
ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಕ್ಲಬ್ ಪರಿವಾರದ ಸಹಯೋಗದಲ್ಲಿ ಭಾನುವಾರ ಮಗುವಿಗೆ ಪೊಲಿಯೋ ಹನಿ ಹಾಕುವ ಮೂಲಕ ಪಲ್ಸ್ ಪೊಲಿಯೋ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
‘ಮಗುವಿಗೆ ಪೊಲಿಯೋ ಹನಿ ಹಾಕಿ, ತಾಯಿಗೆ ಗುಲಾಬಿ ನೀಡಿ ಗೌರವ’
ಮೂಡಲಗಿ: ಮಗುವಿಗೆ ಪಲ್ಸ್ ಪೊಲಿಯೋ ಹನಿ ಹಾಕಿ ಮಗುವಿನ ತಾಯಿಗೆ ಗುಲಾಬಿ ಹೂವು ನೀಡಿ ತಾಯಿಯನ್ನು ಅಭಿನಂದಿಸುವ ಮೂಲಕ ಮೂಡಲಗಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರಿಯ ಪಲ್ಸ್ ಪೊಲಿಯೋ ಹನಿ ಹಾಕುವ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿದ್ದು ವಿಶೇಷವಾಗಿ ಗಮನಸೆಳೆಯಿತು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ ಭಾರತಿ ಕೋಣಿ ಮಾತನಾಡಿ ‘ನಿರೋಗಿಯಾದ ಹಾಗೂ ಸದೃಢ ಭಾರತ ದೇಶದ ನಿರ್ಮಾಣಕ್ಕೆ ಕಡ್ಡಾಯವಾಗಿ 5 ವರ್ಷದ ಒಳಗಿನ ಪ್ರತಿ ಮಗುವಿಗೆ ಪಲ್ಸ್ ಪೊಲಿಯೋ ಹನಿಯನ್ನು ಹಾಕಿಸಿಕೊಳ್ಳಬೇಕು’ ಎಂದರು.
ಪಟ್ಟಣ ಪಟ್ಟಣ ವ್ಯಾಪ್ತಿಯ ಹಾಗೂ ಗುರ್ಲಾಪುರ ಗ್ರಾಮ ಸೇರಿ ಒಟ್ಟು 19 ಪೊಲಿಯೋ ಲಸಿಕೆ ನೀಡುವ ಬೂತ್‍ಗಳನ್ನು ಸ್ಥಾಪಿಸಲಾಗಿದೆ. 4389 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ. ಡಿ. 22ರಿಂದ 24ರ ವರೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಮನೆ, ಮನೆಗೆ ತೆರಳಿ ಪೊಲಿಯೋ ಹನಿ ಹಾಕುವ ಮೂಲಕ ಯೋಜನೆಯನ್ನು ಯಶಸ್ಸಿಗೊಳಿಸಲಾಗುವುದು ಎಂದರು.
ಲಯನ್ಸ್ ಕ್ಲಬ್ ಸದಸ್ಯ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಅಭಿಯಾನ ಯಶಸ್ಸಿಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಮುದಾಯ ಜನ, ಸಂಘ, ಸಂಸ್ಥೆಯವರ ಸಹಕಾರ ನೀಡುವುದು ಅವಶ್ಯವಿದೆ ಎಂದರು.
ಲಯನ್ಸ್ ಮೂಡಲಗಿ ಪರಿವಾರ ಅಧ್ಯಕ್ಷ ವಿಶಾಲ ಶೀಲವಂತ, ಕಾರ್ಯದರ್ಶಿ ಗಿರೀಶ ಆಸಂಗಿ, ಖಜಾಂಚಿ ಡಾ. ಪ್ರಶಾಂತ ಬಬಣ್ಣವರ, ಸಂಜಯ ಮೋಕಾಶಿ, ಕೃಷ್ಣಾ ಕೆಂಪಸತ್ತಿ, ಡಾ. ಯಲ್ಲಾಲಿಂಗ ಮುಳವಾಡ, ಶಿವಬೋಧ ಯರಝರ್ವಿ, ಸೋಮು ಹಿರೇಮಠ, ವೈದ್ಯರಾದ ವಿಶ್ವನಾಥ ಹುದ್ದಾರ, ಈರಪ್ಪ ಕವಣಿ, ಶಿವು ಹೊಸೂರ, ಶಿವಲಿಂಗ ಪಾಟೀಲ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.
IN MUDALGI Latest Kannada News