ಬೆಟಗೇರಿ: ಡಾ. ಬಿ.ಆರ್.ಅಂಬೇಡ್ಕರ್ ಅವರು ಕಾರ್ಮಿಕ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಹೋರಾಡಿದರು. ಅಂಬೇಡ್ಕರ ಅವರು ಸರಕಾರದ ಕಾರ್ಮಿಕ ನೀತಿಗೆ ಭದ್ರ ಬುನಾದಿ ಹಾಕಿದವರು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಡಿ.6ರಂದು ನಡೆದ ಡಾ. ಬಿ.ಆರ್.ಅಂಬೇಡ್ಕರ ಅವರ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳು ನಮಗೆ ದಾರಿದೀಪವಾಗಿವೆ ಎಂದರು.
ಬೆಟಗೇರಿ ಗ್ರಾಪಂ ಕಾರ್ಯದರ್ಶಿ ಮಾರುತಿ ತಳವಾರ ಡಾ.ಬಿ.ಆರ್.ಅಂಬೇಡ್ಕರ ಅವರ ಬದುಕಿನ ಮತ್ತು ಮಹಾಪರಿನಿರ್ವಾಣ ದಿನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಸಮರ್ಪನೆ ಕಾರ್ಯಕ್ರಮ ನಡೆಯಿತು.
ಸುರೇಶ ಬಾಣಸಿ, ಮಂಜುನಾಥ ಕಂಬಿ, ಮೆಳೆಪ್ಪ ಹರಿಜನ, ಅರ್ಜುನ ಬೆಟಗೇರಿ, ಶಿವಪ್ಪ ಐದುಡ್ಡಿ, ಈರಪ್ಪ ದಂಡಿನ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿ, ಡಾ.ಬಿ.ಆರ್.ಅಂಬೇಡ್ಕರ ಅಭಿಮಾನಿಗಳು, ಮತ್ತೀತರರು ಇದ್ದರು.
IN MUDALGI Latest Kannada News