ಆರ್.ಡಿ.ಎಸ್. ಸಿಬಿಎಸ್‍ಇ ಶಾಲೆಯಲ್ಲಿ “ವಿಶ್ವ ಪರಿಸರ ದಿನಾಚರಣೆ “
ಮೂಡಲಗಿ : “ಪ್ರಕೃತಿ ಪ್ರತಿಯೊಬ್ಬ ಮನುಷ್ಯನ
ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ
ದುರಾಸೆಯನಲ್ಲ” ಪ್ರಕೃತಿ ಪ್ರತಿಯೊಂದು ಜೀವರಾಶಿಯ
ಆಗರವಾಗಿದ್ದು ಪ್ರಕೃತಿಯಲ್ಲಿ ಇರುವ ಹಸಿರು ಸಸ್ಯ ಸಮೂಹ ಪ್ರತಿಯೊಂದು ಜೀವರಕ್ಷಕವಾಗಿದ್ದು ಪರಿಸರವನ್ನು ಸಂರಕ್ಷಿಸುವ ಮನೋಬಾವನೆ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದು ಮೂಡಲಗಿ ಪುರಸಭೆಯ ಮುಖ್ಯಾಧಿಕಾರಿ ತುಕಾರಾಮ್ ಮಾದರ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಆರ್.ಡಿ.ಎಸ್. ಶ್ರೀ ವಿದ್ಯಾನಿಕೇತನ ಸಿಬಿಎಸ್‍ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಎಸ್ ಹಿರೇಮಠ್ ರವರು ಸಸಿಯನ್ನು ನೆಡುವುದರ ಮೂಲಕ “ವಿಶ್ವ ಪರಿಸರ ದಿನ” ಕ್ಕೆ ಚಾಲನೆ ನೀಡಿದರು. ನಂತರ ವಿಶ್ವ ಪರಿಸರ ದಿನಾಚರಣೆಯನ್ನು ಮೂಡಲಗಿ ಪಟ್ಟಣದ ಕಲ್ಮೇಶ್ವರ ಸರ್ಕಲ್‍ನಲ್ಲಿ ವಿದ್ಯಾರ್ಥಿಗಳ ಸರಪಳಿ ಮಾಡಿ ಪರಿಸರದ ಸಂರಕ್ಷಣೆಯ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.
ಶಾಲೆಯ ಪ್ರಾಂಶುಪಾಲರಾದ ದ್ರಾಕ್ಷಾಯಿಣಿ ಮಠಪತಿ ಮಾತನಾಡಿ ಒಂದು ಮನೆಗೆ ಒಂದು ಮರ, ಊರಿಗೆ ಒಂದು ವನ ಬನ್ನಿ ಈ ಪರಿಸರ ದಿನದಂದು ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಭೂಮಿಯನ್ನು ಹಸಿರಾಗಿಸೋಣ ಎಂದು ಪ್ರಾಸ್ತಾವಿಕವಾಗಿ
ಮಾತನಾಡಿದರು.
ಆರ್.ಡಿ.ಸಂಸ್ಥೆಯ ಅಧ್ಯಕ್ಷರಾದ ಸಂತೋμï. ತ. ಪಾರ್ಶಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳನ್ನು
ಮತ್ತು ಪುರಸಭೆಯ ಸದಸ್ಯರನ್ನು ಹಾಗೂ ಮೂಡಲಗಿ ಗಣ್ಯ ವ್ಯಕ್ತಿಗಳನ್ನು ಸಸಿ ಕೊಡುವುದರ ಮೂಲಕ ಸ್ವಾಗತಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳಿಂದ ಪರಿಸರ ಉಳಿಸುವ ನಾಟಕ ಮಾಡುವುದರ ಮೂಲಕ “ವಿಶ್ವ ಪರಿಸರ ದಿನ” ವನ್ನು ಘೋಷ್ಯ ವಾಕ್ಯಗಳೊಂದಿಗೆ ಎಲ್ಲ ಜನರನ್ನು ರಂಜಿಸಿದರು. ಸಾವಿತ್ರಿ ಸಿದ್ದಾಪುರ ನಿರೂಪಿಸಿದರು. ದೀಪಾ ಸ್ವಾಗತಿಸಿದರು ಅಪ್ಪಣ್ಣ ಮಂಗಸೂಳಿ ವಂದಿಸಿದರು.
IN MUDALGI Latest Kannada News