Breaking News
Home / ತಾಲ್ಲೂಕು / ಬಸವೇಶ್ವರ ಮೂರ್ತಿ ಪ್ರತಿಷ್ಠಾಪಣೆ  ಹಳ್ಳೂರ :

ಬಸವೇಶ್ವರ ಮೂರ್ತಿ ಪ್ರತಿಷ್ಠಾಪಣೆ  ಹಳ್ಳೂರ :

Spread the love

ಬಸವೇಶ್ವರ ಮೂರ್ತಿ ಪ್ರತಿಷ್ಠಾಪಣೆ

ಹಳ್ಳೂರ :
ನೂರಾರು ಭಕ್ತರು ಕೇಸರಿ ಬಣ್ಣ ಟೋಪಿ, ಸಾಲು ಹಾಕಿಕೊಂಡು ಜಗಜ್ಯೋತಿ ಬಸವೇಶ್ವರರ ಜಯಘೋಷದ ಮಧ್ಯೆ ಹಳ್ಳೂರ ಗ್ರಾಮದ ಬಸವೇಶ್ವರ ಸರ್ಕಲ್ ಹಾಗೂ ೯ ಪೂಟ್ ಎತ್ತರದ ಶ್ರೀ ಜಗಜ್ಯೋತಿ ಬಸವೇಶ್ವರರ ಕಂಚಿನ ಮೂರ್ತಿಯನ್ನು ಕ್ರೇನ್ ಸಹಾಯದಿಂದ ಪ್ರತಿಷ್ಠಾಪಿಸಲಾಯಿತು.


ತಾಲೂಕಿನ ಹಳ್ಳೂರ ಗ್ರಾಮದ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಬೆಳ್ಳಿ ಹಬ್ಬದ ಅಂಗವಾಗಿ ಸುಮಾರು ೯ ಲಕ್ಷ ವೆಚ್ಚದಲ್ಲಿ ಸರ್ಕಲ್ ಹಾಗೂ ಬಸವೇಶ್ವರ ಕಂಚಿನ ಮೂರ್ತಿ ನಿರ್ಮಿಸಿದ ಸೊಸೈಟಿಯೂ ಗುರುವಾರರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಡವಾಡ ಗ್ರಾಮದ ರೇವಣಸಿದ್ದೇಶ್ವರ ಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಮಾತನಾಡಿ, ಬಸವಲಿಂಗ ಪಟ್ಟದ್ದೇವರು, ಪ್ರಸ್ತುತ ದೇಶಕ್ಕೆ ಬಸವತತ್ವದ ಅವಶ್ಯಕತೆ ಇದೆ. ಬಸವಣ್ಣನವರ ತತ್ವ ಹಾಗೂ ಸಿದ್ದಾಂತಗಳ ಅನುಕರಣೆಯಿಂದ ಭ್ಯವ ಭಾರತ ನಿರ್ಮಾಣ ಸಾಧ್ಯವಿದೆ. ಸಮಾನತೆಯ ಹರಿಕಾರ ಬಸವಣ್ಣನವರ ತತ್ವಗಳನ್ನು ರಾಷ್ಟç ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಚಾರಪಡಿಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಿದೆ ಎಂದು ತಿಳಿಸಿದರು.


ಗ್ರಾಮೀಣ ಭಾಗದಲ್ಲಿ ಇರುವಂತ ಸಾಕಷ್ಟು ಸಂಸ್ಥೆಗಳು ಬೆಳೆದು ತಮ್ಮ ಗ್ರಾಮದಲ್ಲಿ ಇಂತಹ ಒಳ್ಳೆಯ ಕೆಲಸಗಳನ್ನು ಮಾಡಿದರೇ ಜನರ ಮನ ಸೆಳೆಯುವಂತಾಗುತ್ತದೆ. ಅದರಂತೆ ಬಸವೇಶ್ವರ ಸೊಸೈಟಿಯೂ ಬೆಳ್ಳಿ ಹಬ್ಬದ ಅಂಗವಾಗಿ ಗ್ರಾಮಕ್ಕೆ ಒಂದು ಉಡುಗೂರೆ ನೀಡಿರುವುದು ಗ್ರಾಮದ ಜನರಲ್ಲಿ ಸಂತಸ ತಂದಿದೆ. ಮುಂದಿನ ತಿಂಗಳಲ್ಲಿ ಈ ಬಸವೇಶ್ವರ ಸರ್ಕಲ್ ಅಂತಿಮ ರೂಪ ಪಡೆದು ಲೋಕಾರ್ಪಣೆ ಹಾಗೂ ಸೊಸೈಟಿಯು ಬೆಳ್ಳಿ ಹಬ್ಬವನ್ನು ಆಚರಿಸಲಿದೆ ಎಂದು ಹೇಳಿದರು.
ಗ್ರಾಮದಲ್ಲಿ ಎಲ್ಲ ಜನರು ತಮ್ಮ ಭೇದಭಾವ ಮರೆತು ಬಸವೇಶ್ವರ ತತ್ವದ ಪರಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಮಹಿಳೆಯರು ಆರುತಿ, ಕುಂಭ ಹಾಗೂ ಕರಡಿ ಮಜಲು, ಮಂಗಲವಾದ್ಯ ಮೇಳಗಳ ಜೊತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೂರ್ತಿ ಮೆರವಣಿಗೆ ಕಳೆ ತಂದವು. ಜನರು ಹಾಕಿರುವ ಕೇಸರಿ ಟೋಪಿ, ಸಾಲು ನೋಡುಗರಿಗೆ ಕೇಸರಿ ವಾತಾವರಣ ಕಂಗೊಳಿಸಿತ್ತಿತ್ತು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ