Breaking News
Home / ಬೆಳಗಾವಿ / ಅ.26 ರಂದು ಹೇಮ-ವೇಮ ಸೊಸಾಯಿಟಿ ಉದ್ಘಾಟನೆ

ಅ.26 ರಂದು ಹೇಮ-ವೇಮ ಸೊಸಾಯಿಟಿ ಉದ್ಘಾಟನೆ

Spread the love

ಅ.26 ರಂದು ಹೇಮ-ವೇಮ ಸೊಸಾಯಿಟಿ ಉದ್ಘಾಟನೆ

ಮೂಡಲಗಿ: ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಶ್ರೀ ಹೇಮ-ವೇಮ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಉದ್ಘಾಟನಾ ಸಮಾರಂಭ ರವಿವಾರ ಅ.26ಂದು ಮುಂಜಾನೆ 9 ಗಂಟೆಗೆ ಶ್ರೀ ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ಪೂಜೆಯೊಂದಿಗೆ ಜರುಗಲಿದೆ.
ಸಮಾರಂಭದ ಸಾನ್ನಿಧ್ಯವನ್ನು ಮೂಡಲಗಿಯ ಶ್ರೀ ದತ್ತಾತ್ರಯಬೋಧ ಸ್ವಾಮಿ, ರಂಗಪೂರ-ಮುನ್ಯಾಳದ ಶ್ರೀ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಸುಣಧೋಳಿಯ ಶ್ರೀ ಶಿವಾನಂದ ಸ್ವಾಮಿಜಿ, ಶ್ರೀ ಚಿದಾನಂದ ಅಜ್ಜಾ, ಕಮಲದಿನ್ನಿಯ ಈರಪಯ್ಯಾ ಸಿದ್ರಾಮಯ್ಯ ಹಿರೇಮಠ ಶ್ರೀಗಳು ವಹಿಸುವರು. ಸೊಸಾಯಿಟಿಯ ಹಿರಿಯ ನಿರ್ದೇಶಕ ಬಿ.ಎಚ್.ರಡ್ಡಿ ಅಧ್ಯಕ್ಷತೆ ವಹಿಸುವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು ಎಂದು ಸೊಸಾಯಿಟಿಯ ಆಡಳಿತ ಮಂಡಳಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಹಿರೇಮಠರಿಗೆ ಪಿಎಚ್‌ಡಿ ಪದವಿ

Spread the loveಹಿರೇಮಠರಿಗೆ ಪಿಎಚ್‌ಡಿ ಪದವಿ ಮೂಡಲಗಿ: ಇಲ್ಲಿನ ಶ್ರೀನಿವಾಸ ಸಿಬಿಎಸ್‌ಸಿ ಶಾಲೆಯ ಹಿಂದಿ ಶಿಕ್ಷಕ ಹಾಗೂ ಹಿಂದಿ ವಿಭಾಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ