ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಮುಖ್ಯೋಪಾಧ್ಯಯರು ಸ್ಥಳೀಯ ಗ್ರಾಮ ಪಂಚಾಯತ ಗ್ರಂಥಾಲಯ ಮತ್ತು ಅರಿವು ಕೇಂದ್ರಕ್ಕೆ ಶಾಲಾ ಮಕ್ಕಳ ಓದಿಗೆ ಪ್ರಸಕ್ತ ವರ್ಷದ 6 ಮತ್ತು 7 ನೇ ತರಗತಿಯ ಪಠ್ಯ ಪುಸ್ತಕಗಳನ್ನು ನ.4 ರಂದು ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರಿಗೆ ಉಚಿತವಾಗಿ ನೀಡಿದರು.
ಈ ವೇಳೆ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯೋಪಾಧ್ಯಯ ಸಿದ್ದಪ್ಪ ಸನದಿ ಮಾತನಾಡಿ, ಇಲ್ಲಿಯ ಶಾಲಾ ಮಕ್ಕಳ ಮತ್ತು ಯುವಕರ ಓದಿಗೆ ಮತ್ತು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಇಲ್ಲಿಯ ಗ್ರಂಥಾಲಯ ಮತ್ತು ಅರಿವು ಕೇಂದ್ರ ಸಹಕಾರಿಯಾಗಿದೆ ಎಂದರು.
ಉಭಯ ಶಾಲೆಯ ಮುಖ್ಯೋಪಾಧ್ಯರಾದ ಎಸ್.ಬಿ. ಸನದಿ, ವೈ.ಸಿ. ಶೀಗಿಹಳ್ಳಿ, ಗ್ರಾಪಂ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ವಿಶ್ವನಾಥ ಶೀಗಿಹಳ್ಳಿ ಸೇರಿದಂತೆ ಸ್ಥಳೀಯರು ಇದ್ದರು.
IN MUDALGI Latest Kannada News