Breaking News
Home / ತಾಲ್ಲೂಕು / ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಉಪ್ಪಾರ ಸಮಾಜಕ್ಕೆ ಒಂದು ಸ್ಥಾನವನ್ನು ನೀಡಲೇಬೇಕು

ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಉಪ್ಪಾರ ಸಮಾಜಕ್ಕೆ ಒಂದು ಸ್ಥಾನವನ್ನು ನೀಡಲೇಬೇಕು

Spread the love

ಮೂಡಲಗಿ: ಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಉಪ್ಪಾರ ಸಮಾಜಕ್ಕೆ ಒಂದು ಸ್ಥಾನವನ್ನು ನೀಡಲೇಬೇಕು ಮತ್ತು ವಿವಿಧ ಬೇಡಿಕೆ ಇಡೇರಿಕ್ಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯ ಸಂಘದ ಪದಾಧಿಕಾರಿಗಳ ನಿಯೋಗ ಮುಖ್ಯ ಮಂತ್ರಿ ಬಿ.ಎಸ್.ಯಡಿಯೊರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ಉಪ್ಪಾರ ಸಮಾಜವು ಅತ್ಯಂತ ಹಿಂದುಳಿದಿದೆ. ಈ ಸಮಾಜವು ಕರ್ನಾಟಕ ರಾಜ್ಯದಲ್ಲಿ 35 ರಿಂದ 40 ಲಕ್ಷ ಜನಸಂಖ್ಯೆಯನ್ನು ಹೊಂದಿರುತ್ತದೆ. ಈ ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮಾನ ಮತ್ತು ಸರಿಯಾದ ನ್ಯಾಯಕ್ಕಾಗಿ ನಮ್ಮ ಸಮಾಜದ ಅನೇಕ ಹಿರಿಯರು, ಗುರುಗಳು, ಮುಖಂಡರುಗಳಿಂದ ಮತ್ತು ಸಂಘ-ಸಂಸ್ಥೆಗಳಿಂದ ಸುಮಾರು ದಶಕಗಳ ಹೋರಾಟ ನಡೆದುಕೊಂಡು ಬಂದಿರುತ್ತದೆ. ಆದರೇ ಫಲಿತಾಂಶ ಮಾತ್ರ ಬಹಳ ವಿರಳ. ಎಲ್ಲಾ ರಾಜಕೀಯ ಪಕ್ಷಗಳು ಈ ನಮ್ಮ ಉಪ್ಪಾರ ಸಮಾಜವನ್ನು ಕೇವಲ ಮತದಾನ ಸಮಯದಲ್ಲಿ ಮಾತ್ರ ಬಳಸಿಕೊಂಡು ನಂತರ ಅಧಿಕಾರ ಚುಕ್ಕಾಣಿ ಹಿಡಿದ ಮೇಲೆ ಈ ಸಮಾಜವನ್ನು ನಿರಂತರವಾಗಿ ತಿರಸ್ಕಾರ ಮಾಡುತ್ತಲೇ ಬಂದಿರುತ್ತಾರೆ. ಸ್ವಾತಂತ್ರ ಬಂದಾಗಿನಿಂದ ಹಿಡಿದು ಇಲ್ಲಿಯವರೆಗೆ ಕೇವಲ ಬೆರಳೆಣಿಕೆಯಷ್ಟು ಶಾಸಕರು ಮತ್ತು ವಿಧಾನ ಪರಿಷತ್‍ನ ಸದಸ್ಯರಾಗಿರುತ್ತಾರೆ. 1985ರಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ಬಳ್ಳಾರಿ ಜಿಲ್ಲೆ ಸಂಡೂರಿನಿಂದ ಯು. ಭೂಪತಿ, ಚಾಮರಾಜನಗರ ಜಿಲ್ಲೆಯ ಸಿ. ಪುಟ್ಟರಂಗಶೆಟ್ಟಿ ಮಾತ್ರ ಶಾಸಕರಾಗಿರುತ್ತಾರೆ. ದೇವರಾಜ್ ಅರಸ್‍ರವರ ಕಾಲದಲ್ಲಿ ಮಸಣಶೆಟ್ಟಿಯವರು ನಂತರ ಜೆ.ಡಿ.ಎಸ್. ಪಕ್ಷದಿಂದ ಹೆಚ್.ಸಿ ನೀರಾವರಿ ವಿಧಾನ ಪರಿಷತ್ ನ ಸದಸ್ಯರಾಗಿರುತ್ತಾರೆ. ಅದರಲ್ಲಿ ಕಾಂಗ್ರೇಸ್ ಪಕ್ಷದಿಂದ ಒಬ್ಬರಿಗೆ ಮಂತ್ರಿಪದವಿ ನೀಡಿರುತ್ತಾರೆ. ಇನ್ನು ನಿಗಮ ಮಂಡಳಿ, ಜಿಲ್ಲಾ ಪಂಚಾಯತ್, ತಾಲ್ಲೂಕ್ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಸಣ್ಣ ಪುಟ್ಟ ಹುದ್ದೆಗಳನ್ನು ಸ್ವೀಕರಿಸಿರುವುದನ್ನು ಬಿಟ್ಟರೇ ಉನ್ನತ ಮಟ್ಟದ ಅಧಿಕಾರವನ್ನು ಯಾವುದೇ ರಾಜಕೀಯ ಪಕ್ಷಗಳು ನಮ್ಮ ಸಮಾಜಕ್ಕೆ ನೀಡಿರುವುದಿಲ್ಲ. ಉಪ್ಪಾರ ನಿಗಮ ಮಂಡಳಿ ಸ್ಥಾಪನೆಯಾಗಿದ್ದರೂ ಅದಕ್ಕೆ ಸರಿಯಾದ ಅನುದಾನವಿಲ್ಲ. ನಿಗಮದ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ಸರ್ಕಾರದ ಅವಧಿ ಮುಗಿಯುವ ಸಮಯದಲ್ಲಿ ನೀಡಿರುವುದು ಗಮನಾರ್ಹವಾದ ಸಂಗತಿಯಾಗಿದೆ. ಹೀಗೆ ನಿರಂತರವಾಗಿ ನಾವು ಶೋಷಣೆಗೆ ಒಳಗಾಗುತ್ತಾ ಬಂದಿರುತ್ತೇವೆ. ಹಾಗಾಗಿ ಉಪ್ಪಾರ ಸಮಾಜವು ಯಾವುದೇ ಕ್ಷೇತ್ರದಲ್ಲೂ ಬೆಳವಣಿಗೆ ಕಾಣದೇ ನಿರಂತರ ಶೋಷಣೆಗೊಳಗಾಗಿರುವುದಂತು ಸತ್ಯ. ಇನ್ನೂ ಸರ್ಕಾರಿ ನೌಕರರ ಮತ್ತು ಮಹಿಳೆಯರ ವಿಚಾರಕ್ಕೆ ಬಂದರೇ ಹಲವಾರು ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉನ್ನತ ಮಟ್ಟದ ಅಧಿಕಾರಿಗಳಿಂದ ಹಿಡಿದು ಸಿಪಾಯಿ ‘ಡಿ’ ದರ್ಜೆ ಹುದ್ದೆಯ ಮಟ್ಟದ ನೌಕರರ ಮೇಲೆ ಹಲವಾರು ಇಲಾಖೆಗಳಲ್ಲಿ ನಿರಂತರವಾಗಿ ಅನ್ಯಾಯ / ದೌರ್ಜನ್ಯಗಳು ನಡೆಯುತ್ತಾ ಬಂದಿದೆ. ಈಗಲೂ ಸಹ ನಡೆಯುತ್ತಲೇ ಇದೆ. ಆದರೇ ಅವರಿಗೆ ಪ್ರತಿಭಟಿಸಲು ಅವರಲ್ಲಿ ರಾಜಕೀಯ ಬಲವಾಗಲೀ, ಅಥವಾ ಕಾನೂನಿನ ಶಕ್ತಿಯಾಗಲೀ ಇರುವುದಿಲ್ಲ. ಅದೇ ನಿಟ್ಟಿನಲ್ಲಿ ನಮ್ಮ ಸಮಾಜದ ವಿಚಾರಕ್ಕೆ ಬಂದರೇ ನಮ್ಮ ಸಮಾಜದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುತ್ತಾರೆ. ಯಾವ ರಂಗದಲ್ಲೂ ಸಹ ನಮ್ಮ ಮಹಿಳೆಯರಿಗೆ ಉನ್ನತ ಮಟ್ಟದ ಸ್ಥಾನಮಾನ ಸಿಕ್ಕಿರುವುದಿಲ್ಲ. ಆದರೇ ಇಬ್ಬರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಗಳು ದೊರಕಿರುವುದು ಹೆಮ್ಮೆಯ ವಿಷಯ. ಎಲ್ಲಾ ರಾಜಕೀಯ ಪಕ್ಷಗಳು ಈ ಒಂದು ಸಮಾಜವನ್ನು ಕೇವಲ ಮತ ಬ್ಯಾಂಕ್‍ಗಳಾಗಿ ಬಳಸಿ ಕೊಂಡಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಉಪ್ಪಾರ ಸಮಾಜದ ಜನರಿರುವುದು ಈ ನಮ್ಮ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ರಾಜ್ಯ ಸಂಘದಲ್ಲಿರುವ 28 ಜಿಲ್ಲೆಯ ಪದಾಧಿಕಾರಿಗಳೇ ಸಾಕ್ಷಿಯಾಗಿದೆ ಎಂದು ತಿಳಿಸಲು ಬಯಸುತ್ತೇವೆ. ಈ ಸರ್ಕಾರದಲ್ಲಾದರೂ ಶೋಷಣೆಗೊಳಗಾಗಿರುವ ನಮ್ಮ ಉಪ್ಪಾರ ಜನಾಂಗವನ್ನು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿ ಕೊಳ್ಳಲು ಅವಕಾಶ ನೀಡುವುದರೊಂದಿಗೆ ಉಪ್ಪಾರರು ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಉಪ್ಪಾರ ನಿಗಮ ಮಂಡಳಿಗೆ ಬೇಗನೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡಿ ಈ ಒಂದು ಸಮಾಜದ ಸರ್ವತೋಮುಖ ಅಭಿವೃದ್ದಿಗೆ 100 ಕೋಟಿ ಅನುದಾನವನ್ನು ನೀಡಬೇಕು, ಬಹಳ ವರ್ಷಗಳಿಂದ ಹೋರಾಟ ಮಾಡುತ್ತಾ ಬೇಡಿಕೆಯಾಗಿರುವ ಉಪ್ಪಾರ ಸಮಾಜವನ್ನು ಎಸ್.ಟಿ ಪಂಗಡಕ್ಕೆ ಸೇರಿಸಬೇಕು, ಸಮಾಜದ ನೌಕರರ ಮತ್ತು ಮಹಿಳೆಯರ ಮೇಲಾಗುತ್ತಿರುವ ಅನ್ಯಾಯವನ್ನು ತೀರ್ವಗತಿಯಲ್ಲಿ ಸರಿಪಡಿಸಬೇಕು, ಸಮಾಜದ ನೌಕರರ ಸರ್ಕಾರದ ಮಟ್ಟದಲ್ಲಿನ ಕೆಲಸಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಬೇಕು, ರಾಜಧಾನಿ ಬೆಂಗಳೂರಿನಲ್ಲಿ ಉಪ್ಪಾರ ಸಮಾಜದ ಅಭಿವೃದ್ಧಿಗಾಗಿ ವಸತಿನಿಲಯ, ಶಿಕ್ಷಣಸಂಸ್ಥೆ, ಸಮುದಾಯಭವನಗಳನ್ನು ನಿರ್ಮಿಸಲು 02 ಎಕ್ಕರೆ ಜಮೀನನ್ನು ಮಂಜೂರು ಮಾಡಬೇಕು, ಪ್ರತಿ ಜಿಲ್ಲೆಯಲ್ಲಿ ಉಪ್ಪಾರ ಸಮಾಜದ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ಧಿಗಾಗಿ ಸಿ.ಎ ನಿವೇಶನಗಳನ್ನು ನೀಡಿ ಸಮುದಾಯ ಭವನಗಳನ್ನು ನಿರ್ಮಿಸಿ ಕೊಡಬೇಕು ಈ ಬೇಡಿಕೆಗಳು ಬಹಳ ವರ್ಷಗಳಿಂದಲೂ ನಮ್ಮ ಪೂರ್ವಿಜರ ಕಾಲದಿಂದಲೂ ಕೇಳುತ್ತಾ ಬಂದರೂ ನಮ್ಮ ಉಪ್ಪಾರ ಸಮಾಜದವರ ಕನಸ್ಸು ಕನಸ್ಸಾಗಿಯೇ ಉಳಿದಿರುತ್ತದೆ. ಆಗಾಗಿ ಈ ಸಮಾಜವು ಕಂಡಂತ ಈ ಪುಟ್ಟ ಕನಸ್ಸನ್ನು ನನಸು ಮಾಡುವ ಮುಕಾಂತರ ಈ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಾರಣ ಕರ್ತರಾಗಬೇಕೆಂದು ಮುಖ್ಯ ಮಂತ್ರಿಗಳಿಗೆ ನೀಡಿದ ಪತ್ರದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಜನತೆಯ ಪರವಾಗಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆಯಲ್ಲಿ ಉಪಮುಖ್ಯ ಮಂತ್ರಿ ಗೋವಿಂದ ಕಾರಜೋಳ, ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯ ಅಧ್ಯಕ್ಷ ವಿಷ್ಣು ರಾ ಲಾತೂರ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಭರತ್.ಎಸ್.ಮೈಲಾರ್, ಸಿದ್ದೇಶ ಬಿಎಂ,ಪಾಂಡು ಸಿದ್ದಾಪುರ, ಶ್ರೀಮತಿ ಜಯಕುಮಾರಿ,ಶ್ರೀಮತಿ ಜಯಶ್ರೀ ಲಾತೂರ, ಮಂಜುಳಾ ಗಡ್ಡಿಮನಿ, ಹನಮಂತ ಚಿಪ್ಪಲಕಟ್ಟಿ, ಪಾಂಡು ಪಾಟೀಲ, ಕುಮಾರ್ ಉಪ್ಪಾರ್, ಶ್ರೀನೀವಾಸ ಇಂಚೂರ, ಸುಧೀರ್ ಉಪ್ಪಾರ, ದಶರಥ ಎಂ.ಆರ್ ಮತ್ತಿತರರು ಇದ್ದರು
ವರದಿ: ಕೆ.ವಾಯ್ ಮೀಶಿ


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ