*ಸ್ವಾವಲಂಬಿ ಜೀವನ ನಡೆಸಲು ಯುವ ಜನತೆ ಸತತ ಪ್ರಯತ್ನ ಮಾಡಬೇಕು : ಕಸ್ತೂರಿ ಹೆಗ್ಗಾನಿ*

ಗುರ್ಲಾಪುರ : ಪ್ರತಿಯೊಬ್ಬ ಮನುಷ್ಯ ಸ್ವಾವಲಂಬಿ ಜೀವನ ನಡೆಸಬೇಕಾದರೆ ಪ್ರಯತ್ನ ಮತ್ತು ಶ್ರಮ ನಿರಂತರವಾಗಿ ಇರಬೇಕು ಎಂದು ಭಗೀರಥ ಯುವತಿ ಮಂಡಲದ ಅಧ್ಯಕ್ಷೆ ಕಸ್ತೂರಿ ಹೆಗ್ಗಾನಿ ಹೇಳಿದರು.
ಅವರು ಗುರ್ಲಾಪುರ ಗ್ರಾಮದಲ್ಲಿ ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮೈ ಭಾರತ ಕೇಂದ್ರ ಬೆಳಗಾವಿ, ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ , ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಹಾಗೂ ಸಂಗೊಳ್ಳಿ ರಾಯಣ್ಣ ಕ್ರೀಡಾ ಯುವಕ ಸಂಘ ಗುರ್ಲಾಪುರ, ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮೈ ಭಾರತ ಯುವ ಮಂಡಳ ವಿಕಾಸ್ ಅಭಿಯಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಯುವ ಸಂಘಟನೆ ಮೂಲಕ ಸಮಾಜದ ಸುಧಾರಣೆಗೆ ಮುಂದಾಗಿರುವ ನಮ್ಮ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಅವರು ನಮ್ಮಂತ ಎಷ್ಟೋ ಯುವ ಜನತೆಗೆ ಮಾದರಿಯಾಗಿದ್ದಾರೆ. ಅವರ ನಿಸ್ವಾರ್ಥ ಸೇವೆ ಮತ್ತು ಕಾರ್ಯ ಶ್ಲಾಘನಿಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ವಹಿಸಿ ಮಾತನಾಡಿ ನಮ್ಮ ಗ್ರಾಮೀಣ ಭಾಗದ ಯುವ ಜನತೆ ಮುಖ್ಯವಾಹಿನಿಗೆ ಬರಬೇಕಾದರೆ ಪ್ರತಿಯೊಂದು ಗ್ರಾಮದಲ್ಲಿ ಯುವ ಸಂಘಟನೆ ಮಾಡಬೇಕು. ನಮ್ಮ ಭಾಗದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಸಹಕಾರದಿಂದ ಸಂಘಟನೆ ಮಾಡುತ್ತಿದ್ದೇವೆ. ಮೈ ಭಾರತ ಕೇಂದ್ರ ಬೆಳಗಾವಿ ಇವರು ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಜಿಲ್ಲೆಯ ಯುವ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ನಾಗನೂರಿನ ಡಾ. ಕಾವ್ಯಶ್ರೀ ಅಮ್ಮನವರು ಸಸಿಗೆ ನೀರು ಹನಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯುವ ಸಮಾಜ ಒಳ್ಳೆ ಕಾರ್ಯ ಮಾಡಿದರೆ ರಾಷ್ಟ್ರ ಅಭಿವೃದ್ಧಿ ಆಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಷ್ ಗೊಡ್ಯಾಗೋಳ ಮಾತನಾಡಿ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಯುವಕ ಸಂಘಗಳನ್ನು ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಕ್ರೀಡಾ ಮತ್ತು ಯುವಕ ಸಂಘದ ಅಧ್ಯಕ್ಷ ಗೋಪಾಲ ಗಡ್ಡೆಕಾರ, ರಘು ಕೆದಾರಿ, ಸುಭಾಷ್ ಸುಳ್ಳನ್ನವರ, ಮಹಾದೇವ ನಡುವಿನಕೆರಿ, ಪರಮಾನಂದ ಬೆಳಗಲಿ, ಶ್ರೀಶೈಲ್ ಧರ್ಮಟ್ಟಿ, ಕೃಷ್ಣ ಶ್ಯಾಬಣ್ಣವರ, ಗಂಗಪ್ಪ ಗಡ್ಡೆಕಾರ ನಂದೀಶ್ ಅಂಬಿಗೇರ, ಪ್ರವೀಣ್ ಸುಳ್ಳನ್ನವರ, ಸುರೇಶ ಶ್ಯಾಬನ್ನವರ ಪದಾಧಿಕಾರಿಗಳು ಹಾಗೂ ಮುಂತಾದವರು ಉಪಸ್ಥಿತರಿದ್ದರು.
IN MUDALGI Latest Kannada News