Breaking News
Home / ತಾಲ್ಲೂಕು / ಸಡಗರ ಹೋಳಿ ಹಬ್ಬ ಆಚರಣೆ

ಸಡಗರ ಹೋಳಿ ಹಬ್ಬ ಆಚರಣೆ

Spread the love

ಸಡಗರ ಹೋಳಿ ಹಬ್ಬ ಆಚರಣೆ*

ಮೂಡಲಗಿ : ಪಟ್ಟಣದಲ್ಲಿ ಮಂಗಳವಾರರಂದು ಕರುನಾಡ ಸೈನಿಕ ತರಬೇತಿ ಕೇಂದ್ರದ ನೂತನ ದೈಹಿಕ ತರಬೇತಿ ಮೈದಾನದಲ್ಲಿ ಹೋಳಿ ಹಬ್ಬವನ್ನು ಪರಸ್ಪರ ಬಣ್ಣ ಎರಚಿ ಸಡಗರ ಸಂಭ್ರಮದಿಂದ ಆಚರಿಸಿದರು.

ಸಂಭ್ರಮಾಚರಣೆಲ್ಲಿ
ಪಿ ಎಸ್ ಐ ಮಲ್ಲಿಕಾರ್ಜುನ ಸಿಂಧೂರ ಆಗಮಿಸಿ ಶಿಬಿರಾಥಿ೯ಗಳನ್ನು ಉದ್ದೇಶಿಸಿ ಮಾತನಾಡಿ ಹಾನಿಕಾರಕ ರಾಸಾಯನಿಯುಕ್ತ ಬಣ್ಣ ಉಪಯೋಗಿಸದೆ ಒಣ ಬಣ್ಣ ಮಾತ್ರ ಹಚ್ಚಿ ಹಬ್ಬವನ್ನು
ಶಾಂತಿಯುತವಾಗಿ ಆಚರಿಸಲು ಹೇಳಿ ಹಬ್ಬದ ಶುಭಾಶಯ ಹೇಳಿದರು.

ಪ್ರೋ : ಸಂಜಯ ಖೋತ ಮಾತನಾಡಿ , ಹಬ್ಬ, ಹರಿದಿನಗಳು ನಾಡಿನ ಸಂಸ್ಕೃತಿಗಳನ್ನು ಬಿಂಬಿಸುತ್ತವೆ ನಿತ್ಯದ ಜಂಜಾಟಿನ ಬದುಕಿನಲ್ಲಿ ಕೊಂಚವಾದರೂ ನೆಮ್ಮದಿಯ ಜೀವನಕ್ಕೆ ಹಬ್ಬಗಳನ್ನು ನಮ್ಮ ಪೂವ೯ಜರು ಮಾಡಿದ್ದಾರೆ ಆದರಿಂದ ಎಲ್ಲರೂ ಒಟ್ಟುಗೂಡಿ ಇಂತಹ ಹಬ್ಬಗಳನ್ನು ನಾವೆಲ್ಲ ಸಹಬಾಳ್ವೆಯಿಂದ ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.

ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ ಮಾತನಾಡಿ , ಈಗ ಪರೀಕ್ಷಾ ಸಮಯವಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾವ೯ಜನಿಕರಿಗೆ ತೊಂದರೆಯಾಗದಂತೆ ಈ ಮೈದಾನದಲ್ಲಿ ಹಬ್ಬ ಆಚರಿಸುತ್ತಿರುವುದು ಸಂತಷಕರ ಸಂಗತಿಯಾಗಿದೆ ಎಂದರು.

ತಾಲೂಕು ಕ. ಸಾ. ಪ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಹಬ್ಬದ ಶುಭಾಶಯ ಕೋರಿ, ನಗರದಲ್ಲಿ ಜರಗುವ ಪ್ರಥಮ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ ಸಮೀಪಿಸುತ್ತಿದ್ದು ನಗರ ಅಂದವಾಗಿಡಲು ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಸಲಹೆ ನೀಡಿ ಪ್ರತಿಯೊಬ್ಬರು ಈ ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳವನ್ನು ಯಶಸ್ವಿಗೊಳಿಸಲು ವಿನಂತಿಸಿದರು .

ತರಬೇತಿ ಕೇಂದ್ರದ ಸಂಚಾಲಕ ಶಂಕರ ತುಕ್ಕನ್ನವರ ಯಾರಿಗೂ ಯಾವುದೇ ರೀತಿಯ ತೊಂದರೆಗಳಾಗದಂತೆ ಪ್ರಶಿಕ್ಷಣಾಥಿ೯ಗಳಿಗೆ ಹುರಿಬುಂದಿಸಲು ಹಬ್ಬದ ಆಚರಣೆಯ ಜೋತೆಗೆ ವಿವಿಧ ಬಗೆಯ ಮನರಂಜನೆಯ ಕಾಯ೯ಕ್ರಮಮವನ್ನು ಆಯೋಜಿಸಿದ್ದರು.

ವರದಿ : ಈಶ್ವರ ಢವಳೇಶ್ವರ
ಮೂಡಲಗಿ


Spread the love

About inmudalgi

Check Also

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Spread the loveಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ