Breaking News
Home / ತಾಲ್ಲೂಕು / ಆಧಾರ್ ಸಮಸ್ಯೆ ಕೇಳುವವರಿಲ್ಲದೇ ಪರದಾಡುತ್ತಿರುವ ಮೂಡಲಗಿ ತಾಲೂಕಿನ ಜನತೆ

ಆಧಾರ್ ಸಮಸ್ಯೆ ಕೇಳುವವರಿಲ್ಲದೇ ಪರದಾಡುತ್ತಿರುವ ಮೂಡಲಗಿ ತಾಲೂಕಿನ ಜನತೆ

Spread the love

ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು | ಆಧಾರ್ ಸಮಸ್ಯೆ ಕೇಳುವವರಿಲ್ಲದೇ ಪರದಾಡುತ್ತಿರುವ ಮೂಡಲಗಿ ತಾಲೂಕಿನ ಜನತೆ.

ಮೂಡಲಗಿ: ಇಡೀ ದೇಶದ ತುಂಬ ಕೊರೋನಾ ಮಹಾಮಾರಿಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದ ಜನತೆ ಇಂದು ಆಧಾರ ಸಲುವಾಗಿ ನಿದ್ದೆಗೆಟ್ಟು ತಮ್ಮ ಆಧಾರ ತಿದ್ದುಪಡಿ ಹಾಗೂ ಹೊಸ ಆಧಾರ ಮಾಡಿಕೊಳ್ಳಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಹೌದು ಓದುಗರೇ ಮೊದಲೇ ಕೊರೋನಾದಿಂದ ತತ್ತರಿಸಿದ ಜನತೆಗೆ ಮತ್ತೇ ಪ್ರವಾಹದ ಭೀತಿ ಎದುರಾಗಿ ಜನತೆಯ ಪಾಡು ಹೇಳತೀರದು, ಇಂತಹ ಕಷ್ಟಕರ ಸಂದರ್ಭದಲ್ಲಿ ತಾಲೂಕಿನ ಆಧಾರ್ ಸೇವಾ ಕೇಂದ್ರಗಳ ಬಂದ್‌ನಿoದಾಗಿ ತಾಲ್ಲೂಕು ಹಾಗು ಸುಮುತ್ತಲಿನ ಹಳ್ಳಿಗಳ ಜನತೆ ರೋಸಿ ಹೋಗಿದ್ದು ಸರ್ಕಾರದ ವಿರುದ್ದ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕು ವ್ಯಾಪ್ತಿಯಲ್ಲಿ ಅಂದಾಜು 3 ಲಕ್ಷ ಜನಸಂಖ್ಯೆ ಇದ್ದು ತಾಲೂಕಿನಲ್ಲಿ 4 ರಿಂದ 6 ಖಾಸಗಿ ಆಧಾರ್ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಕೆಲವು ತಿಂಗಳಿನಿoದ ಏಕಾ ಏಕಿಯಾಗಿ ಆಧಾರ್ ಸೇವಾ ಕೇಂದ್ರಗಳೂ ಬಂದ್ ಆಗಿರುವುದರಿಂದ ಹೊಸ ಆಧಾರ ಕಾರ್ಡ್ ಮತ್ತು ಆಧಾರ್ ತಿದ್ದುಪಡಿಗಾಗಿ ಅಲೆದಾಡುತ್ತಿರುವ ಜನರ ಗೋಳು ಕೇಳುವವರಿಲ್ಲದೇ ಸಾರ್ವಜನಿಕರು ಕಂಗಾಲಗಿದ್ದಾರೆ. ಪಟ್ಟಣದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮತ್ತು ಅಂಚೆ ಕಛೇರಿಯಲ್ಲಿ ಏರಡು ಆಧಾರ್ ಕೇಂದ್ರ ಕಾರ್ಯನಿರ್ವಸುತ್ತಿದ್ದವು ಅವು ಈಗ ಬಂದ್ ಆಗಿವೆ.

ಸರಕಾರದ ಎಲ್ಲ ಯೋಜನೆಗಳಿಗೆ ಆಧಾರ ಕಾರ್ಡ್ ಕಡ್ಡಾಯಗೊಳಿಸಿಲ್ಲವಾದರು. ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಆಧಾರ್ ನಂಬರ್ ನೀಡುವ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಾಗತಾರ್ಹ. ಆದರೆ ಹೊಸ ಕಾರ್ಡಗಳು ಹಾಗೂ ಕಾರ್ಡ್ಗಳ ತಿದ್ದುಪಡಿಗೆ ಸೂಕ್ತವಾದ ಪರಿಹಾರ ಕಂಡುಕೊಳ್ಳದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

ಈ ಮೊದಲು ಖಾಸಗಿ ಆನ್‌ಲೈನ್ ಸೆಂಟರ್‌ನಲ್ಲಿ ಆಧಾರ ಕಾರ್ಡ್ಗಳನ್ನು ಆನ್‌ಲೈನ ಮುಖಾಂತರ ಮಾಡಿಕೊಡಲಾಗುತ್ತಿತ್ತು ಇದು ಜನರಿಗೆ ಅನುಕೂಲವಾಗಿತ್ತು. ಈಗ ಏಕಾಏಕಿ ಬಂದ್ ಮಾಡಿದ್ದರಿಂದಾಗಿ ಜನ ತೊಂದರೆ ಅನುಭವಿಸುವಂತಾಗಿದೆ.

ವಿದ್ಯಾರ್ಥಿಗಳಿಗೆ ಆಧಾರ್ ಗೋಳು: ಶಿಕ್ಷಣ ಇಲಾಖೆಯ ವಿಧ್ಯಾರ್ಥಿ ವೇತನ ಇನ್ನು ಹಲವು ಯೋಜನೆಗೆ ಆಧಾರ್ ಕಾರ್ಡ ಮುಖ್ಯವಾಗಿದೆ. ವಿದ್ಯಾರ್ಥಿಗಳು ಶಾಲಾ ದಾಖಲಾತಿ ಮತ್ತು ಆಧಾರ್ ಕಾರ್ಡನಲ್ಲಿ ಹೆಸರು ಸ್ವಲ್ಪ ಬದಲಾವಣೆ ಆಗಿದ್ದರು ಅಂಕಪಟ್ಟಿ ಪಡೆಯಲು ಸಾಧ್ಯವಾಗುವುದಿಲ್ಲ ಇದು ವಿದ್ಯಾರ್ಥಿಗಳಿಗೂ ನುಂಗಲಾರದ ತುತ್ತಾಗಿದೆ.

ಗರ್ಭಿಣಿಯರ ಪರದಾಟ: ಮದುವೆಯಾದ ಹೆಣ್ಣು ಮಕ್ಕಳು ತವರು ಮನೆಯ ಅಧಾರ್ ಕಾರ್ಡಗಳ ವಿಳಾಸ ಮತ್ತು ಹೆಸರು ತಿದ್ದುಪಡಿಗೊಳಿಸಿ ಗಂಡನ ಮನೆಯ ಹೆಸರಿನೊಂದಿಗೆ ಸೇರಿಸಿ ವರ್ಗಾಯಿಸಿಕೊಳ್ಳಬೇಕಾಗಿದೆ. ಅಲ್ಲದೇ ಸರ್ಕಾರ ಗರ್ಭಿಣಿ ಮತ್ತು ಬಾಣಂತಿಯರಿಗೆ ಹಲವು ಯೋಜನೆಗಳನ್ನು ಜಾರಿ ತಂದಿದೆ. ಈ ಎಲ್ಲ ಯೋಜನೆಗಳನ್ನು ಪಡೆಯಲೂ ಆಧಾರ್ ಕಾರ್ಡ ಕಡ್ಡಾಯವಾಗಿದ್ದು ಗರ್ಭಿಣಿಯರು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅಸಾಧ್ಯವಾಗಿದೆ ಎಂದು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ನೆರೆ ಸಂತ್ರಸ್ತರ ಗೋಳು : ನೆರೆ ಪ್ರವಾಹದಿಂದ ತಮ್ಮ ಮನೆಗಳನ್ನು ಕಳೆದುಕೊಂಡ ಹಾಗೂ ಬೆಳೆ ನಾಶಕ್ಕೆ ಸರಕಾರ ನೀಡುವ ಧನ ಸಹಾಯ ಹಣವನ್ನು ಪಡೆದುಕೊಳ್ಳಲು ಆಧಾರ ಕಾರ್ಡ ಕಡ್ಡಾಯ ಇದೆ. ಆದರೆ ನೆರೆ ಪ್ರವಾಹ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋದ ಕಾರ್ಡ ಹಾಗೂ ತಿದ್ದುಪಡಿಗಾಗಿ ಪರದಾಡುವಂತಾಗಿದೆ.

ಪ್ಯಾನ್ ಕಾರ್ಡ್ಗೂ ಆಧಾರ್ ಕಂಟಕ: ಬ್ಯಾಂಕ್‌ಗಳಲ್ಲಿ ಗ್ರಾಹಕರು ವಹಿವಾಟು ನಡೆಸಲು ಮತ್ತು ಹೊಸ ಖಾತೆ ತೆರೆಯಲು ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ ಕಡ್ಡಾಯಗೊಳಿಸಿದೆ. ಪ್ಯಾನ್ ಕಾರ್ಡಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿರುವುದರಿಂದ ಪ್ಯಾನ್ ಕಾರ್ಡಿಗೂ ಆಧಾರ ಕಾರ್ಡ್ ಕಡ್ಡಾಯದಿಂದಾಗಿ ರೈತರು, ವ್ಯಾಪಾರಸ್ಥರು ಪರದಾಡುವಂತಾಗಿದೆ.
ಸಾರ್ವಜನಿಕರು, ಸಂಘಟನೆಗಳು ಇದರ ವಿರುದ್ದು ಹಲವೂ ಬಾರಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರೂ ಯಾರೊಬ್ಬ ಅಧಿಕಾರಿಯೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು. ಸಾರ್ವಜನಿಕರ ಸಹನೆಯ ಕಟ್ಟೆ ಹೊಡೆಯುವ ಮುನ್ನ ಅಧಿಕಾರಿಗಳು ಎಚ್ಚೇತ್ತುಕೊಂಡು ಜನರಿಗೆ ಆಗುತ್ತಿರುವ ತೊಂದರೆ ಸರಿಪಡಿಸಲಿ ಎನ್ನುವುದೇ ಪ್ರಜ್ಙಾವಂತ ನಾಗರಿಕರ ಆಶಾಭಾವನೆಯಾಗಿದೆ.

ತಾಲೂಕಾಗಿ ಎರಡು ಮೂರು ವರ್ಷ ಕಳೆದರೂ ಅಧಿಕಾರಿಗಳು ಮಾತ್ರ ಹೇಳುವುದೇ ಒಂದೇ ಒಂದು ಉತ್ತರ ಶೀಘ್ರವಾಗಿ ಪ್ರಾರಂಭವಾಗುತ್ತವೆ ಎಂದು ಹೇಳಿ ಜಾರಿಕೊಳ್ಳಯವ ದಾರಿ ಹುಡುಕುತ್ತಾರೆ ಹೊರೆತು ಜನರ ಗೋಳು ಮಾತ್ರ ತಪ್ಪಿದಲ್ಲ. ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಸರಿಪಡಿಸಬೇಕಾದ ಅಧಿಕಾರಿಗಳು ಮಾತ್ರ ತಮ್ಮಗೂ ಸಾರ್ವಜನಿಕರಿಗೂ ಸಂಬoಧವಿಲ್ಲದoತೆ ಕಾರ್ಯನಿರ್ವಹಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
• ಸಾರ್ವಜಕರು

ನಗರದಲ್ಲಿರುವ ಖಾಸಗಿ ಆಧಾರ್ ಕೇಂದ್ರಗಳು ಬಂದ್ ಆಗಿ ಎಂಟು ತಿಂಗಳು ಕಳೆದಿದೆ. ಸರಕಾರದ ಎಲ್ಲ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಸರ್ಕಾರದ ಆಧಾರ್ ಎಜೆನ್ಸಿಗಳು ಕೂಡ ಕೆಲವೂ ದಿನಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲವಾಗಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರವಾಗಿ ಪಟ್ಟಣದಲ್ಲಿ ಹೆಚ್ಚಿನ ಆಧಾರ್ ಕೇಂದ್ರಗಳನ್ನು ಪ್ರಾರಂಭಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು.
• ಶಿವರೆಡ್ಡಿ ಹುಚ್ಚರಡ್ಡಿ ಜಯ ಕರ್ನಾಟಕ ಸಂಘಟನಾ ತಾಲೂಕ ಅಧ್ಯಕ್ಷ


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ