Breaking News
Home / ಬೆಳಗಾವಿ / ಜೂ.20ರಿಂದ ಬೆಟಗೇರಿ ಜಾಗೃತ ಮಾರುತಿ ದೇವರ ಓಕುಳಿ

ಜೂ.20ರಿಂದ ಬೆಟಗೇರಿ ಜಾಗೃತ ಮಾರುತಿ ದೇವರ ಓಕುಳಿ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ
ಮಾರುತಿ ದೇವರ ಓಕುಳಿ ಜೂ.20ರಿಂದ ಜೂ.23ರವರೆಗೆ
ಜರುಗಲಿದೆ.
ಜೂ.20ರಂದು ಮುಂಜಾನೆ 7ಗಂಟೆಗೆ ಮಾರುತಿ ದೇವರ
ಗದ್ದುಗೆಗೆ ಮಹಾರುದ್ರಾಭಿಷೇಕ, ಕುಂಕುಮ ಮತ್ತು
ಮಹಾಪೂಜೆ, ಸಾಯಂಕಾಲ 5 ಗಂಟೆಗೆ ಓಕುಳಿ ಕೊಂಡ ಪೂಜೆ,ನಂತರ ಕರಡಿ, ಹಲಗೆ ಮಜಲು ಸೇರಿದಂತೆ ಸಕಲ ವಾಧ್ಯಗಳ ವಾದನ, ಪಲ್ಲಕ್ಕಿ ಉತ್ಸವ ನಡೆಯಲಿದೆ.
ಜೂ.21ರಂದು ಮುಂಜಾನೆ 7ಗಂಟೆಗೆ ಮಾರುತಿ ದೇವರ
ಗದ್ದುಗೆಗೆ ಅಭಿಷೇಕ, ಪೂಜೆ, ಸಾಯಂಕಾಲ 5 ಗಂಟೆಗೆ
ನಡು ಓಕುಳಿ. ಜೂ.22ರಂದು ಮುಂಜಾನೆ 8 ಗಂಟೆಯಿಂದ
ಪುರಜನರಿಂದ ಪೂಜೆ-ಪುನಸ್ಕಾರ, ನೈವೈದ್ಯ, ಹರಕೆ
ಸಮರ್ಪಣೆ ನಡೆದು, ಸಾಯಂಕಾಲ 5 ಗಂಟೆಗೆ ಓಕುಳಿ
ಕೊಂಡಕ್ಕೆ ಸ್ಥಳೀಯ ವಿವಿಧ ದೇವರÀ ಪಲ್ಲಕ್ಕಿ ಪ್ರದಕ್ಷೀಣೆ
ಬಳಿಕ ಕಡೆ ಓಕಳಿ ನಡೆಯಲಿದ್ದು, ವಿವಿಧ ಪ್ರಾಣಿಗಳ ಸೊಗಿನ
ಕುಣಿತದ ಪ್ರದರ್ಶನ, ಅದೇ ದಿನ ಸಂಜೆ 8 ಗಂಟೆಗೆ
ಶ್ರೀಗಳಿಗೆ, ಅನ್ನದಾನಿಗಳಿಗೆ ಸತ್ಕಾರ ಕಾರ್ಯಕ್ರಮದ ಬಳಿಕ
ರಾತ್ರಿ 10.30ಕ್ಕೆ ತುಳಸಿಗೇರಿ ಜೈ ಹನುಮಾನ ನಾಟ್ಯ
ಸಂಘದವರಿಂದ ಶ್ರೀ ಕೃಷ್ಣಪಾರಿಜಾತ ಕಲಾಸಂಘದವರಿಂದ ನಾಟಕ ಪ್ರದರ್ಶನ ಜರುಗಲಿದೆ.
ಮಂಗಳವಾರ ಜೂ.23ರಂದು ಮುಂಜಾನೆ 7ಗಂಟೆಗೆ ಮಾರುತಿ
ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ಸಾಯಂಕಾಲ 4
ಗಂಟೆಗೆ ಜಂಗಿ ಕುಸ್ತಿಗಳು ನಡೆದ ಬಳಿಕ ಸಂಜೆ ಮಾರುತಿ
ದೇವರ ದೇವಾಲಯಕ್ಕೆ ಪಲ್ಲಕ್ಕಿ ಪ್ರರ್ದಕ್ಷಣೆ ನಡೆಯಲಿದೆ
ಎಂದು ಇಲ್ಲಿಯ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.


Spread the love

About client

Check Also

ಶ್ರೀ ಮಹಾಲಕ್ಷ್ಮೀದೇವಿ ಗದ್ಗುಗೆ ವಿಶೇಷ ಮಹಾಪೂಜೆ

Spread the loveಲಕ್ಷ್ಮೀ…ಮಹಾಲಕ್ಷ್ಮೀ ಕಾಪಾಡಮ್ಮ..! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ವಾರದ ದಿನ ಶುಕ್ರವಾರ ಜು.31ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ