ಮೂಡಲಗಿ: ನಗರದ ವಿವಿಧ ಭಾಗಗಳಲ್ಲಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇಲ್ಲಿನ ಗಾಂಧಿ ಚೌಕದ ಮಕ್ಕಳು ಕಾಮಣ್ಣನ ದಹನ ಮಾಡಿ ಸಂಭ್ರಮಿಸಿದರು.
ದುಷ್ಟ ಶಕ್ತಿ ನಿಗ್ರಹ ಹಾಗೂ ಶಿಷ್ಟಜನರ ಉದ್ದಾರ, ಗ್ರಾಮದಲ್ಲಿ ಮಳೆ ಬೆಳೆ ಸಮೃದ್ಧಿಗಾಗಿ ಹಲವು ವರ್ಷಗಳಿಂದ ನಿಂಗಪ್ಪಾ ಶಿವಬಸಪ್ಪಾ ಪೂಜೇರಿ (ಗಸ್ತಿ ) ವಂಶದ ಮಕ್ಕಳು ಹಾಗೂ ಗಾಂಧಿ ಚೌಕ ಮಕ್ಕಳು ಹಾಗೂ ಗ್ರಾಮದ ಹಿರಿಯರು ಈ ಕಾಮಣ್ಣ ದಹನ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ.
ಮನೆ ಮನೆಗೆ ಹೋಗಿ ದೇಣಿಗೆ ಸಂಗ್ರಹಿಸಿ ಕಟ್ಟಿಗೆ ಬೆರಣಿಯನ್ನು ಗ್ರಾಮದ ಮುಖ್ಯದ್ವಾರದ ಕುರುವಿನ ಕಲ್ಲಿನ ಬಳಿ ಒಟ್ಟುಗೂಡಿಸಿ ಆಳೆತ್ತರದ ಕಾಮಣ್ಣನ ಪ್ರತಿಕೃತಿ ನಿರ್ಮಿಸಿ ಪೂಜಿಸಿ ಬೆಂಕಿ ಹಚ್ಚಿದರು.
ವರದಿ : ಈಶ್ವರ ಢವಳೇಶ್ವರ
ಮೂಡಲಗಿ