ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭವು ಮುಂಜಾನೆ 9 ಘಂಟೆಗೆ ಮಹಾವಿದ್ಯಾಲಯದ ಆವರಣದಲ್ಲಿ ಜರಗಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ, ಅತಿಥಿಗಳಾಗಿ ಅಂಕಲಿಯ ಕೆಎಲ್‍ಇ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕರು ಮತ್ತು ಪ್ರಖ್ಯಾತ ಸಾಹಿತಿಗಳಾದ ಡಾ. ಸುಬ್ರಾವ ಎಂಟೆತ್ತಿನವರ, ಯಮಕನಮರಡಿಯ ಸಿಇಎಸ್ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕರಾದ ಬಸವರಾಜ ಎ ಮಾನಗಾಂವಿ, ಮೂಡಲಗಿಯ ಮಹಾಲಕ್ಷ್ಮೀ ಬ್ಯಾಂಕಿನ ನಿರ್ದೇಶಕರಾದ ಮುತ್ತಪ್ಪ ಈರಪ್ಪನವರ, ಉಪಾಧ್ಯಕ್ಷರಾದ ಮಹಾದೇವ ಗೋಕಾಕ, ಕಮಲದಿನ್ನಿಯ ಮಾಜಿ ಗ್ರಾಮಪಂಚಾಯತ ಸದಸ್ಯರಾದ ರಮೇಶ ಪಾಟೀಲ, ಘಟಪ್ರಭಾದ ಕ.ವಿ.ಪ್ರ.ನಿ.ನಿ.ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ರಾದ ಸುರೇಶ ಮುರಗೋಡ, ಭಾಗವಹಿಸುವರು ಎಂದು ಕಾಲೇಜಿನ ಪ್ರಾಚಾರ್ಯರಾದ ಶಿವಾನಂದ ಸತ್ತಿಗೇರಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News