ಮೂಡಲಗಿ: ಮೂಡಲಗಿಯ ಪ್ರಸನ್ನಕುಮಾರ ಆರ್. ಶಾಸ್ತ್ರೀಮಠ ಇವರು ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ವಿಷಯದಲ್ಲಿ ಮಂಡಿಸಿದ್ದ ಪ್ರಬಂಧವನ್ನು ಮನ್ನಿಸಿ ವಿಶ್ವವಿದ್ಯಾಲಯವು ಪಿ.ಎಚ್‍ಡಿ ಪದವಿಯನ್ನು ಪ್ರಕಟ ಮಾಡಿದೆ.
ಕಲಬುರ್ಗಿ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ. ವಿಜಕುಮಾರ ಅವರ ಮಾರ್ಗದರ್ಶನದಲ್ಲಿ ‘ಡೈವರ್‍ಸಿಟಿ ಆಪ್ ಬಟರ್‍ಪ್ಲಾಯಿಸ್ ಆಪ್ ಚಿಂಚೋಳಿ ವೈಡ್‍ಲೈಫ್ ಸ್ಯಾಂಕ್ಚೂಅರಿ’ ವಿಷಯದಲ್ಲಿ ಮಂಡಿಸಿದ್ದ ಪ್ರಬಂಧವು ‘ಎ’ ಶ್ರೇಣಿಯಲ್ಲಿ ಮಾನ್ಯಗೊಂಡಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಡಾ. ಪ್ರಸನ್ನಕುಮಾರ ಅವರು ನಾಗನೂರದ ಅಥರ್ವ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜ್ಞಾನ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಥರ್ವ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರು ಡಾ. ಪ್ರಸನ್ನಕುಮಾರ ಶಾಸ್ತ್ರೀಮಠ ಅವರನ್ನು ಅಭಿನಂದಿಸಿದ್ದಾರೆ.
