ಬೆಟಗೇರಿ ಸುತ್ತಮುತ್ತ ಜಿಟಿ ಜಿಟಿ ಮಳೆ
ವರದಿ: ಅಡಿವೇಶ ಮುಧೋಳ.
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಜು.4 ರಂದು ಶನಿವಾರ ಬೆಳಗಿನ ಜಾವದಿಂದ ಹಿಡಿದು ಸಂಜೆ ತನಕ ಎಡಬಿಡದೆ ಜಿಟಿ ಜಿಟಿ ಮಳೆ ಸುರಿದು ಭೂಮಿ ತಂಪಾಗಿಸಿ ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸಿದೆ.
ಪ್ರಸಕ್ತ ಮುಂಗಾರು ಮಳೆ ಆಗಾದೆ ರೈತರು ಹಾಗೂ
ಜನಸಾಮಾನ್ಯರಲ್ಲಿ ಮಳೆಯಾಗುವ ಲಕ್ಷಣ ಗೋಚರಿಸದೆ
ಆತಂಕ ಮೂಡಿಸಿತ್ತು. ಬೆಟಗೇರಿ ಗ್ರಾಮ ಸೇರಿದಂತೆ ಸುತ್ತಲಿನ
ಹಳ್ಳಿಗಳಲ್ಲಿ ಬಿರು ಬಿಸಿಲಿನ ತಾಪಕ್ಕೆ ವಿವಿಧ ಬೆಳೆಗಳು ಸಂಪೂರ್ಣ ಒಣಗುವ ಹಂತ ತಲುಪುತ್ತಿದ್ದರೆ, ದಿನ ಬೆಳಗಾದರೆ ಇಲ್ಲಿಯ ರೈತರು, ವೃದ್ಧರು ಮೇಘರಾಜ ಧರೆಗಿಳಿಯುವ ದಾರಿಗಾಗಿ ಆಕಾಶದತ್ತ ಮುಖಮಾಡುವಂತಾಗಿತ್ತು. ಮಳೆಯ ನಿರೀಕ್ಷೆಯಲ್ಲಿ ಹಗಲಿರುಳು ಕಾಲ ಕಳೆಯುತ್ತಿದ್ದ ಇಲ್ಲಿಯ ರೈತರು ಶನಿವಾರ ಬಂದ ಮಳೆ ಭೂಮಿ ತಂಪಾಗಿಸಿದ್ದರಿಂದ ಜನರು ನಿಟ್ಟಿಸಿರುಬಿಡುವಂತಾಗಿದೆ.
ಪ್ರಸಕ್ತ ವರ್ಷ ಮುಂಗಾರು ಮಳೆ ಸಂಪೂರ್ಣ ಆಗದೇ
ಇದ್ದುದರಿಂದ ದಿನ ಆಕಾಶದ ಕಡೆ ಮುಖಮಾಡುವಂತಾಗಿತ್ತು,
ನೀರಿನ ಕೊರತೆಯಿಂದ ಭೂಮಿಯಲ್ಲಿ ಈಗಿದ್ದ ಬೆಳೆಗಳು
ಒಣಗುತ್ತಿದ್ದವು. ಇಂದು ಶನಿವಾರ ದಿನ ಜಿಟಿ ಜಿಟಿ ಮಳೆಯಾಗಿ ಇಲ್ಲಿಯ ರೈತರಿಗೆ ಸ್ವಲ್ಪ ಖುಷಿಯಾಗಿದೆ. ಇನ್ನೂ ಸಂಪೂರ್ಣ ಮುಂಗಾರು ಮಳೆಯಾಗಬೇಕಾದ ಅಗತ್ಯವಿದೆ ಎಂದು ಸ್ಥಳೀಯ ನಾಗರಿಕರು ಅಭಿಪ್ರಾಯ ಪಟ್ಟಿದ್ದಾರೆ.
IN MUDALGI Latest Kannada News