Breaking News
Home / ಬೆಳಗಾವಿ / ‘ಸಮಾಜದ ಬೆಳೆವಣಿಗೆಗೆ ಬಣಜಿಗರ ಕೊಡುಗೆ ಅಪಾರ’- ಚಿದಾನಂದ ಶೆಟ್ಟರ

‘ಸಮಾಜದ ಬೆಳೆವಣಿಗೆಗೆ ಬಣಜಿಗರ ಕೊಡುಗೆ ಅಪಾರ’- ಚಿದಾನಂದ ಶೆಟ್ಟರ

Spread the love

ಮೂಡಲಗಿ: ‘ಒಗ್ಗಟ್ಟು ಮತ್ತು ಸಂಘಟನೆಯ ಮೂಲಕ ಬಣಜಿಗ ಸಮಾಜವನ್ನು ಬೆಳೆಸುವುದು ಇಂದಿನ ಅವಶ್ಯಕತೆ ಇದೆ’ ಎಂದು ಮೂಡಲಗಿ ಬಣಜಿಗ
ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಶೆಟ್ಟರ ಹೇಳಿದರು.
ಇಲ್ಲಿಯ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಮೂಡಲಗಿ ಘಟಕದಲ್ಲಿ ಬಣಜಿಗ ಸಂಘದ 23ನೇ ಷರ್ಷದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು ನಾಡಿನ ಅನೇಕ ಸಂಘ, ಸಂಸ್ಥೆಗಳ ಸ್ಥಾಪಿಸಿ ಅವುಗಳ ಬೆಳವಣಿಗೆ, ಮಠಮಾನ್ಯಗಳ ಬೆಳವಣಿಗೆ ಹಾಗೂ ಸಮಾಜಕ್ಕೆ ಬಣಜಿಗ ಸಮಾಜದ ಕೊಡುಗೆ
ಅಪಾರವಾಗಿದೆ ಎಂದರು.
ಬಣಜಿಗ ಸಮಾಜದ ಸಂಘಟನೆ ಮತ್ತು ಬೆಳವಣಿಗೆಗೆ
ಎಲ್ಲರೂ ಕೈಜೋಡಿಸಬೇಕು. ಬರುವ ಮಾ. 8ರಂದು ಬಣಜಿಗ ಸಮಾಜದ ಮಹಿಳಾ ಘಟಕದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುವುದು ಎಂದರು.
ಪುರಸಭೆ ಮಾಜಿ ಸದಸ್ಯ ಈರಣ್ಣ ಕೊಣ್ಣೂರ ಮಾತನಾಡಿ ಕರ್ನಾಟಕ ರಾಜ್ಯಕ್ಕೆ ಈ ಹಿಂದೆ 7 ಜನ ಮುಖ್ಯಮಂತ್ರಿಗಳು ಬಣಜಿಗ ಸಮಾಜದವರಾಗಿದ್ದರು ಎನ್ನುವುದು ಹೆಮ್ಮೆಯ ಸಂಗತಿ. ಸಮಾಜದಲ್ಲಿ ಆರ್ಥಿಕ ದುರ್ಭಲರನ್ನು ಮುನ್ನೆಲೆಗೆ ತರುವುದು, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳನ್ನು ಪಡೆಯುವ ಮೂಲಕ ಸಮಾಜವನ್ನು ಬೆಳೆಸುವುದಕ್ಕಾಗಿ ಸಂಘಟನೆ ಅವಶ್ಯವಿದೆ ಎಂದರು.
ಭಾರತೀಯ ಆಹಾರ ನಿಗಮದ ಸಲಹಾ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಮಸಗುಪ್ಪಿಯ ಬಸವರಾಜ ಗಾಡವಿ, ಮೂಡಲಗಿ ತಾಲ್ಲೂಕು ದಸ್ತ ಬರಹಗಾರರು (ಬಾಂಡ್ ರೈಟರ್) ಸಂಘಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಲಿಂಗಪ್ಪ ಗಾಡವಿ ಅವರನ್ನು ಸನ್ಮಾನಿಸಿದರು.
ಸಂಘದ ಅಧ್ಯಕ್ಷ ಶಿವಪ್ಪ ಭುಜನ್ನವರ, ಉಪಾಧ್ಯಕ್ಷ ಪ್ರಕಾಶ ಪುಠಾಣಿ, ಶಿವಾನಂದ ಗಾಡವಿ, ಅಶೋಕ ವಾಣಿ, ಶಂಕರಪ್ಪ ತಾಂವಶಿ, ಬಶೆಟ್ಟೆಪ್ಪ ಗಾಡವಿ, ಶಿವಬಸು ನೀಲಣ್ಣವರ, ಬಿ.ಜಿ, ಜಕಾತಿ, ಪ್ರಕಾಶ ಶೀಲವಂತ, ಸಂಗಪ್ಪ ಅಂಗಡಿ, ಮಹಾಂತೇಶ ಅಂಗಡಿ, ಈರಣ್ಣ ಜಕಾತಿ, ಪ್ರಕಾಶ ವಾಣಿ, ಸೋಮೇಶ್ವರ ಅಂಗಡಿ, ಅಶೋಕ ವಾಣಿ, ಬಾಲಶೇಖರ ಬಂದಿ, ಯುವ ಸಂಘದ ಅಧ್ಯಕ್ಷ ವಿಶ್ವನಾಥ ಬೆಲ್ಲದ, ಉಪಾಧ್ಯಕ್ಷ ಈರಣ್ಣ ಕೋತಿನ, ಸುಭಾಷ ಅವಟಿ, ಶಿವಯೋಗೆಪ್ಪ ಸಬರದ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ವಾಣಿ, ಉಪಾಧ್ಯಕ್ಷೆ ರಾಜೇಶ್ವರಿ ಗಾಡವಿ, ಪ್ರಧಾನ ಕಾರ್ಯದರ್ಶಿ ರಜನಿ ಬಂದಿ, ಮಂಜುಳಾ ಭುಜನ್ನವರ ಇದ್ದರು.


Spread the love

About inmudalgi

Check Also

ಫೆ.11ರಂದು ಬೆಟಗೇರಿ ಪಿಎಚ್‍ಸಿಯಲ್ಲಿ ವಿವಿಧ ರೋಗಗಳ ಉಚಿತ ತಪಾಸಣೆ ಶಿಬಿರ

Spread the loveಫೆ.11ರಂದು ಬೆಟಗೇರಿ ಪಿಎಚ್‍ಸಿಯಲ್ಲಿ ವಿವಿಧ ರೋಗಗಳ ಉಚಿತ ತಪಾಸಣೆ ಶಿಬಿರ ಬೆಟಗೇರಿ:ಗೋಕಾಕ ಲಾಯನ್ಸ್ ಕ್ಲಬ್ ಹಾಗೂ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ