ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಸೋಮವಾರ ಅ.27 ಮತ್ತು ಮಂಗಳವಾರ ಅ.28ರಂದು ಸಂಭ್ರಮದಿಂದ ನಡೆಯಿತು.
ಸೋಮವಾರ ಅ.27 ರಂದು ಬೆಳಗ್ಗೆ, ಸಂಜೆ 6ಗಂಟೆಗೆ ಇಲ್ಲಿಯ ಲಕ್ಷ್ಮೀದೇವಿಯ ಗದ್ಗುಗೆಗೆ ಪೂಜೆ, ನೈವೇದ್ಯ ಸಮರ್ಪಿಸುವ, ದೇವರನ್ನು ಗದ್ಗುಗೆಗೊಳಿಸುವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಂಗಳವಾರ ಅ.28ರಂದು ಬೆಳಗ್ಗೆ 6ಗಂಟೆಗೆ ಲಕ್ಷ್ಮೀದೇವಿಯ ಗದ್ಗುಗೆಗೆ ಮಹಾಪೂಜೆ, ಮಹಾಭಿಷೇಕ, ನೈವೇದ್ಯ ಸಮರ್ಪಿಸುವ, ಲಕ್ಷ್ಮೀದೇವಿಯ ಆರಾಧನೆ, ಸುಮಂಗಲೆಯರಿಂದ ಶ್ರೀದೇವಿಗೆ ಉಡಿ ತುಂಬುವುದು, ವಿಶೇಷ ಪೂಜೆ, ದೀಪೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪುರ ಜನರಿಂದ ನಡೆದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಿ, ಮಹಾಪ್ರಸಾದದ ನಂತರ ಜಾತ್ರಾಮಹೋತ್ಸವ ಸಂಪನ್ನಗೊಂಡಿತು.
ಜಾತ್ರಾಮಹೋತ್ಸವ ಆಚರಣಾ ಸಮಿತಿ ಸಂಚಾಲಕ ರಾಮಣ್ಣ ಬಳಿಗಾರ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಬಸವರಾಜ ಪಣದಿ, ಲಕ್ಷ್ಮಣ ಚಂದರಗಿ, ಭರಮಪ್ಪ ಪೂಜೇರಿ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಲಕ್ಷ್ಮೀದೇವಿ ದೇವರ ಜಾತ್ರಾಮಹೋತ್ಸವ ಸಮಿತಿ ಸದಸ್ಯರು, ಅಪಾರ ಭಕ್ತರು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
IN MUDALGI Latest Kannada News