ಶೈಕ್ಷಣಿಕ ಅಭಿವೃದ್ಧಿಗೆ ಸ್ಥಳೀಯರ ಸಹಭಾಗಿತ್ವ ಅಗತ್ಯ : ಅರಿಹಂತ ಬಿರಾದಾರಪಾಟೀಲ
ಬೆಟಗೇರಿ:ಉದಗಟ್ಟಿ ಸರಕಾರಿ ಪ್ರೌಢ ಶಾಲೆಯ ಸಮಗ್ರ ಪ್ರಗತಿಗೆ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ. ಸ್ಥಳೀಯ
ಶಿಕ್ಷಣಪ್ರೇಮಿ ಪಾಂಡುರಂಗ ದೊಡ್ಡಮನಿಯವರಂತಹ ದಾನಿಗಳ
ಸಹಾಯದಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಉದಗಟ್ಟಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಅರಿಹಂತ ಬಿರಾದಾರಪಾಟೀಲ ಹೇಳಿದರು.
ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಉದಗಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಸ್ಥಳೀಯ ಶಿಕ್ಷಣಪ್ರೇಮಿ, ಉದಗಟ್ಟಿ ಗ್ರಾಪಂ ಮಾಜಿ ಅಧ್ಯಕ್ಷ ಪಾಂಡುರಂಗ ದೊಡ್ಡಮನಿ ಅವರು ಬಿಸಿಯೂಟದ ಯೋಜನೆಗೆ ಅಗತ್ಯವಿರುವ ಪ್ಲೇಟ(ತಾಟ)ಗಳ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ಶಿಕ್ಷಣಪ್ರೇಮಿ ದೊಡ್ಡಮನಿ ಅವರ ಸೇವಾ ಮನೋಭಾವ ಇತರರಿಗೂ ಪ್ರೇರಣೆಯಾಗಲಿ. ಶೈಕ್ಷಣಿಕ ಅಭಿವೃದ್ಧಿಗೆ ಸ್ಥಳೀಯರ ಸಹಭಾಗಿತ್ವ ಅಗತ್ಯ ಎಂದರು.
ಉದಗಟ್ಟಿ ಗ್ರಾಮದ ಶಿಕ್ಷಣಪ್ರೇಮಿ, ಗ್ರಾಪಂ ಮಾಜಿ ಅಧ್ಯಕ್ಷ
ಪಾಂಡುರಂಗ ದೊಡ್ಡಮನಿ ಅವರು ಒಟ್ಟು ಸುಮಾರು 15000 ಸಾವಿರ ರೂಪಾಯಿಗಳ ಮೌಲ್ಯದ ಒಟ್ಟು 150 ಪ್ಲೇಟ(ತಾಟ)ಗಳ ವಿತರಣೆ ಮಾಡಿದ ಬಳಿಕ ಶಾಲೆಯ ವತಿಯಿಂದ ಪಾಂಡುರಂಗ ದೊಡ್ಡಮನಿ ಅವರನ್ನು
ಸನ್ಮಾನಿಸಲಾಯಿತು.
ಸ್ಥಳೀಯ ಶಿಕ್ಷಣಪ್ರೇಮಿ, ಗ್ರಾಪಂ ಮಾಜಿ ಅಧ್ಯಕ್ಷ ಪಾಂಡುರಂಗ ದೊಡ್ಡಮನಿ ಅವರು ಸತ್ಕಾರ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಆದರ್ಶ ನಾಗರಿಕರಾಗಿ ರೂಪುಗೊಳ್ಳಬೇಕು.
ಶಿಕ್ಷಣವೇ ವ್ಯಕ್ತಿಯ ಭವಿಷ್ಯ ನಿರ್ಮಿಸುವ ಶಕ್ತಿಯಾಗಿದೆ. ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು. ಬಸಪ್ಪ ಗುಡದಾರ, ಮುತ್ತೆಪ್ಪ ಕುದರಿ, ಉದಯ ಛಪ್ರಿ, ವಿದ್ಯಾಕೊಡ್ಲಿ, ಶಬಾನಾ ಮಾರಿಹಾಳ, ದೀಪಿಕಾ ಇರಾಜ್, ಭಾಗ್ಯಲಕ್ಷ್ಮೀ.ಕಲಭಾಂವಿ, ರಾಜೇಶ್ವರಿ ಪಾಟೀಲ, ಸೇರಿದಂತೆ ಶಾಲೆಯ ಸಹ ಶಿಕ್ಷಕರು, ಅತಿಥಿ ಶಿಕ್ಷಕರು,ಶಿಕ್ಷಣಪ್ರೇಮಿಗಳು, ಮತ್ತೀತರರು ಇದ್ದರು.
IN MUDALGI Latest Kannada News