ಬೆಟಗೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಳೆಗೆ ಕಬ್ಬು ಬೆಳೆ ನಾಶ.!
*ಅಡಿವೇಶ ಮುಧೋಳ.ಬೆಟಗೇರಿ
ಗೋಕಾಕ ತಾಲೂಕಿನ ಬೆಟಗೇರಿ ಸುತ್ತಲಿನ ಹಳ್ಳಿಗಳಲ್ಲಿ ಕಳೆದ ಒಂದು ವಾರದಿಂದ ಆಗಾಗ ಹಗಲುರಾತ್ರಿ ಧಾರಾಕಾರ ಸುರಿದ ಮಳೆಯಿಂದ ಇಲ್ಲಿಯ ಭೂಮಿಯನ್ನು ತಂಪಾಗಿಸಿದೆ. ಅಲ್ಲದೇ ವಾರದಿಂದ ಸುರಿಯುತ್ತಿರುವ ಮಳೆ ನೀರಿಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೆ ಇಲ್ಲಿಯ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಹೋಗಿದೆ.!
ಈ ಮಳೆ ಹಗಲಿರುಳು ಬಿಡದೆ ಆಗಾಗ ಸುರಿದು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಲ್ಲಿರುವ ಬಹುತೇಕ ಹೊಲ-ಗದ್ದೆಗಳಲ್ಲಿರುವ ಕಬ್ಬು, ಗೋವಿನಜೋಳ ಸೇರಿದಂತೆ ಭೂಮಿಯಲ್ಲಿದ್ದ ಇನ್ನೂ ಕೆಲವು ತೋಟಗಾರಿಕೆ ಬೆಳೆಗಳು ಮಳೆ ಮತ್ತು ಗಾಳಿಗೆ ನೆಲಕಚ್ಚಿ ಹೋಗಿ ಬೆಳೆಗಳು ಸಂಪೂರ್ಣ ಹಾಳಾಗುವ ಆತಂಕ ಸ್ಥಳೀಯ ರೈತರಲ್ಲಿ ಮೂಡಿದೆ.
ಬೆಟಗೇರಿ ಸುತ್ತಲಿನ ಹಳ್ಳಿಗಳಲ್ಲಿ ಭೂಮಿಯಲ್ಲಿದ್ದ ನೆಲಕ್ಕೆ ಉರುಳಿದ ಕಬ್ಬು ಬೆಳೆ ಸೇರಿದಂತೆ ಕೆಲವು ತೋಟಗಾರಿಕೆ ಬೆಳೆಗಳು ಮಳೆ ಮತ್ತು ಗಾಳಿಗೆ ನೆಲಕಚ್ಚಿ ಸಂಪೂರ್ಣ ನಾಶವಾಗಿ ಹೋಗುವ ಆತಂಕ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರೈತರಿಗೆ ಎದುರಾಗಿದೆ. ಕಬ್ಬು ಬೆಳೆ ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಬೇಕಾದರೆ ಇನ್ನೂ ಕಾರ್ಖಾನೆಗಳು ಕಬ್ಬು ನುರಿಸುವ ಪ್ರಸಕ್ತ ಸಾಲಿನ ಹಂಗಾಮ ಆರಂಭವಾಗಿಲ್ಲಾ, ಹೀಗಾಗಿ ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾದ ಬೆಳೆಗಳಿಗೆ ಸರಕಾರ ಶೀಘ್ರ ಪರಿಹಾರ ನೀಡಬೇಕು ಎಂದು ಸ್ಥಳೀಯ ರೈತರು ಸರಕಾರವನ್ನು ಒತ್ತಾಯಿಸಿದ್ದಾರೆ.
“ಕಳೆದ ಒಂದು ವಾರದಿಂದ ಆಗಾಗ ಹಗಲಿರುಳು ಸುರಿದ ಮಳೆ ಮತ್ತು ಗಾಳಿಗೆ ಭೂಮಿಯಲ್ಲಿದ್ದ ಕಬ್ಬು ಮತ್ತೀತರ ತೋಟಗಾರಿಕೆ ಬೆಳೆಗಳು ನೆಲಕ್ಕೆ ಉರಳಿ ನಾಶವಾಗುವ ಹಂತದಲ್ಲಿವೆ ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಬಸವಂತ ಕೋಣಿ. ಪ್ರಗತಿಪರ ರೈತರು. ಬೆಟಗೇರಿ, ತಾ.ಗೋಕಾಕ