‘ವಿದ್ಯಾರ್ಥಿಗಳಲ್ಲಿ ದೃಢ ಸಂಕಲ್ಪ, ಪರಿಶ್ರಮ ಬೇಕು’
ಮೂಡಲಗಿ: ‘ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ದೃಢ ಸಂಕಲ್ಪ, ಸತತ ಪರಿಶ್ರಮ, ನಿರಂತ ಅಧ್ಯಯನದಿಂದ ಪ್ರತಿಭಾನ್ವಿತ ವ್ಯಕ್ತಿಗಳಾಗಿ ರೂಪಗೊಳ್ಳಲು ಸಾಧ್ಯ’ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಅವರು ಹೇಳಿದರು.
ತಾಲ್ಲೂಕಿನ ಪಿಜೆಎನ್ ಪ್ರೌಢ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಾಧಕ ವ್ಯಕ್ತಿಗಳ ಅದರ್ಶಗಳನ್ನು ಅನುಸರಿಸಿ ಶ್ರೇಷ್ಠ ವ್ಯಕ್ತಿಗಳಾಗಿರಿ ಎಂದು ಹೇಳಿದರು.
ಅತಿಥಿ ಮೂಡಲಗಿ ತಾಲ್ಲೂಕು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಮಾತನಾಡಿ ವಿದ್ಯಾರ್ಥಿಗಳು ಪ್ರೌಢಾವಸ್ಥೆಯಲ್ಲಿ ಉತ್ತಮ ಆಚಾರ, ವಿಚಾರಗಳನ್ನು ಗಟ್ಟಿಗೊಳಿಸಿಕೊಂಡರೆ ಬದುಕಿನುದ್ದಕ್ಕೂ ಅವು ನಿಮ್ಮನ್ನು ಬೆಳೆಸುತ್ತವೆ ಎಂದರು.
ಡಿ.ಎಸ್. ಗಿರಡ್ಡಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಎಂ. ಭರನಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಣ ಸಂಸ್ಥೆಯಲ್ಲಿ ಸೇವಾ ನಿವೃತ್ತರಾದ ಎಸ್.ಎಸ್. ಅಂಗಡಿ, ಪ್ರಕಾಶ ಗರಗಟ್ಟಿ, ಶಿಕ್ಷಕಿ ಕಾನನನ್ನವರ, ಜೋಶಿ ಅವರನ್ನು ಸನ್ಮಾನಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್. ಗೋರೋಶಿ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಪ್ರಕಾಶ ಕುರಬೇಟ, ಸದಸ್ಯರಾದ ಡಿ.ಎಸ್. ಖೋತ, ಶಂಕರ ಕೌತನಾಳಿ, ವಿಜಯ ಕ್ಯಾಸ್ತಿ ಅತಿಥಿಯಾಗಿ ಉಪಸ್ಥಿತರಿದ್ದರು.
ವಿ.ಎಸ್. ನುಗ್ಗಾನಟ್ಟಿ ಸ್ವಾಗತಿಸಿದರು, ಅರುಣ ಅಕ್ಕಿ ನಿರೂಪಿಸಿದರು, ಎ.ಎಂ. ಮಹಿಮಗೋಳ ವಂದಿಸಿದರು.