Breaking News
Home / ಬೆಳಗಾವಿ / ‘ರಾಮಚಂದ್ರಪ್ಪ ಮುಕ್ಕಣ್ಣವರ ಅಪ್ರತಿಮ ಭಜನಾ ಕಲಾವಿದ’- ಮಲ್ಲಯ್ಯ ಸ್ವಾಮೀಜಿ

‘ರಾಮಚಂದ್ರಪ್ಪ ಮುಕ್ಕಣ್ಣವರ ಅಪ್ರತಿಮ ಭಜನಾ ಕಲಾವಿದ’- ಮಲ್ಲಯ್ಯ ಸ್ವಾಮೀಜಿ

Spread the love

‘ರಾಮಚಂದ್ರಪ್ಪ ಮುಕ್ಕಣ್ಣವರ ಅಪ್ರತಿಮ ಭಜನಾ ಕಲಾವಿದ’- ಮಲ್ಲಯ್ಯ ಸ್ವಾಮೀಜಿ

ಮೂಡಲಗಿ: ‘ಭಜನಾ ಕಲಾವಿದ ರಾಮಚಂದ್ರಪ್ಪ
ಮುಕ್ಕಣ್ಣವರ ಸಂಗೀತ, ಭಜನೆಯಲ್ಲಿ ತಮ್ಮ ಬದುಕನ್ನು ಕಂಡುಕೊಂಡಿದ್ದರು’ ಎಂದು ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗುಜನಟ್ಟಿ ಗ್ರಾಮದಲ್ಲಿ ನಿಂಗಮ್ಮ ದೇವಸ್ಥಾನದ ಆವರಣದಲ್ಲಿ ಕಲಾವಿದರು ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಭಜನಾ ರತ್ನ ದಿ.ರಾಮಚಂದ್ರಪ್ಪ ಮುಕ್ಕಣ್ಣವರ ಅವರ 12ನೇ ವರ್ಷದ ಪುಣ್ಯಸ್ಮರಣೆ ಹಾಗೂ ಗುಜನಟ್ಟಿ ಗಾಯನ ವೈಭವ ಕಾರ್ಯಕ್ರಮದ
ಸಾನ್ನಿಧ್ಯವಹಿಸಿ ಮಾತನಾಡಿದ ಅವರು ನಿಜಗುಣ
ಶಿವಯೋಗಿಗಳು, ಸರ್ಪಭೂಷಣರು, ಮಹಾಲಿಂಗರ
ತತ್ವಪದಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಕೇಳುಗರೆಲ್ಲ
ಮಂತ್ರಮುಗ್ದರಾಗುತ್ತಿದ್ದರು. ಅವರೊಪ್ಪ ಅಪ್ರತಿಮ ಕಲಾವಿದರಾಗಿದ್ದರು ಎಂದರು.
ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ
ಮಾತನಾಡಿ ಸಂಗೀತವು ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು ತಂದುಕೊಡುತ್ತದೆ. ಭಜನಾ ಕಲಾವಿದ ರಾಮಚಂದ್ರ ಮುಕ್ಕಣ್ಣವರ ಅವರ ಕಲಾ ಸೇವೆಯು ಅಪ್ರತಿಮವಾಗಿದೆ ಎಂದರು.
ತುಳಸಿಗೇರಿಯ ರಾಮಾನಂದ ಸ್ವಾಮೀಜಿ,ಬೀದರವಳ್ಳಿಯ ಅಜೀತ ಗುರುಗಳು ಮಾತನಾಡಿದರು.
ಸಿದ್ಧಾರೂಢ ಮುಕ್ಕಣ್ಣವರ, ತುಕಾರಾಮ ಮುಕ್ಕಣ್ಣವರ, ಎಂ.ಆರ್. ನಡುವಿನಮನಿ, ನಿಂಗಪ್ಪ ಹಣಮನ್ನವರ, ನಿಂಗಪ್ಪ ಮುಕ್ಕಣ್ಣವರ ಇದ್ದರು.
ಶಂಭು ಮುಕ್ಕಣ್ಣವರ ಸ್ವಾಗತಿಸಿದರು, ಬಸವರಾಜ
ದಿನ್ನಿಮನಿ ನಿರೂಪಿಸಿದರು.
ವಿವಿಧೆಡೆಯಿಂದ ಬಂದಿದ್ದ ಕಲಾ ತಂಡಗಳು ಭಜನಾ
ಮತ್ತು ಸಂಗೀತ ಸೇವೆ ಮಾಡಿದರು.


Spread the love

About inmudalgi

Check Also

ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ರೈಲು ನಿಲ್ದಾಣಕ್ಕೆ ನಿಲುಗಡೆ ಮಾಡುವಂತೆ ಮನವಿ – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

Spread the love ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ