ಬೆಟಗೇರಿ:ಕನಕದಾಸರು ಒಬ್ಬ ಕವಿಯಾಗಿ ಬೆಳೆದು, ಸಮಾಜ ಸುಧಾರಕನಾಗಿ, ಸಂತನಾಗಿ ಶಾಶ್ವತವಾಗಿ ಉಳಿದವರು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕನಕದಾಸÀ ಅಭಿಮಾನಿ ಬಳಗದ ಸಹಯೋಗದಲ್ಲಿ ನ.8ರಂದು ನಡೆದ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕನಕದಾಸರು ಕೇವಲ ವ್ಯಕ್ತಿಯಲ್ಲ, ಶೋಷಿತರ ಅತಿ ದೊಡ್ಡ ಧ್ವನಿ. ಹಲವು ಸ್ತರಗಳಲ್ಲಿ ಕನಕದಾಸರ ಸಾಧನೆ ಸ್ಮರಣೀಯವಾಗಿದೆ ಎಂದರು.
ಸ್ಥಳೀಯ ಸುರೇಶ ವಡೇರ ಸಾನಿಧ್ಯ ವಹಿಸಿ ಕನಕದಾಸರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ನೆರವೇರಿಸಿದರು. ಸ್ಥಳೀಯ ಬೀರಸಿದ್ದೇಶ್ವರ ದೇವರ ಮಹಾದ್ವಾರ ಮುಂದೆ ಕೇಸರಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಯುವ ಮುಖಂಡರಾದ ಹನುಮಂತ ವಡೇರ, ಲಕ್ಕಪ್ಪ ಚಂದರಗಿ, ಸುಭಾಷ ಕರೆಣ್ಣವರ, ಬೀರಪ್ಪ ಕುರಬೇಟ, ಮುತ್ತೆಪ್ಪ ಕುರಬರ, ಈರಣ್ಣ ಬಳಿಗಾರ, ಪ್ರಕಾಶ ಗುಡದಾರ, ರಾಮಣ್ಣ ನೀಲಣ್ಣವರ, ಹನುಮಂತ ವಗ್ಗರ, ಸುರೇಶ ಬಾಣಸಿ, ಗುರು ಚಂದರಗಿ, ಭೀಮಶೆಪ್ಪ ಹೊಂಗಲ, ಮಹಾದೇವ ತಪಸಿ, ವಿಠಲ ಚಂದರಗಿ, ಶಿವಪ್ಪ ಐದುಡ್ಡಿ, ಸ್ಥಳೀಯ ಕನಕಶ್ರೀ ವಿವಿಧ ಉದ್ಧೇಶಗಳ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಕನಕದಾಸÀ ಅಭಿಮಾನಿ ಬಳಗದ ಸದಸ್ಯರು, ಗಣ್ಯರು, ಯುವಕರು, ಇತರರು ಇದ್ದರು.
IN MUDALGI Latest Kannada News