Breaking News
Home / ಬೆಳಗಾವಿ / *ಕ್ರೀಡಾ ಪ್ರತಿಭೆಗಳು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ*

*ಕ್ರೀಡಾ ಪ್ರತಿಭೆಗಳು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ*

Spread the love

ಮೂಡಲಗಿ : ಗ್ರಾಮೀಣ ಆಟಗಾರರು ದೈಹಿಕವಾಗಿ ಮಾನಸಿಕವಾಗಿ ಸದೃಢ ಇರಬೇಕಾದರೆ ಮನುಷ್ಯನಿಗೆ ಕ್ರೀಡೆ ಅವಶ್ಯವಾಗಿರುತ್ತದೆ ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು.

ಅವರು ಇತ್ತೀಚೆಗೆ ಮೂಡಲಗಿ ನಗರದ ಶ್ರೀ ಎಲ್ ವಾಯ್ ಆಡಿಹೂಡಿ ಶಾಲಾ ಮೈದಾನದಲ್ಲಿ ಭಾರತ ಸರ್ಕಾರದ ಮೈ ಭಾರತ ಕೇಂದ್ರ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಹಾಗೂ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಟ್ರೋಫಿ ಬಹುಮಾನ ವಿತರಣೆ ಮಾಡಿ ಮಾತನಾಡುತ್ತಾ ನಮ್ಮ ಭಾಗದ ಜನಪ್ರಿಯ ಶಾಸಕರಾದ ಬಾಲಚಂದ್ರ ಅಣ್ಣಾ ಜಾರಕಿಹೊಳಿಯವರ ಸಹಕಾರದಿಂದ ಎಲ್ಲಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎಲ್ ವಾಯ್ ಅಡಿಹುಡಿ ವಹಿಸಿ ಮಾತನಾಡಿ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಮೈ ಭಾರತ್ ಯುವ ಕೇಂದ್ರದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ . ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಎಂದು ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸುಭಾಶ ಗೊಡ್ಯಾಗೋಳ ಮಾತನಾಡಿ ನಮ್ಮ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿಯವರು ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರ ಸಂಘಟನೆ ಮಾಡುತ್ತಿದ್ದಾರೆ ಕ್ರೀಡಾ ಪಟುಗಳು ಹಾಗೂ ಯುವ ಸಂಘಗಳು ಇದರಲ್ಲಿ ಭಾಗವಹಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈ ಭಾರತ್ ಯುವ ಕೇಂದ್ರದ ಎಂ ಟಿ ಎಸ್ ಮಲ್ಲಯ್ಯ ಕರಡಿ, ಮಂಜುನಾಥ್ ಸೈನಿಕ ತರಬೇತಿ ಕೇಂದ್ರದ ಮುಖ್ಯ ಆಡಳಿತ ಅಧಿಕಾರಿ ಮಹಾಂತೇಶ ಕೊಟಬಾಗಿ, ರವಿ ಕರಿಗಾರ್, ಸಚಿನ್ ಕಾಂಬಳೆ, ಹೃತಿಶಗೌಡ, ಅಭಿಷೇಕ್ ಕಟ್ಟಿಮನಿ, ಹನುಮಂತ ಅಂಗಡಿ ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಹಾಗೂ ಕ್ರೀಡಾಪಟುಗಳು, ಮುಂತಾದವರು ಉಪಸ್ಥಿತರಿದ್ದರು.

ಕಬ್ಬಡ್ಡಿ, ವಾಲಿಬಾಲ್, ರನ್ನಿಂಗ್, ಗುಂಡು ಎಸೆತ, ಹೈಜಂಪ್, ಲಾಂಗ್ ಜಂಪ್ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಆಟಗಾರರಿಗೆ ಬೆಳಗಾವಿ ಮೈ ಭಾರತ್ ಕೇಂದ್ರದ ವತಿಯಿಂದ ಪ್ರಮಾಣ ಪತ್ರ ಮತ್ತು ಟ್ರೋಫಿಗಳನ್ನು ನೀಡಲಾಯಿತು.


Spread the love

About inmudalgi

Check Also

*ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಚಾತುರ್ಯ ಆಗಿಲ್ಲ-ಬಿಇಒ ಪ್ರಕಾಶ ಹಿರೇಮಠ*

Spread the love *ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಚಾತುರ್ಯ ಆಗಿಲ್ಲ-ಬಿಇಒ ಪ್ರಕಾಶ ಹಿರೇಮಠ* ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಇರುವ ಎಸ್‌ಎಸ್‌ಎಲ್‌ಸಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ