Breaking News
Home / ಬೆಳಗಾವಿ / *ಗ್ರಾಮೀಣ ಕ್ರೀಡಾ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಬೆಳೆಯಲಿ- ಸರ್ವೋತ್ತಮ ಜಾರಕಿಹೊಳಿ*

*ಗ್ರಾಮೀಣ ಕ್ರೀಡಾ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಬೆಳೆಯಲಿ- ಸರ್ವೋತ್ತಮ ಜಾರಕಿಹೊಳಿ*

Spread the love

ಮೂಡಲಗಿ : ಗ್ರಾಮೀಣ ಮಟ್ಟದಲ್ಲಿ ಯುವಕ ಸಂಘಗಳು ಆಯೋಜಿಸುವ ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವುದಲ್ಲದೆ, ಗ್ರಾಮೀಣ ಜನರಿಗೆ ಉಲ್ಲಾಸದಾಯಕ ವಾತಾವರಣ ಕಲ್ಪಿಸಿಕೊಡುತ್ತವೆ ಎಂದು ಕರ್ನಾಟಕ ರಾಜ್ಯ ವಾಲಿಬಾಲ್ ಅಸೊಸಿಯೇಷನ್ ಉಪಾಧ್ಯಕ್ಷರಾದ ಸರ್ವೋತ್ತಮ್ ಜಾರಕಿಹೊಳಿ ಹೇಳಿದರು.

ಅವರು ಮೂಡಲಗಿ ನಗರದ ಶ್ರೀ ಎಲ್ ವಾಯ್ ಆಡಿಹೂಡಿ ಶಾಲಾ ಮೈದಾನದಲ್ಲಿ ಭಾರತ ಸರ್ಕಾರದ ಮೈ ಭಾರತ ಕೇಂದ್ರ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಸಂಘ ಹಳ್ಳೂರ ಹಾಗೂ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ, ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಯುವಕ ಸಂಘಗಳಿರುವಲ್ಲಿ ಉತ್ಸಾಹಿ ಯುವತಿ ಮಂಡಳಿ ಇದ್ದರೆ ಅಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ ಹಾಗೂ ನಮ್ಮ ಗ್ರಾಮೀಣ ಕ್ರೀಡಾಪಟುಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ ಎಂದರು.


ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ಕ್ರೀಡಾ ಪಟುಗಳಿಗೆ ಸೋಲು ಗೆಲುವು ಒಂದು ನಾನ್ಯದ ಮುಖಗಳಿದಂತೆ ಸೋತವರು ಕುಗ್ಗದೆ ಗೆದ್ದವರು ಹಿಗ್ಗದೆ ಆಟದಲ್ಲಿ ಕ್ರೀಡಾ ಮನೋಭಾವದಿಂದ ಆಟವಾಡಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎಲ್ ವಾಯ್ ಅಡಿಹುಡಿ ವಹಿಸಿ ಮಾತನಾಡಿ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಮೈ ಭಾರತ್ ಯುವ ಕೇಂದ್ರದ ಕಾರ್ಯಕ್ರಮಗಳು ನಮ್ಮ ನಮ್ಮ ಭಾಗದ ಶಾಸಕರಾದ ಬಾಲಚಂದ್ರ ಅಣ್ಣಾ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಡೆಯುತ್ತಿವೆ ಎಂದು ಹೇಳಿದರು.

ಮೈ ಭಾರತ ಯುವ ಕೇಂದ್ರದ ಎಂ ಟಿ ಎಸ್ ಮಲ್ಲಯ್ಯ ಕರಡಿ ಮಾತನಾಡಿ ಗ್ರಾಮೀಣ ಕ್ರೀಡೆಗಳು ಕಬ್ಬಡ್ಡಿ ವಾಲಿಬಾಲ್ ರನ್ನಿಂಗ್ ಗುಂಡು ಎಚ್ಚೆತ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಕ್ರೀಡಾಪಟುಗಳು ಪಡೆದುಕೊಳ್ಳಬೇಕು. ಈ ಭಾಗದಲ್ಲಿ ನಿರಂತರವಾಗಿ ಸಂಘಟನೆ ಮತ್ತು ನಿಸ್ವಾರ್ಥ ಸೇವೆ ಮಾಡುತ್ತಿರುವ ಸಿದ್ದಣ್ಣ ದುರದುಂಡಿಯವರ ಕಾರ್ಯ ನಿಜವಾಗಲೂ ಶ್ಲಾಘನಿಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಶಿಕ್ಷಣ ಪರಿಕ್ಷಕರಾದ ಎಸ್ ಬಿ ಹಳಿಗೌಡ್ರ, ಮೈ ಭಾರತ್ ಯುವ ಕೇಂದ್ರದ ಎಂ ಟಿ ಎಸ್ ಮಲ್ಲಯ್ಯ ಕರಡಿ, ಆರ್ ವಿ ಯರಗಟ್ಟಿ, ಎಚ್ ಡಿ ಪಂಚಾಳ್, ಮಹಾದೇವ ಶೇಕ್ಕಿ, ಕೇದಾರಿ ಬಸ್ಮೆ, ಕೃಷ್ಣಪ್ಪ ಗಿರೀನ್ನವರ, ಭೀಮಸಿ ತಳವಾರ್, ಗೋಪಾಲ ಗಡ್ಡೆಕಾರ, ರಾಘು ಕೆದಾರಿ, ಮಾಂತೇಶ್ ಕೊಟಬಾಗಿ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸುಭಾಸ ಗೊಡ್ಯಾಗೋಳ, ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಹಾಗೂ ಕ್ರೀಡಾಪಟುಗಳು, ಮುಂತಾದವರು ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕ ರವಿ ಕಟ್ಟಿಕಾರ್ ನಿರೂಪಿಸಿದರು. ಸಚಿನ್ ಕಾಂಬಳೆ ಸ್ವಾಗತಿಸಿದರು. ಹಣಮಂತ ಅಂಗಡಿ ವಂದಿಸಿದರು.


Spread the love

About inmudalgi

Check Also

ಫೆ.12ರಂದು ಬೆಟಗೇರಿ ಸದ್ಗುರು ಸಿದ್ಧಾರೂಢರ ಸದ್ಭಭಕ್ತರಿಂದ ಹುಬ್ಬಳ್ಳಿ ಮಠಕ್ಕೆ ಪಾದಯಾತ್ರೆ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸದ್ಗುರು ಸಿದ್ಧಾರೂಢರ ಸದ್ಭಕ್ತರು ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ