Breaking News
Home / ತಾಲ್ಲೂಕು / ದಿಲ್ಲಿಯ ಸಂಸತ್ ಭವನದಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕಾರ

ದಿಲ್ಲಿಯ ಸಂಸತ್ ಭವನದಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕಾರ

Spread the love

ಬೆಳಗಾವಿ : ರಾಜ್ಯಸಭೆಗೆ ಆಯ್ಕೆಯಾಗಿರುವ
ಬೆಳಗಾವಿ ಜಿಲ್ಲೆಯ ಮೂಡಲಗಿ
ತಾಲೂಕಿನ ಕಲ್ಲೊಳ್ಳಿ ಗ್ರಾಮದ ಅಪ್ಪಟ ಗ್ರಾಮೀಣ ಹಿನ್ನೆಲೆಯುಳ್ಳ ಶ್ರೀ ಈರಣ್ಣ ಕಡಾಡಿ ಅವರು ಇಂದು ದಿಲ್ಲಿಯ ಸಂಸತ್ ಭವನದಲ್ಲಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು.

ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡುವ ಕಡಾಡಿ ಅವರು ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು ನಾಡಿನ,ವಿಶೇಷವಾಗಿ
ಗಡಿ ಜಿಲ್ಲೆ ಬೆಳಗಾವಿಯ ಕನ್ನಡಿಗರಿಗೆ ಹರ್ಷವನ್ನುಂಟು ಮಾಡಿದೆ.

ಮುಂದಿನ ದಿನಗಳಲ್ಲಿ ಕಡಾಡಿಯವರು ರಾಜ್ಯಸಭೆಯಲ್ಲಿ ಕನ್ನಡದಲ್ಲಿಯೇ ಮಾತನಾಡಲಿದ್ದಾರಾ ಎಂದು ನೋಡಬೇಕು.1967 ರಲ್ಲಿ ಸಂಸತ್ತಿನಲ್ಲಿ ದಿ.ಜೆ.ಎಚ್.ಪಟೇಲರು ಕನ್ನಡದಲ್ಲಿಯೇ ಭಾಷಣ ಮಾಡಿದ ಮೊದಲ ಸಂಸದರಾಗಿದ್ದರು. ಆದರಿಂದ ಕಡಾಡಿ ಅವರು ಮಾತೃಭಾಷೆ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಅಪ್ಪಟ ಕನ್ನಡಿಗರಿಗೆ ಸಂತಸ ತಂದಿದೆ.


Spread the love

About inmudalgi

Check Also

ತಿಗಡಿ, ಅವರಾದಿಗೆ ಪದವಿ ಪೂರ್ವ ಮಹಾವಿದ್ಯಾಲಯ ಮಂಜೂರು ಮಾಡಿಸಿದ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಮೂಡಲಗಿ ವಲಯದ ತಿಗಡಿ ಮತ್ತು ಅವರಾದಿ ಸರ್ಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ