ಹಳ್ಳೂರ: ಗ್ರಾಮದ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಪತ್ರಿಕಾ ದಿನಾಚರಣೆ ನಿಮಿತ್ಯ ಪತ್ರಕರ್ತರಿಗೆ ಸತ್ಕಾರ ಸಮಾರಂಭವು ನಡೆಯಲಿದೆ.
ಗೋಕಾಕ ಹಾಗೂ ಮೂಡಲಗಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ್ ಕಾರ್ಯಕ್ರಮ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷೆ ಕಲಾವತಿ ಮಿರ್ಜಿ ಅಧ್ಯಕ್ಷತೆಯನ್ನು ವಹಿಸುವರು. ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹಾಗೂ ಮೂಡಲಗಿ ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಪ್ರಾಚಾರ್ಯ ಹಾಗೂ ಸಾಹಿತಿ ಟಿ.ಎಸ್.ಒಂಟಗೋಡಿ ಅತಿಥಿ ಉಪನ್ಯಾಸ ಮಾಡುವರು. ಅತಿಥಿಗಳಾಗಿ ಜಿಲ್ಲಾ ಪಂಚಾಯತ ಸದಸ್ಯೆ ವಾಸಂತಿ ತೇರದಾಳ, ತಾಲೂಕಾ ಪಂಚಾಯತ ಸದಸ್ಯೆ ಸವಿತಾ ಡಬ್ಬನ್ನವರ, ಗ್ರಾಪಂ ಉಪಾಧ್ಯಕ್ಷ ಉಮೇಶ ಸಂತಿ, ಎಸ್‌ಸಿಎಸ್‌ಟಿ ಬಲವರ್ಧನ ಮೇಲ್ವಿಚಾರಣ ಸಮಿತಿ ಜಿಲ್ಲಾಧ್ಯಕ್ಷ ಮಾರುತಿ ಮಾವರಕರ, ಮೂಡಲಗಿ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ್ಮ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಕುಮಾರ ಲೋಕಣ್ಣವರ, ಗ್ರಾಪಂ ಸದಸ್ಯ ಲಕ್ಷಣ ಕತ್ತಿ, ಗುತ್ತಿಗೆದಾರ ಗಿರಿಮಲ್ಲಪ್ಪ ಕುಲಗೋಡ, ಗ್ರಾಪಂ ಸದಸ್ಯ ಬಾಹುಬಲಿ ಸಪ್ತಸಾಗರ, ಹಾಲು ಉಸಸ ಅಧ್ಯಕ್ಷ ಶ್ರೀಶೈಲ ಹಿರೇಮಠ, ಪಿಕೆಪಿಎಸ್ ಸದಸ್ಯ ಅರ್ಜುನ ಬೋಳನ್ನವರ, ಪಿಕೆಪಿಎಸ್ ಕಾರ್ಯನಿರ್ವಾಹಕ ರಾಮಣ್ಣಾ ಗೌರವ್ವಗೋಳ ಅತಿಥಿಗಳಾಗಿ ಪಾಲ್ಗೊಳುವರು ಎಂದು ಮಲ್ಲು ಬೋಳನ್ನವರ ತಿಳಿಸಿದ್ದಾರೆ.
Check Also
ಬೆಟಗೇರಿ ಪ್ರೌಢ ಶಾಲೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣವರ ಜಯಂತಿ ಆಚರಣೆ
Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜು.10ರಂದು ಶಿವಶರಣ ಹಡಪದ ಅಪ್ಪಣ್ಣವರ ಜಯಂತಿ ಆಚರಿಸಲಾಯಿತು. …