Breaking News
Home / ಬೆಳಗಾವಿ / ರಾಜ್ಯದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ: ಮಂಗಳೂರು ಎ.ಆರ್.ಓ ಅಗ್ನಿವೀರ ಉಚಿತ ಫಿಸಿಕಲ್ ತರಬೇತಿ

ರಾಜ್ಯದ ಅಭ್ಯರ್ಥಿಗಳಿಗೆ ಸುವರ್ಣಾವಕಾಶ: ಮಂಗಳೂರು ಎ.ಆರ್.ಓ ಅಗ್ನಿವೀರ ಉಚಿತ ಫಿಸಿಕಲ್ ತರಬೇತಿ

Spread the love

ಮೂಡಲಗಿ: ಮುಂದೆ ನಡೆಯಲಿರುವ ಮಂಗಳೂರು ಎ.ಆರ್.ಓ. ಅಗ್ನಿವೀರ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲಿರುವ ಅಭ್ಯರ್ಥಿಗಳಿಗೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಸಿ.ಬಿ.ಟಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಭಾವಿ ಅಗ್ನಿವೀರರಿಗೆ ಉಚಿತ ದೈಹಿಕ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ.

ಸರ್ಕಾರದಿಂದ ಮಾನ್ಯತೆ ಪಡೆದು ಯಶಸ್ವಿಯಾಗಿ 22 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಅಕಾಡೆಮಿಯಿಂದ ಇತ್ತೀಚೆಗೆ ನಡೆದ ಬೆಳಗಾವಿ ಎ.ಆರ್.ಓ. ದ ನೇಮಕಾತಿಯಲ್ಲಿ 78 ಅಭ್ಯರ್ಥಿಗಳು ಸೇನೆಗೆ ಆಯ್ಕೆಯಾಗಿ ಕರ್ನಾಟಕದಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು ಈ ಸಂಸ್ಥೆಯಿಂದ ಸೇನೆಗೆ ಆಯ್ಕೆಯಾಗುತ್ತಾರೆ ಎಂದು ಸಾಕ್ಷಿಯಾಗಿದೆ. ಸೇನಾ ರ್ಯಾಲಿಯಲ್ಲಿ ನಡೆಯುವ 1600 ಮೀ. ಓಟ, ಫುಲ್-ಅಪ್ಸ್, ಲಾಂಗ್ ಜಂಪ್, ಜಿಗ್-ಜಾಗ್ ನಡಿಗೆ, ಮತ್ತು ವೈದ್ಯಕೀಯ ಪರೀಕ್ಷೆಗೆ ಸಂಭಂಧಪಟ್ಟ ತರಬೇತಿಯನ್ನು ನುರಿತ ಉಪನ್ಯಾಸಕರಿಂದ ತರಬೇತಿಯನ್ನು ನೀಡುತ್ತಿದ್ದು, ನೊಂದನೆಯ ಕೊನೆಯ ದಿನಾಂಕ 10 ಜನವರಿ 2026. ಮೊದಲು ಬಂದ 100 ಅಭ್ಯರ್ಥಿಗಳಿಗೆ ಮಾತ್ರ ಉಚಿತ ತರಬೇತಿಗೆ ಅವಕಾಶ ಇರುತ್ತದೆ, ಇಂದಿನಿಂದ ಪ್ರವೇಶ ಪಡೆಯಬಹುದು ಎಂದರು.
ಪ್ರವೇಶ ಪಡೆಯುವ ಅಭ್ಯರ್ಥಿಗಳು ಊಟ-ವಸತಿ, ಯುನಿಫಾರ್ಮ್ ಫೀಸ್ ಮಾತ್ರ ತುಂಬಬೇಕಾಗುತ್ತದೆ, ಕೋಚಿಂಗ್ ಫೀಸ್ ಇರುವುದಿಲ್ಲ. ಬರುವಾಗ ಅಡ್ಮಿಟ್ ಕಾರ್ಡ, 3 ಫೆÇೀಟೋ, ಎಸ್.ಎಸ್.ಎಲ್.ಸಿ. ಮಾಕ್ರ್ಸ್-ಕಾರ್ಡ್ ಝರಾಕ್ಸ್, ಆಧಾರ್ ಕಾರ್ಡ್ ಝರಾಕ್ಸ್, ಊಟ ಮಾಡಲಿಕ್ಕೆ ಒಂದು ಪ್ಲೇಟ್, ಗ್ಲಾಸ್, ಹಾಸಿಗೆ, ರನ್ನಿಂಗ್ ಶೂಸ್ ಮತ್ತೆ ತಮಗೆ ಬೇಕಾದ ಇತರೇ ವಸ್ತುಗಳನ್ನು ತಾವೇ ತರಬೇಕೆಂದು ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9886414930, 9742407690, 9482974930


Spread the love

About inmudalgi

Check Also

ತಮ್ಮ ಮಗುವಿಗೆ ತಪ್ಪದೇ ಪೋಲಿಯೊ ಹನಿ ಹಾಕಿಸಿ : ಲಕ್ಷ್ಮಣ ಚಂದರಗಿ

Spread the love ತಮ್ಮ ಮಗುವಿಗೆ ತಪ್ಪದೇ ಪೋಲಿಯೊ ಹನಿ ಹಾಕಿಸಿ : ಲಕ್ಷ್ಮಣ ಚಂದರಗಿ ಬೆಟಗೇರಿ:ನಿಮ್ಮ ಮನೆಯಲ್ಲಿರುವ ಐದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ