ಮೂಡಲಗಿ – ಪಟ್ಟಣದ ಪುರಸಭೆ ಕಚೇರಿಯ ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆ ಬುದುವಾರ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿತ್ತು.
ಆದರೆ ಮೂಡಲಗಿ ಮಾತ್ರ ಕೊರೋನಾ ಹೆಮ್ಮಾರಿ ದಿನದಿಂದ ದಿನಕ್ಕೆ ತನ್ನ ರೌದ್ರರೂಪವನ್ನು ತೋರಿಸುತ್ತದೆ.
ಹೌದು ಇಂದು ಮೂಡಲಗಿ ಪಟ್ಟದಲ್ಲಿ ಒಂದೇ ದಿನ 3 ಕೊರೋನಾ ಸೋಂಕು ಪತ್ತೆಯಾಗಿವೆ.
ಪಟ್ಟಣದ ಆರೋಗ್ಯ ಇಲಾಖೆಯ ಓರ್ವ ಸಿಬ್ಬಂದಿಗೆ ಸೋಂಕು ದೃಢ ಪಟ್ಟಿದ ಹಿನ್ನೆಲೆ ತಾಲೂಕಾ ಆರೋಗ್ಯ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಇನ್ನು ತಾಲೂಕಾ ಆರೋಗ್ಯ ಆಸ್ಪತ್ರೆಯ ಎದುರಿಗೆ ಇರುವ ಸಣ್ಣ ಹೋಟೆಲದಲ್ಲಿ ಇರುವ ಓರ್ವ ಮಹಿಳೆಗೂ ಕೂಡ ಸೋಂಕು ಧೃಡ ಪಟ್ಟಿದೆ.
ಮೂಡಲಗಿ ತಹಸೀಲ್ದಾರ್ ಕಚೇರಿಯಲ್ಲಿ ಓರ್ವ ಮಹಿಳೆಗೆ ಸೋಂಕು ಪತ್ತೆಯಾದ ಹಿನ್ನೆಲೆ ತಹಸೀಲ್ದಾರ್ ಕಚೇರಿಯನ್ನು ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.
ಹೀಗಾಗಿ ಈ ಮಹಾಮಾರಿ ಕೊರೋನಾ, ಮೂಡಲಗಿ ಪುರಸಭೆ, ತಹಸೀಲ್ದಾರ್ ಕಚೇರಿಯನ್ನು ಸ್ವಾಧೀನ ಪಡಿಸಿಕೊಂಡಿದೆ.ಅದಕ್ಕಾಗಿ ಈ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಮೂಡಲಗಿ ಕೆಲವು ದಿನಗಳಿಂದ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದರು ಕೂಡ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ಇಲ್ಲಿ ಜೋರಾಗಿಯೇ ನಡೆದಿದೆ. ಕೊರೊನಾ ಅಟ್ಟಹಾಸ ಮೆರೆಯುತ್ತಿದ್ರೂ ಜನ ಡೋಂಟ್ ಕೇರ್ ಅಂತೀದಾರೆ.
ಆದಷ್ಟು ಸಾರ್ವಜನಿಕರು ತಮ್ಮ ಜೀವ ಉಳಿಸಿಕೊಳ್ಳುವುದಕ್ಕೆ ಆದರೂ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕು.