Breaking News
Home / ಬೆಳಗಾವಿ / *ಡೊಳ್ಳಿನ ಪದಗಳು ಜಾನಪದ ಸಂಸ್ಕೃತಿಯಲ್ಲಿ ಮೂಲ ಕಲೆ: ಪೂಜ್ಯಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಅಭಿಮತ*

*ಡೊಳ್ಳಿನ ಪದಗಳು ಜಾನಪದ ಸಂಸ್ಕೃತಿಯಲ್ಲಿ ಮೂಲ ಕಲೆ: ಪೂಜ್ಯಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಅಭಿಮತ*

Spread the love

ಮೂಡಲಗಿ : ಡೊಳ್ಳಿನ ಪದಗಳು ಮೂಲ ಸಂಸ್ಕೃತಿಯಲ್ಲಿ ಉತ್ತಮ ಕಲೆಯಾಗಿತ್ತು. ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಜಾನಪದ ಸಂಸ್ಕೃತಿ ಅಗತ್ಯ ಎಂದು ಸಿದ್ಧಶ್ರೀ ಸಿದ್ಧಾಶ್ರಮ ಕವಲಗುಡ್ಡ – ಹಣಮಾಪುರ ಮಠದ ಶ್ರೀ ಸಿದ್ಧಿಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.

ಅವರು ಇತಿಚಿಗೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಶ್ರೀ ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಶ್ರೀ ಇಟ್ಟಪ್ಪ ದೇವರ ಅಭಿವೃದ್ಧಿ ಸೇವಾ ಸಮಿತಿ ಮತ್ತು ಮಹಾಲಕ್ಷ್ಮಿ ದೇವಿ ಡೊಳ್ಳು ಕುಣಿತ ಕಲಾ ಸಂಘ ಹಳ್ಳೂರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಶ್ರೀ ಇಟ್ಟಪ್ಪ ದೇವರ ಜಾತ್ರಾ ಮಹೋತ್ಸವ ಹಾಗೂ ರಾಜ್ಯ ಮಟ್ಟದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಶ್ರೀಮಠದ ಶಿಷ್ಯ ಸಿದ್ದಣ್ಣ ದುರದಂಡಿ ನಿರಂತರವಾಗಿ ಕಾಯಕ ಮಾಡುವದು ಹಾಗೂ ಅವರ ಸಾಮಾಜಿಕ ಮತ್ತು ಕಲಾವಿದರ ಸಂಘಟನೆ ಸೇವೆ ಹೀಗೆ ಮುಂದುವರಿಯಲಿ ಎಂದು ಶ್ರೀಮಠದಿಂದ ಶುಭ ಹಾರೈಸುತ್ತೇವೆ.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣಾ ದುರದುಂಡಿ ಮಾತನಾಡುತಾ ಯುವ ಸಮೂಹಕ್ಕೆ ಜಾನಪದ ಕಲೆ, ಸಾಹಿತ್ಯ, ಸಂಗೀತದ ಬಗ್ಗೆ ಅರಿವು ಮೂಡಿಸಬೇಕಿದೆ. ಎಲ್ಲ ಸಾಹಿತ್ಯಗಳ ಮೂಲ ಬೇರು ಜಾನಪದ ಆಗಿದೆ ಹಾಗೂ ನಮ್ಮ ಭಾಗದ ಶಾಸಕರಾದ ಬಾಲಚಂದ್ರ ಅಣ್ಣಾ ಜಾರಕಿಹೊಳಿ ಅವರ ಸಹಕಾರದಿಂದ ಎಲ್ಲಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತವೆ ಎಂದು ಹೇಳಿದರು.

ಬಾಗಲಕೋಟೆ ಸಂಗೊಳ್ಳಿ ರಾಯಣ್ಣ ಪಡೆಯ ಅಧ್ಯಕ್ಷರಾದ ಭರಮು ಪೂಜಾರಿ ಮಾತನಾಡಿ ಜಾನಪದವೇ ಜೀವನ. ಜಾನಪದ ಸಂಸ್ಕೃತಿ, ಕಲೆ, ಸಂಗೀತವನ್ನು ಹೊರತುಪಡಿಸಿ ಜೀವನವಿಲ್ಲ. ಯುವ ಪೀಳಿಗೆ ಜಾನಪದ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದರು. ಜಾನಪದ ನೃತ್ಯ ಕಲಾ ತಂಡಗಳು, ಭಜನಾ ತಂಡಗಳು, ಡೊಳ್ಳಿನ ಪದ ತಂಡಗಳು, ಭಾವಗೀತೆ ರಂಗಗೀತೆ, ಜನಪದ ಗೀತೆ, ಭಕ್ತಿ ಗೀತೆ ಕಲಾ ತಂಡಗಳು ಹಾಗೂ ಮುಜುಕಲ್ ಬ್ರಾಂಡ್ ಕಂಪನಿ ತಂಡ, ಡೊಳ್ಳು ಕುಣಿತ, ಸಿದ್ದಿ ಕುಣಿತ ಕಲಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರಗೂ ತಂದವು.

ಕಾರ್ಯಕ್ರಮದ ವೇದಿಕೆಯ ಮೇಲೆ ಹಳ್ಳೂರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೀಲವ್ವಾ ಹೊಸಟ್ಟಿ, ಉಪಾಧ್ಯಕ್ಷರಾದ ಜಯಶ್ರೀ ಮಿರ್ಜಿ, ಸವಿತಾ ಡಬ್ಬಣ್ಣವರ, ಹಣಮಂತ ತೇರದಾಳ, ಕುಮಾರ ಲೋಕಣ್ಣವ್ವರ, ಸುರೇಶ ಕತ್ತಿ, ವಿವೇಕ್ ಮಗದುಮ್, ಬಸಪ್ಪ ದುರದುಂಡಿ, ಶ್ರೀಕಾಂತ ದುರದುಂಡಿ, ವಿಜಯ ಜಂಬಗಿ, ನವಲಪ್ಪ ಮಗದುಮ್, ಭೀಮಶಿ ಹೊಸಟ್ಟಿ, ಶಾಂತಯ್ಯ ಹಿರೇಮಠ, ಕೆಂಚಪ್ಪ ಉದಗಟ್ಟಿ, ಮಲ್ಲಪ್ಪ ಹೊಸಟ್ಟಿ, ಸತ್ತೆಪ್ಪ ಕದ್ದಿ, ಅರ್ಜುನ್ ಬೈಲಾಡಿ, ಜ್ಞಾನದೇವ ಪೂಜೇರಿ ಯಲ್ಲಾಲಿಂಗ ವಾಳದ ಹಾಗೂ ಗುರು ಹಿರಿಯರು ಕಮಿಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸದಾಶಿವ ದುರದುಂಡಿ ಸ್ವಾಗತಿಸಿದರು. ಮಾಯಕ್ಕ ದುರದುಂಡಿ ನಿರೂಪಿಸಿದರು. ಹನುಮಂತ ಮದಣ್ಣವರ ವಂದಿಸಿದರು.


Spread the love

About inmudalgi

Check Also

ಫೇ.1 ರಂದು ಮೂಡಲಗಿ ತಾಲೂಕಾ ದ್ವಿ-ಚಕ್ರ ವಾಹನಗಳ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

Spread the loveಮೂಡಲಗಿ: ಪಟ್ಟಣದಲ್ಲಿ ನೂತನವಾಗಿ ಆಸ್ತಿತ್ವಕ್ಕೆ ಬಂದ ಮೂಡಲಗಿ ತಾಲೂಕಾ ದ್ವಿ-ಚಕ್ರ ವಾಹನಗಳ ದುರಸ್ತಿಗಾರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ