಶ ರೊಡ್ಡನ್ನವರ, ಸಿದಾರ್ಥ ಅಥಣಿ, ಭೀಮಗೌಡ ಪಾಟೀಲ, ಈಶ್ವರ ಗಾಡವಿ ಸೇರಿದಂತೆ, ಕಾರ್ಯಕರ್ತರು ಹಾಗೂ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಎನ್.ಎಸ್,ಎಸ್ ಘಟಕದ ವಿಧ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಸೇವಾ ಸಂಸ್ಥೆಯ ಅಧ್ಯಕ್ಷ ಪರಪ್ಪ ಗಿರೆಣ್ಣವರ ಸ್ವಾಗತಿಸಿದರು, ಲೋಹಿತ ಕಲಾಲ ಕಾರ್ಯಕ್ರಮ ನಿರೂಪಿಸಿದರು.


Spread the love

About inmudalgi

Check Also

ಸ್ಥಳೀಯರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು : ಎಮ್.ಎಲ್.ಯಡ್ರಾಂವಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸ್ವಚ್ಛತೆಗೆ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ