ನಿಂಗಾಪೂರ ಮತ್ತು ಕೆಮ್ಮನಕೋಲ
ಅಂಗನವಾಡಿ ಕೇಂದ್ರಗಳಿಗೆ ಟೇಬಲ್, ಖುರ್ಚಿ
ವಿತರಣೆ

ಬೆಟಗೇರಿ:ಗೋಕಾಕ ತಾಲೂಕಿನ ತಪಸಿ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಸುಮಾರು 30ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಟೇಬಲ್, ಖುರ್ಚಿಗಳನ್ನು ನಿಂಗಾಪೂರ ಮತ್ತು ಕೆಮ್ಮನಕೋಲ ಅಂಗನವಾಡಿ ಕೇಂದ್ರಗಳಿಗೆ ಇತ್ತೀಚೆಗೆ ವಿತರಣೆ ಮಾಡುವ ಕಾರ್ಯಕ್ರಮ ನಡೆಯಿತು.
ಗೋಕಾಕ ಜೆಆರ್ಬಿಸಿ ಕಾರ್ಯನಿರ್ವಾಹಕ ಅಭಿಯಂತರ
ಎಚ್.ಎಸ್.ಕಾಕಡಂಕಿ ಅವರು ಮುಖ್ಯಅತಿಥಿಗಳಾಗಿ ತಪಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿಂಗಾಪೂರ 2 ಅಂಗನವಾಡಿ ಕೇಂದ್ರ, ಕೆಮ್ಮನಕೋಲ 2 ಅಂಗನವಾಡಿ ಕೇಂದ್ರಗಳಿಗೆ ಟೇಬಲ್ ಮತ್ತು ಖುರ್ಚಿಗಳನ್ನು ಉಭಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ವಿತರಿಸಿ, ಮಾತನಾಡಿದ ಅವರು, ಉಭಯ ಗ್ರಾಮದ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಇವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ತಪಸಿ ಗ್ರಾಪಂ ಪಿಡಿಒ ಟಿ.ಎಸ್.ಕಾಂಬಳಿ, ಕಾರ್ಯದರ್ಶಿ ಐ.ಬಿ.ಕೆಂಪಸತ್ತಿ, ಮಾರುತಿ ಬಡಿಗೇರ, ಲಕ್ಷ್ಮಣ ಅರಬನ್ನವರ, ಕರ ವಸೂಲಿಗಾರ ಬಸವರಾಜ ಸಾಯನ್ನವರ, ವಾಸುದೇವ ಗಲಗಲಿ, ಹನುಮಂತ ಪೂಜೇರಿ, ಮುತ್ತೆಪ್ಪ ತಿರಕನ್ನವರ, ಬಸವರಾಜ ಬಾಣಸಿ ಸೇರಿದಂತೆ ನಿಂಗಾಪೂರ ಮತ್ತು ಕೆಮ್ಮನಕೋಲ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು, ಮತ್ತೀತರರು ಇದ್ದರು.
IN MUDALGI Latest Kannada News