ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹಗರಣ ಪತ್ತೆ ! ಕಾರ್ಮಿಕ ಇಲಾಖೆಯಿಂದ 500 ಕಿಟ್ಟ ವಿತರಣೆ, ಅಧಿಕಾರಿಯಿಂದ ತಾಲೂಕಿಗೆ 400 ಕಿಟ್ಟ
ತನಿಖಾ ವೇಳೆಯಲ್ಲಿ ಪತ್ತೆಯಾದ 100 ಕಿಟ್ಟಗಳು, ಸೂಕ್ತ ಕ್ರಮಕ್ಕೆ ಪತ್ರಕರ್ತರ ಆಗ್ರಹ
ಮೂಡಲಗಿ : “ಮೂಡಲಗಿ ಕಾರ್ಮಿಕ ಇಲಾಖೆಯ ಕರ್ಮಕಾಂಡ ! ಫಲಾನುಭವಿಗಳ ಆಯ್ಕೆ ಇಲ್ಲದೆ ಮನಸ್ಸಿಗೆ ಬಂದ ಹಾಗೆ ಕಿಟ್ಟ ವಿತರಿಸಿದ ಅಧಿಕಾರಿ, ನಿಜವಾದ ಕಾರ್ಮಿಕರಿಗಿಲ್ಲ “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ” ಎಂಬ ಶೀರ್ಷಿಕೆ ಅಡಿ ಮಂಗಳವಾರ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗೆ ಕಾರ್ಮಿಕ ಇಲಾಖೆಯ ಸಚಿವ ಶಿವರಾಮ್ ಹೆಬ್ಬಾರ ಬೆಳಗಾವಿಯ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಈ ಘಟನೆ ಬಗ್ಗೆ ತನಿಖೆ ಮಾಡಲು ಸೂಚಿಸಿದ ಪ್ರಕಾರ ಬುದುವಾರರಂದು ಜಿಲ್ಲಾ ಕಾರ್ಮಿಕರ ಅಧಿಕಾರಿಗಳು ತನಿಖಾ ತಂಡ ಪಟ್ಟಣಕ್ಕೆ ಆಗಮಿಸಿತ್ತು.
ಮೂಡಲಗಿ ತಹಶೀಲ್ದಾರ ಕಚೇರಿಯಲ್ಲಿ ತನಿಖಾಧಿಕಾರಿಗಳಾದ ತರುಣ ಬಂಗಾಲಿ ಮತ್ತು ಮಲ್ಲಿಕಾರ್ಜುನ ಜೋಗುರ ಹಾಗೂ ತಹಶೀಲ್ದಾರ ಡಿ ಜೆ ಮಹತ್ ಅವರ ಸಮುಖದಲ್ಲಿ ತಾಲೂಕಿನ ಪತ್ರಕರ್ತರ ಜೊತೆ ಘಟನೆ ಬಗ್ಗೆ ಚರ್ಚಿಸುವ ಸಮಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂತು.
ಹೌದು ಓದುಗರೇ ಈ ಘಟನೆಯಲ್ಲಿ ಒಂದರಮೇಲೊAದು ಹಗರಣಗಳು ಬೆಳಕಿಗೆ ಬರುತ್ತಿದ್ದು ಇನ್ನೂ ಮುಂದಿನ ತನಿಖೆ ವೇಳೆಯಲ್ಲಿ ಇನ್ನು ಅದೆಷ್ಟು ಹಗರಣಗಳ ಬಾಗಿಲು ತರೆಯುತ್ತವೇ ಆ ದೇವರೇ ಬಲ್ಲ !
ಮೊದಲ ದಿನದ ತನಿಖೆಯಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿರುವುದು ಯಾವುದು ಗೋತಾ..? ಅದು ಇಲ್ಲಿದೇ ನೋಡಿ ಕಾರ್ಮಿಕ ಇಲಾಖೆಯ ಸಾಹೇಬರು ಮಾಡಲಗಿ ತಾಲೂಕಿಗೆ ಬರಿ 400 ಆಹಾರ ಕಿಟ್ಟುಗಳು ಬಂದಿದೆ ಎಂದು ಹೇಳಿ, ತಾಲೂಕಿನ ಕಾರ್ಮಿಕರಿಗೂ ಹೇಳಿದೆ ಏಕಾಏಕಿಯಾಗಿ ಬಂದು ಕಿಟ್ಟಗಳನ್ನು ವಿತರಣೆ ಮಾಡಿದ್ದರು, ಮತ್ತೇ ಕಾರ್ಮಿಕರು ಕಿಟ್ಟ ಕೇಳಿದಾಗ ಎಲ್ಲ ಕಿಟ್ಟಗಳನ್ನು ಆಗಿದ್ದಾವೆ ನೊಡೋಣಾ ಮತ್ತೇ ಬಂದರೆ ನಿಮ್ಮಗೆ ಕೊಡುತ್ತೇನೆ ಎಂದು ಹೇಳಿದರು.
ಆದರೆ ತನಿಖಾ ವೇಳೆಯಲ್ಲಿ ಆ ಘಟನೆ ಕುರಿತು ಮೇಲಾಧಿಕಾರಿಗಳು ಪತ್ರಕರ್ತರೊಂದಿಗೆ ಮಾತನಾಡುವಾಗ ಮೂಡಲಗಿ ತಾಲೂಕಿಗೆ ಬರಿ 400 ಕಿಟ್ಟ ಬಂದಿದೆ ಅದರಲ್ಲೇ ಹೀಗೆ ಅವ್ಯವಹಾರ ನಡೆದಿದೆ ಎಂದು ಪತ್ರಕರ್ತರು ಕೇಳಿದಾಗ ತನಿಖಾಧಿಕಾರಿಗಳು ಹೇಳಿದ ಮಾತು ಕೇಳಿ ಪತ್ರಕರ್ತರಿಗೆ ಒಂದು ಕ್ಷಣ ದಿಗ್ಬçಮೆಯಾಗಿದೆ, ಯಾಕೆಂದರೆ ಅವರು ಹೇಳಿರುವುದು ಏನು ಗೋತ್ತಾ.. ಅದು ಮೂಡಲಗಿ ತಾಲೂಕಿಗೆ 500 ಕಿಟ್ಟಗಳ ಬಂದಿದೆ ಎಂದು.
ಹಾಗಾದರೇ ಇನ್ನುಳಿದ ಆ 100 ಆಹಾರ ಕಿಟ್ಟಗಳನ್ನು ಎಲ್ಲಿಗೆ ಹೋದವು ಎಂದು ಅಧಿಕಾರಿಗಳನ್ನು ಪತ್ರಕರ್ತರು ಪ್ರಶ್ನಿಸಿದ್ದಾಗ ಅಧಿಕಾರಿಗಳು ಮಾವರಕರ ಸಾಹೇಬರಿಗೆ ಪೊನ್ ಮಾಡಿ ಮಾಹಿತಿ ಕೇಳಿದಾಗ ಆ 100 ಕಿಟ್ಟಗಳನ್ನು ಗೋಕಾಕದಲ್ಲಿ ಇಟ್ಟಿನಿದಿ ಎಂದು ಹೇಳಿದ್ದಾರೆ ಇದನ್ನು ನೋಡಿದರೇ ಸಾಹೇಬರು ಈ ಘಟನೆನಿಂದ ತಪ್ಪಿಸಿಕೊಳ್ಳಲು ಒಳ್ಳೆಯ ಕುತಂತ್ರದ ಜಾಲವನ್ನು ರೆಡಿ ಮಾಡಿಕೊಂಡದAತೆ ಕಾಣುತ್ತದೆ.
ಇದಕ್ಕೆ ಪತ್ರಕರ್ತರು ಮಾತನಾಡಿ, ಅಧಿಕಾರಿ ಹೇಳುವು ಸತ್ಯಕ್ಕೆ ದೂರವಾದ ಮಾತುಗಳು ಹೇಳುತ್ತಿದ್ದಾರೆ, 100 ಕಿಟ್ಟಗಳು ಗೊಕಾಕದಲ್ಲಿ ಇದ್ದರೇ ನಾವು ಕೇಳಿದಾಗ ಹೇಳದೇ ಇರುವ ಇವರು ತನಿಖಾ ಸಮಯದಲ್ಲಿ ಹೇಳುವದನ್ನು ನೋಡಿದರೇ ಅವರು ತಪ್ಪಸಿಕೊಳ್ಳಲು ಉಪಾಯ ಮಾಡಿದಂತೆ ಕಾಣುತ್ತದೆ, ಆದರಿಂದ ತನಿಖಾಧಿಕಾರಿಗಳು ಸೂಕ್ತವಾದ ತನಿಖೆ ಮಾಡಿ ಎಂದು ಹೇಳಿದರು.
ಹೀಗೆ ಅನೇಕ ಅಧಿಕಾರಿ ಮೇಲೆ ಇರುವ ಆರೋಪಗಳ ಜೊತೆಗೆ ಮಾವರಕರ ಸಾಹೇಬರು ಪತ್ರಕರ್ತನಿಗೆ ಅಸಭ್ಯವಾಗಿ ವರ್ತಿಸಿದ ಬಗ್ಗೆಯೂ ಚರ್ಚಿಸಿದ ಅಧಿಕಾರಿಗಳು ಕೊನೆಗೆ ಪುರಸಭೆಯ ಆರೋಗ್ಯ ಕಿರಿಯ ನಿರಿಕ್ಷಕ ಪ್ರೀಮತ್ ಬೋವಿ ಅವರ ಜೊತೆ ಕಿಟ್ಟಗಳನ್ನು ಯಾವಗ ತಂದು ಪುರಸಭೆಯಲ್ಲಿ ಇರಿಸಿದರು ಹಾಗೂ ಎಷ್ಟು ಕಿಟ್ಟಗಳನ್ನು ಇಳಿಸಲಾಗಿತ್ತು ಎಂಬ ಪ್ರಶ್ನೇಗೆ ಬೋವಿ ಅವರು ನಮ್ಮ ಪುರಸಭೆಯಲ್ಲಿ ಬರಿ 400 ಕಿಟ್ಟಗಳನ್ನು ಇಳಿಸಿದ್ದಾರೆ ಎಂದು ಉತ್ತರ ನೀಡಿದರು. ಹೀಗೆ ಘಟನೆಯ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಪಡೆದರು.
ಈ ಸಮಯದಲ್ಲಿ ಹಿರಿಯ ಪತ್ರಕರ್ತರಾದ ವಾಯ್ ವಾಯ್ ಸುಲ್ತಾನಪೂರ ಹಾಗೂ ಕೃಷ್ಣಾ ಗಿರೇನ್ನವರ, ಮಲ್ಲು ಬೋಳನವರ, ಭೀಮಶಿ ತಳವಾರ, ಸುಭಾಷ ಗೋಡ್ಯಾಗೋಳ, ಸುಧಾಕರ ಉಂದ್ರಿ, ರಾಜು ಮಗದುಮ್, ಈಶ್ವರ ಢವಳೇಶ್ವರ, ಯಾಕುಬ ಸಣ್ಣಕ್ಕಿ ಉಪಸ್ಥಿತರಿದ್ದರು
ವರದಿ ಮಾಡಿ ತನಿಖಾ ತಂಡ ಬರುವವರೆಗೂ ಇಲ್ಲದ 100 ಕಿಟ್ಟಗಳು ತನಿಖಾ ತಂಡ ಬಂದ ಮೇಲೆ 100 ಕಿಟ್ಟಗಳು ಗೊಕಾಕದಲ್ಲಿ ಇದ್ದಾವೇ ಎಂದು ಹೇಳಿದ ಅಧಿಕಾರಿ ಮೊದಲು ಮೂಡಲಗಿ ತಾಲೂಕಾ ಆಡಳಿತ ಅಧಿಕಾರಿಗಳಿಗೆ ಹಾಗೂ ಪತ್ರಕರ್ತರ ದಾರಿ ತಪ್ಪಿಸುವಂತ ಕೆಲಸ ಮಾಡಿದ್ದಾರೆ ಹಾಗೂ ಪತ್ರಕರ್ತನಿಗೆ ಅಸಭ್ಯವಾಗಿ ವರ್ತಿಸಿದರಿಂದ ಆ ಅಧಿಕಾರಿಗೆ ಸೂಕ್ತವಾದ ಕ್ರಮಕೈಗೊಳ್ಳಬೇಕೆಂದು ಪತ್ರಕರ್ತರ ಆಗ್ರಹವಾಗಿದೆ