Breaking News
Home / ಬೆಳಗಾವಿ / ಪ್ರವಚನ ಕಾರ್ಯಕ್ರಮ ಯಶಸ್ವಿಗೆ ಸ್ಥಳೀಯರು ಸಹಕರಿಸಿ: ಶಿವಲಿಂಗ ಸ್ವಾಮೀಜಿ

ಪ್ರವಚನ ಕಾರ್ಯಕ್ರಮ ಯಶಸ್ವಿಗೆ ಸ್ಥಳೀಯರು ಸಹಕರಿಸಿ: ಶಿವಲಿಂಗ ಸ್ವಾಮೀಜಿ

Spread the love

ಪ್ರವಚನ ಕಾರ್ಯಕ್ರಮ ಯಶಸ್ವಿಗೆ
ಸ್ಥಳೀಯರು ಸಹಕರಿಸಿ: ಶಿವಲಿಂಗ ಸ್ವಾಮೀಜಿ

ವರದಿ: ಅಡಿವೇಶ ಮುಧೋಳ.
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ
ಹೊಸಳ್ಳಿ ಶ್ರೀಗಳು ಪ್ರವಚನ ನಡೆಯಲಿದೆ. ಪ್ರವಚನ ಕಾರ್ಯಕ್ರಮ ಯಶಸ್ವಿಗೆ ಸ್ಥಳಿಯರು ಸಹಕರಿಸಬೇಕು ಎಂದು ಗದಗ ಹಿರೇಮಠದ ಶಿವಲಿಂಗ ಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ಹಾಗೂ 775 ವರ್ಷ ಬಾಳಿದ ಮಹಾತಪಸ್ವಿ ಜಗದ್ಗುರು ಭೂದೀಶ್ವರ
ಮಹಾಶಿವಯೋಗಿಗಳ ಶಿಲಾ ಮಂಟಪ ಲೋಕಾರ್ಪಣೆ ನಿಮಿತ್ಯ ಬೆಟಗೇರಿ ಗ್ರಾಮದಲ್ಲಿ ಪ್ರಪ್ರಥಮವಾಗಿ ಇದೇ ಏ.26 ರಿಂದ ಏ.29 ರವರೆಗೆ ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮಿಜಿ ಅವರಿಂದ ಪ್ರವಚನ ಆಯೋಜನೆಯ ರೋಪರೇಷಗಳ ಕುರಿತು ಸ್ಥಳೀಯ ಪಿಕೆಪಿಎಸ್ ಸಭಾಂಗಣದಲ್ಲಿ ಏ.7ರಂದು ಸ್ಥಳೀಯರಿಂದ ನಡೆದ ಸಭೆಯಲ್ಲಿ ಮಾತನಾಡಿದರು.
ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ ನಡೆಯಲಿರುವ ಪ್ರವಚನ ಆಯೋಜನೆ ಸಮಿತಿ ಸಂಚಾಲಕ ಈಶ್ವರ ಬಳಿಗಾರ ಮಾತನಾಡಿ, ಏ.26 ರಿಂದ ಏ.29 ರವರೆಗೆ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಜಿ ಅವರಿಂದ ನಾಲ್ಕು ದಿನಗಳ ಕಾಲ ಪ್ರತಿ ದಿನ ಸಾಯಂಕಾಲ 7 ಗಂಟೆಯಿಂದ 8 ಗಂಟೆಯವರೆಗೆ ಪ್ರವಚನ ಜರುಗಲಿದೆ. ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ. ಸಹಾಯ, ಸಹಕಾರ ನೀಡಬೇಕೆಂದು ಸ್ಥಳೀಯರಲ್ಲಿ ಮನವಿ ಮಾಡಿಕೊಂಡರು.

 ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ
ಆವರಣದಲ್ಲಿ ಏ.30 ರಂದು ಪ್ರವಚನ ಮಂಗಲ
ಕಾರ್ಯಕ್ರಮ ನಡೆಯಲಿದೆ. ಮುಂಜಾನೆ 10 ಗಂಟೆಗೆ
ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಪ್ರವಚನ ಜರುಗಲಿದೆ.

ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಬಸವಂತ ಕೋಣಿ
ಮಾತನಾಡಿ, ಹೊಸಳ್ಳಿ ಮತ್ತು ಕೊಪ್ಪಳ ಶ್ರೀಗಳಿಂದ
ಬೆಟಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಪ್ರವಚನ
ಆಯೋಜನೆಗೆ ಅಗತ್ಯವಾದ ಸಕಲ ಕಾರ್ಯಕ್ಕೆ ಸಹಾಯ,
ಸಹಕಾರ ನೀಡುವುದಾಗಿ ಈ ವೇಳೆ ಭರವಸೆ ನೀಡಿದರು.
ಸ್ಥಳೀಯ ಹಿರಿಯ ನಾಗರಿಕರು ಉಭಯ ಶ್ರೀಗಳ ಭಕ್ತರು, ಅಭಿಮಾನಿ ಬಳಗದವರು ಮತ್ತು ಪ್ರವಚನ ಆಯೋಜನೆ ಉಸ್ತುವಾರಿ ಶ್ರೀಗಳು
ಗ್ರಾಮದಲ್ಲಿ ಪ್ರವಚನ ಆಯೋಜನೆ, ಸುಮಂಗಲೆಯರಿಂದ ಆರತಿ ಮತ್ತು ಕುಂಭಮೇಳ,
ಸಕಲ ವಾಧ್ಯಮೇಳ, ಬಳಗಾನೂರದ ಶಿವಶಾಂತವೀರ
ಶರಣರಿಂದ ಶಿವಭಜನೆ ಮೂಲಕ ಗ್ರಾಮದ ವಿವಿಧಡೆ
ಪಾದಯಾತ್ರೆ, ಸ್ಥಳೀಯ ಪ್ರಮುಖ ಬೀದಿಗಳ ಸ್ವಚ್ಛತೆ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಕುರಿತು ಚರ್ಚಿಸಿದರು. ಗದಗದ ವಿರೂಪಾಪುರ ಮಲ್ಲಯ್ಯ ಗವಾಯಿಗಳು, ಸ್ಥಳೀಯ ವೇಧಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಮ್ಮುಖ,
ಪತ್ರೆಪ್ಪ ನೀಲಣ್ಣವರ, ಲಕ್ಷ್ಮಣ ನೀಲಣ್ಣವರ, ಬಸವರಾಜ
ಪಣದಿ, ಗೌಡಪ್ಪ ದೇಯಣ್ಣವರ, ಈರಣ್ಣ ಬಳಿಗಾರ, ಶ್ರೀಧರ ದೇಯಣ್ಣವರ, ಈರಪ್ಪ ದೇಯಣ್ಣವರ, ರಾಮಣ್ಣ
ನೀಲಣ್ಣವರ, ಹಜರತ ಮಿರ್ಜಾನಾಯ್ಕ, ಅಡಿವೆಪ್ಪ
ಮುರಗೋಡ, ಮಲ್ಲಪ್ಪ ಪಣದಿ, ಸುಭಾಷ ಕರೆಣ್ಣವರ,
ದುಂಡಪ್ಪ ಕಂಬಿ, ಸುರೇಶ ನೀಲಣ್ಣವರ, ದುಂಡಪ್ಪ ಮಾಳೇದ, ಬಾಳಪ್ಪ ಕನೋಜಿ ಸೇರಿದಂತೆ ಕೊಪ್ಪಳ ಮತ್ತು ಹೊಸಳ್ಳಿ ಶ್ರೀಗಳಿಂದ ಹಮ್ಮಿಕೊಂಡಿರುವ ಪ್ರವಚನ ಆಯೋಜನೆ ಸಮಿತಿ ಪದಾಧಿಕಾರಿಗಳು,
ಸದಸ್ಯರು, ಯುವಕರು, ಸ್ಥಳೀಯ ಹಿರಿಯ ನಾಗರಿಕರು ಇದ್ದರು.


Spread the love

About inmudalgi

Check Also

ಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ

Spread the loveಶ್ರೀ ಭಗವಾನ ಮಹಾವೀರ ಜಯಂತಿ ಸಂಚಿಕೆ ಬಿಡುಗಡೆ ಮೂಡಲಗಿ: ಶ್ರೀ ಭಗವಾನ ಮಹಾವೀರ ಜಯಂತಿ ಪ್ರಯುಕ್ತ ಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ