Breaking News
Home / ತಾಲ್ಲೂಕು / ಭರವಸೆಯ ದೀಪ ಹಚ್ಚಿದ ಬಾಲಚಂದ್ರ ಜಾರಕಿಹೊಳಿ ಹಾಗೂ ಅಭಿಮಾನಿಗಳು

ಭರವಸೆಯ ದೀಪ ಹಚ್ಚಿದ ಬಾಲಚಂದ್ರ ಜಾರಕಿಹೊಳಿ ಹಾಗೂ ಅಭಿಮಾನಿಗಳು

Spread the love

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ದೀಪ‌ ಬೆಳಗಿಸಿ ಪ್ರಧಾನಿ‌ ಮೋದಿ ಅವರ ಕೊರೋನಾ ವಿರುದ್ದದ ಹೋರಾಟಕ್ಕೆ ಬೆಂಬಲ‌ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ‌ ಮೇಣದ ಬತ್ತಿ ಹಚ್ಚುವ ಮೂಲಕ‌ ಕೋರೊನಾ ವಿರುದ್ದ ಹೋರಾಟಕ್ಕೆ ಬೆಂಬಲ‌‌ ಸೂಚಿಸಿ ನಾಳಿನ ಭರವಸೆಯ ಬೆಳಕಿಗಾಗಿ ಇಂದು ದೀಪ ಹಚ್ಚಬೇಕು ಎಂದು ತಿಳಿಸಿದ್ದಾರೆ.

ಮೂಡಲಗಿ ನಿವಾಸಿಗಳು ಪ್ರಧಾನಿಯವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತಮ್ಮ ಮನೆಯ ಮುಂಭಾಗದ ಅಂಗಳದಲ್ಲಿ ಸ್ವಯಂ ಪ್ರೇರಣೆಯಿಂದ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿ, ಮೇಣದ ಬತ್ತಿಯನ್ನು ಹಚ್ಚಿ ಕೊರೊನಾ ತಡೆಗಟ್ಟುವಲ್ಲಿ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಬೆಂಬಲಿಸಿದರಲ್ಲದೇ ಕೊರೊನಾ ಸೊಂಕಿತರ ಆರೈಕೆಗಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೋಲೀಸ್ ಸಿಬ್ಬಂದಿಗಳ ಶ್ರಮವನ್ನು ಸ್ಮರಿಸಿದರು.

ಅದೆ ರೀತಿ ಮೂಡಲಗಿಯ ಜನರು ಕೂಡ ದೀಪ ಹಚ್ಚಿ ಭಾರತೀಯರು ನಾವೆಲ್ಲರೂ ಒಂದೇ ಎಂದು ತೋರಿಸಿದ್ದಾರೆ.


Spread the love

About inmudalgi

Check Also

11 ಕಾರ್ಯಕರ್ತೆಯರು, 34 ಸಹಾಯಕಿಯರಿಗೆ ಆದೇಶ ಪತ್ರಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ- ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಮಕ್ಕಳ ಮತ್ತು ತಾಯಂದಿರರ ಪ್ರೀತಿಗೆ ಪಾತ್ರರಾಗುವಂತೆ ಅರಭಾವಿ ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ