Breaking News
Home / ಬೆಳಗಾವಿ / ಸೋಲು ಗೆಲುವು ಮುಖ್ಯವಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸಿ

ಸೋಲು ಗೆಲುವು ಮುಖ್ಯವಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸಿ

Spread the love

ಮೂಡಲಗಿ: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸೋಲನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ತರಬೇತಿ ಪಡೆದು ಮತ್ತೆ ಸಾಧನೆಗೆ ಸನ್ನದ್ಧರಾಗಬೇಕು. ಕ್ರೀಡಾಪಟುಗಳು ನಿರ್ಣಾಯಕರ ನಿರ್ಣಯಕ್ಕೆ ಬದ್ಧವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ ಶ್ರೀಶೈಲ ಗುಡಮಿ ಹೇಳಿದರು.

ಸ್ಥಳೀಯ ಲಕ್ಷ್ಮಣ ವಾಯ್. ಅಡಿಹುಡಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ, ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇವರ ಸಹಯೋಗದಲ್ಲಿ ಮೂಡಲಗಿ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ನಿಪ್ಪಾಣಿ ಈ ಎಂಟು ತಾಲೂಕುಗಳ ಪ್ರೌಢ ಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು, ಕ್ರೀಡಾ ಜ್ಯೋತಿಯನ್ನು ಸ್ವೀಕಾರ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಬಿ. ಹಿರೇಮಠ ಮಾತನಾಡಿ, ಮನಸ್ಸಿನ ಸಮತೋಲನ ಕಾಯ್ದುಕೊಳ್ಳಲು ಕ್ರೀಡೆ ಅವಶ್ಯವಾಗಿದೆ. ಮನುಷ್ಯ ಒಂದಿಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು, ಅದು ಅವನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ ಅಲ್ಲದೆ ಅವನ ಮನಸ್ಸು ಸದೃಢವಾಗಿರಲು ಸಹಕರಿಸುತ್ತದೆ ಮತ್ತು ಕ್ರೀಡೆಗಳು ವಿದ್ಯಾರ್ಥಿಗಳಿಗೆ ಮಾನಸಿಕ ದೈಹಿಕ ಬೆಳವಣಿಗೆ ಜೊತೆಗೆ ಒತ್ತಡ ಬದುಕಿಗೆ ಸಹಕಾರಿ ಆಗಲಿದೆ ಎಂದರು.
ಹಿರಿಯ ನ್ಯಾಯವಾದಿ ಕೆ.ಪಿ. ಮಗದುಮ್ ಮಾತನಾಡುತ್ತಾ, ಇಂದಿನ ಮೊಬೈಲ ಯುಗದಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಕ್ರೀಡೆ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ ಎಂದರು.
ಜಾನಪದ ಕಲಾವಿದ ಶಬ್ಬೀರ್ ಡಾಂಗೆ ಮಾತನಾಡಿ ನಾವು ಸಣ್ಣವರಿದ್ದಾಗ ನಿಜವಾದ ಎಲ್ಲಾ ಆಟಗಳನ್ನು ಆಡುತ್ತಿದ್ದೆವು ಆದರೆ ಈಗಿನ ವಿದ್ಯಾರ್ಥಿಗಳು ಮೊಬೈಲ್‍ನಲ್ಲಿ ಆಟಗಳನ್ನು ಆಡುತ್ತಿದ್ದಾರೆ ಮೊಬೈಲ್‍ನಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ವಿದ್ಯಾರ್ಥಿಗಳು ಆರೋಗ್ಯವಂತರಾಗಿರಬೇಕಾದರೆ ಕ್ರೀಡೆಗಳನ್ನು ಆಡುವುದು ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಪರೀವಿಕ್ಷಕರು ಎ. ಎ.ಜುನೆದಿ ಪಟೇಲ್, ಪುರಸಭೆ ಅದ್ಯಕ್ಷರು ಶ್ರೀಮತಿ ಕುμರ್Áದ್‍ಬೇಗಮ್ ನದಾಫ್, ಪಿ.ಎಸ್.ಐ ರಾಜು ಪೂಜೇರಿ, ತಾಲೂಕ ದೈಹಿಕ ಶಿಕ್ಷಣ ಪರಿವಿಕ್ಷಕರು ಎಸ್.ಬಿ. ಹಳಿಗೌಡರ, ಸಿದ್ರಾಮ ಲೋಕನ್ನವರ, ಸುಭಾಸ ಗೊಡ್ಯಾಗೋಳ, ಹನಮಂತ ಕಂಕಣವಾಡಿ, ಎ.ಪಿ. ಪರಸನ್ನವರ, ಈಶ್ವರ ಕಂಕಣವಾಡಿ, ಎಮ್.ಎಸ್. ಮುತ್ತೇನ್ನವರ, ಎಸ್.ಎಮ್. ನಾಗನೂರ, ಶಾಂತಕುಮಾರ ಬೆಂಗಳೂರು, ಸುಕಾನಂದ ಬೆಂಗಳೂರು, ರಾಘವೇಂದ್ರ ಬೆಂಗಳೂರು, ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಅಡಿಹುಡಿ ಸ್ವಾಗತಿಸಿ, ಕರಿ ಬಸವರಾಜ್ ಟಿ ಕಾರ್ಯಕ್ರಮ ನಿರೂಪಿಸಿದರು.


Spread the love

About inmudalgi

Check Also

ರಾಜ್ಯದಲ್ಲಿ ಉಪ್ಪಾರ ಸಮುದಾಯ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ – ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ

Spread the loveಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಉಪ್ಪಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ