ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ
ವಿಶಿಷ್ಟವಾಗಿ ರಕ್ಷಾ ಬಂಧನ ಹಬ್ಬ ಆಚರಣೆ.!
ಸಹೋದರ-ಸಹೋದರಿಯರಭಾತೃತ್ವದ ಬಿಂಬಿಸುವ ಮಹತ್ವಪೂರ್ಣ ಹಬ್ಬವಾಗಿದೆ: ರಮೇಶ ಅಳಗುಂಡಿ ಅಭಿಪ್ರಾಯ

ವರದಿ: ಅಡಿವೇಶ ಮುಧೋಳ.
ಬೆಟಗೇರಿ:ನಮ್ಮ ನಾಡಿನಲ್ಲಿ ಆಚರಿಸಲ್ಪಡುವ ಪ್ರತಿಯೊಂದು ಹಬ್ಬಗಳು ತನ್ನದೇ ಆದ ವೈಜ್ಞಾನಿಕ, ಪೌರಾಣಿಕ, ಈತಿಹಾಸಿಕ ಹಾಗೂ ಐತಿಹಾಸಿಕ ಪರಂಪರೆಯ ಹಿನ್ನಲೆಗಳನ್ನೊಳಗೊಂಡಿವೆ. ಈ ಹಬ್ಬಗಳಲ್ಲಿ ರಕ್ಷಾ ಬಂಧನ ಹಬ್ಬವೂ ಒಂದು. ಸಹೋದರ-ಸಹೋದರಿಯರಭಾತೃತ್ವದ ಬಿಂಬಿಸುವ ಮಹತ್ವಪೂರ್ಣ ಹಬ್ಬವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಅ.28ರಂದು ನಡೆದ ರಕ್ಷಾ ಬಂಧನ ಹಬ್ಬ ಆಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ಷಾ ಬಂಧನ ಹಬ್ಬವೂ ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ, ಕಾಳಜಿ ಮತ್ತು ಪರಸ್ಪರ ರಕ್ಷಣೆಯ ಪ್ರತೀಕವಾಗಿದೆ ಎಂದರು.
ರಕ್ಷಾ ಬಂಧನ ವಿಶಿಷ್ಟವಾಗಿ ಆಚರಣೆ: ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ವಿಶೇಷ ಮತ್ತು ವಿಶಿಷ್ಟವಾಗಿ ಆಚರಿಸಿದರು. ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯರು 10ನೇ ತರಗತಿ ವಿದ್ಯಾರ್ಥಿಗಳಿಗೆ, 9 ನೇ ತರಗತಿ ವಿದ್ಯಾರ್ಥಿನಿಯರು 8 ನೇ ತರಗತಿ ವಿದ್ಯಾರ್ಥಿಗಳಿಗೆ, 10 ನೇ ತರಗತಿ ವಿದ್ಯಾರ್ಥಿನಿಯರು 9 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರಿಗೆ ಶಿಕ್ಷಕಿಯರು ಮತ್ತು ಮಹಿಳಾ ಸಿಬ್ಬಂದಿ, ವಿದ್ಯಾರ್ಥಿನಿಯರು ವಿದ್ಯಾರ್ಥಿ ಅಣ್ಣ- ತಮ್ಮಂದಿರಿಗೆ ಹಣೆಗೆ ವಿಭೂತಿ, ಕುಂಕುಮದ ತಿಲಕವಿಟ್ಟು, ಆರತಿ ಬೆಳಗಿ, ರಾಖಿ ಕಟ್ಟಿದ ಬಳಿಕ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ, ಶಾಲೆಯ ಶಿಕ್ಷಕರು ಶಿಕ್ಷಕಿಯರ ಕಾಲಿಗೆ ನಮಸ್ಕರಿಸುವ ದೃಶ್ಯ ಸಹೋದರತ್ವ ಭಾವನೆಗೆ ಸಾಕ್ಷಿಯಾಯಿತು. ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ, ಶಿಕ್ಷಕಿಯರು, ಮಹಿಳಾ ಸಿಬ್ಬಂದಿ ಮುಖ್ಯೋಪಾಧ್ಯಯ ಮತ್ತು ಶಿಕ್ಷಕರಿಗೆ ಸಿಹಿ ಹಾಲು ಕೊಟ್ಟು ಸಹೋದರತ್ವದ ಪ್ರೀತಿ, ವಾತ್ಸಲ್ಯ ಮೆರೆದರು. ಈ ಮಹತ್ವಪೂರ್ಣ ರಕ್ಷಾ ಬಂಧನ ಹಬ್ಬವನ್ನು ವಿಶೇಷ ಮತ್ತು ವಿಶಿಷ್ಟವಾಗಿ ಆಚರಿಸಿ ಸಂಭ್ರಮಿಸಿದರು.
ಈ ವೇಳೆ ಸದಾನಂದ ತೆರಣೆ, ಶುಭಾ ಬಿ., ಈರಣ್ಣ ಪಟಗುಂದಿ, ರಾಕೇಶ ನಡೋಣೆ, ಸಿರಾಜ ಅಹಮ್ಮದ ಜಿಡ್ಡಿಮನಿ, ಭಾಗ್ಯಶ್ರೀ ನಾಯ್ಕ, ವೃತ್ತಿ ಮಾರ್ಗದರ್ಶಕ ಲಕ್ಕಪ್ಪ ವಾರೆಪ್ಪಗೋಳ, ದೀಪಾ ದಾಸಂಗಳಿ, ಸ್ವಾತಿ ಬಡಿಗೇರ, ಬಸವರಾಜ ಗೋಸಲಿ, ಮಂಜುನಾಥ ಸವತಿಕಾಯಿ, ನಾಗರಾಜ ಅರಳಿಮಟ್ಟಿ, ಸಿದ್ರಾಮೇಶ ಕಮತ, ಮಲ್ಹಾರಿ ಪೋಳ, ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣಪ್ರೇಮಿಗಳು, ಇತರರು ಇದ್ದರು.
IN MUDALGI Latest Kannada News