Breaking News
Home / ಬೆಳಗಾವಿ / ಬೆಟಗೇರಿ: ರಾಜಸ್ಥಾನಿ ಅಂಗಡಿ ತೆರವು ಮಾಡುವಂತೆ ಆಗ್ರಹ

ಬೆಟಗೇರಿ: ರಾಜಸ್ಥಾನಿ ಅಂಗಡಿ ತೆರವು ಮಾಡುವಂತೆ ಆಗ್ರಹ

Spread the love

ವರದಿ:ಅಡಿವೇಶ ಮುಧೋಳ.
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳ ಸ್ಥಳೀಯ ಮಾಲೀಕರು ಹೊರರಾಜ್ಯ(ರಾಜಸ್ಥಾನ)ದಿಂದ ಬಂದು ಬೆಟಗೇರಿ ಗ್ರಾಮದಲ್ಲಿ ವಿವಿಧ ಅಂಗಡಿಗಳನ್ನು ತರೆದು ವ್ಯಾಪಾರ ವಹಿವಾಟು ಮಾಡುತ್ತಿದ್ದು, ರಾಜಸ್ಥಾನಿ ಕಿರಾಣಿ ಸೇರಿದಂತೆ ಮತ್ತೀತರ ಅಂಗಡಿ ತೆರವು ಮಾಡುವಂತೆ ಆಗ್ರಹಿಸಿ ಬೆಟಗೇರಿ ಗ್ರಾಮದ ಎಲ್ಲ ಅಂಗಡಿಕಾರರು, ಯುವಕರು, ಸ್ಥಳೀಯರು ಸೇರಿ ಸ್ಥಳೀಯ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿಡಿಒ ಎಸ್.ಆರ್.ಪತ್ತಾರ ಅವರಿಗೆ ಜೂ.29 ರಂದು ಮನವಿ ಸಲ್ಲಿಸಿದರು.
ಸ್ಥಳೀಯ ಯುವಕರು ಶಿಕ್ಷಣ ಕಲಿತು ನಿರುದ್ಯೋಗಿಗಳಾಗಿದ್ದು, ಸ್ವ ಗ್ರಾಮದಲ್ಲಿ ಯುವಕರು ಉದ್ಯೋಗ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ವಿನಂತಿಸಿಕೊಂಡರು. ಹೊರರಾಜ್ಯ(ರಾಜಸ್ಥಾನ)ದಿಂದ ಬಂದ ಅಂಗಡಿ ಮುಂಗಟ್ಟುಗಾರರಿಗೆ ಬೆಟಗೇರಿ ಗ್ರಾಮದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡಬಾರದು. ತಮ್ಮ ಗ್ರಾಮ
ಪಂಚಾಯತಿಯಿಂದ ಅಂಗಡಿ ತೆರೆಯಲು ಪರವಾಣಿಗೆ ಪತ್ರ
ನೀಡಬಾರದು. ಆರಂಭದ ಹಂತದಲ್ಲಿರುವ ಕಿರಾಣಿಅಂಗಡಿ ಬೇಗ ತೆರವು ಮಾಡಿಸಬೇಕು ಎಂದು ಗ್ರಾಪಂ ಪಿಡಿಒ ಅವರಲ್ಲಿ ಈ ವೇಳೆ ವಿನಂತಿಸಿಕೊಂಡರು.
ಇಲ್ಲಿಯ ಗ್ರಾಪಂ ಪಿಡಿಒ ಎಸ್.ಆರ್.ಪತ್ತಾರ ಅವರು ರಾಜಸ್ಥಾನಿ ಅಂಗಡಿ ಅವರಿಗೆ ಗ್ರಾಪಂ ವತಿಯಿಂದ ನೋಟಿಸ್ ನೀಡಿ, ವಿಚಾರಿಸಿ ಆರಂಭದ ಹಂತದಲ್ಲಿರುವ ರಾಜಸ್ಥಾನಿ ಅಂಗಡಿ ಮಾಲೀಕರ ಹೇಳಿಕೆ ಪಡೆದು ತಮಗೆ ತಿಳಿಸುತ್ತೇನೆ ಎಂದು ಈ ವೇಳೆ ಹೇಳಿದರು.
ಗ್ರಾಪಂ ಕಾರ್ಯದರ್ಶಿ ಮಾರುತಿ ತಳವಾರ, ಈರಪ್ಪ
ದೇಯಣ್ಣವರ, ಈರಣ್ಣ ಬಳಿಗಾರ, ರಾಮಪ್ಪ ಮುಧೋಳ,
ರಫೀಕ ಮಿರ್ಜಾನಾಯ್ಕ, ಮಹಾಂತೇಶ ಸಿದ್ನಾಳ, ಸಂಗಯ್ಯ
ಹಿರೇಮಠ, ಹನುಮಂತ ಕಾಡದವರ, ಮುತ್ತೆಪ್ಪ ಕನೋಜಿ,
ಮುತ್ತೆಪ್ಪ ಕುರಬರ, ಕಾಳಪ್ಪ ಕಂಬಾರ, ನಾಗಪ್ಪ ಚಂದರಗಿ,
ಉದಯ ಕೋಣಿ, ರಮೇಶ ದಂಡಿನ, ಸದಾಶಿವ ದಂಡಿನ, ವೀರಭದ್ರ ಪಡಶೆಟ್ಟಿ, ಗುಳಪ್ಪ ಅಜ್ಜನಕಟ್ಟಿ, ದಸ್ತಗೀರÀಸಾಬ ಯಲಿಗಾರ,ಫಿರೋಜ ಮಿರ್ಜಾನಾಯ್ಕ, ರಮೇಶ ಕಂಬಿ, ರಮೇಶ ಕದಮ, ಈರಪ್ಪ ದೇಯಣ್ಣವರ ಸೇರಿದಂತೆ ಸ್ಥಳೀಯರು, ಬೆಟಗೇರಿ ಗ್ರಾಮದ ಅಂಗಡಿ ಮುಂಗಟ್ಟುಗಳ ಮಾಲೀಕರು, ಗ್ರಾಪಂ ಸಿಬ್ಬಂದಿ, ಇತರರು ಇದ್ದರು.


Spread the love

About client

Check Also

ಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು: ರಮೇಶ ಅಳಗುಂಡಿ

Spread the loveಪ್ರತಿಯೊಬ್ಬರೂ ಸಸಿ ನೆಟ್ಟು ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು: ರಮೇಶ ಅಳಗುಂಡಿ ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೊಂದೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ