Breaking News
Home / ತಾಲ್ಲೂಕು / ಅರಭಾವಿ ಬ್ಲಾಕ್ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ  ಮುಖಂಡರಲ್ಲಿ ಆರೋಪ-ಪ್ರತ್ಯಾರೋಪದ ಸುರಿಮಳೆ

ಅರಭಾವಿ ಬ್ಲಾಕ್ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ  ಮುಖಂಡರಲ್ಲಿ ಆರೋಪ-ಪ್ರತ್ಯಾರೋಪದ ಸುರಿಮಳೆ

Spread the love

ಅರಭಾವಿ ಬ್ಲಾಕ್ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ  ಮುಖಂಡರಲ್ಲಿ ಆರೋಪ-ಪ್ರತ್ಯಾರೋಪದ ಸುರಿಮಳೆ

ಪಕ್ಷದ ಹೆಸರಿನಲ್ಲಿ ನಡೆಸಿದ ಸಭೆ ಅನಧಿಕೃತ ಹಿಟ್ಟಣಗಿ ಆರೋಪ

ಮೂಡಲಗಿ : ಕಾಂಗ್ರೆಸ್ ಅಭ್ಯರ್ಥಿ ಅರವಿಂದ ದಳವಾಯಿಯವರ ಸಮ್ಮತಿ ಇಲ್ಲದೇ ಗುರ್ಲಾಪೂರ ಆಯ್.ಬಿ.ಯಲ್ಲಿ ಕೆಲವರು ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಸಭೆಯೊಂದನ್ನು ನಡಿಸಿದ್ದಾರೆ ಅದು ಅನಧಿಕೃತ ಸಭೆ ಎಂದು ಅರಭಾವಿ ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ ಗುರುಪ್ಪ ಹಿಟ್ಟಣಗಿ ಆರೋಪ ಮಾಡಿದ್ದಾರೆ.

ಮೂಡಲಗಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, 2018ರ ವಿಧಾನಸಭೆ ಚುನಾವಣೆಯ ನಂತರ ಪಕ್ಷದ ಸಭೆ ಮತ್ತು ಕಾರ್ಯಕ್ರಮಗಳಲ್ಲಿ ಅಪ್ಪಿತಪ್ಪಿಯೂ ಕಾಣಿಸಿಕೊಳ್ಳದವರು ಇದ್ದಕ್ಕಿದ್ದಂತೆ ಪಕ್ಷ ಕಟ್ಟುವ ಕುರಿತು ಮಾತನಾಡುತ್ತಿರುವುದು ಸೋಜಿಗವೆನಿಸುತ್ತಿದೆ. ಆ ಸಭೆಯಲ್ಲಿ ಭಾಗವಹಿಸಿದವರು ಬಾಲಚಂದ್ರ ಜಾರಕಿಹೊಳಿಯವರ ಹಿಂಬಾಲಕರಾಗಿದ್ದಾರೆ ಎಂದರು.

ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷರೆಂದು ಹೇಳಿಕೊಳ್ಳುವ ಕಲ್ಲನಗೌಡ ಲಕ್ಕರ ಹಾಗೂ ಭರಮಣ್ಣ ಉಪ್ಪಾರ ಎಂಬುವವರು ಬಾಲಚಂದ್ರ ಜಾರಕಿಹೊಳಿ ಕಚೇರಿಯಿಂದ ಬರುವ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಾರೆ. ಇನ್ನು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷನೆಂದು ಹೇಳಿಕೊಳ್ಳುವ ಲಕ್ಕಣ್ಣ ಸವಸುದ್ದಿ ಅಧಿಕೃತವಾಗಿದಾರೆಯೇ ? ಎಂದು ಟೀಕಿಸಿದರು.

ಮೂಲ ಕಾoಗ್ರೆಸ್ಸಿಗನೆಂದು ಹೇಳಿಕೊಳ್ಳುವ ಸುಭಾಸ ಸೋನವಾಳ್ಕರ ಎಂಬುವವು ಮೂಡಲಗಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 500ಕ್ಕಿಂತಲೂ ಕಡಿಮೆ ಮತಗಳು ಬಂದಿವೆ. ಹಾಗಾದರೆ ಇವರು ಯಾರ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ರಮೇಶ ಉಟಗಿ ಕಾಗ್ರೆಸ್ ಪಕ್ಷದ ಉಪ್ಪುಂಡರೂ ಪಕ್ಷದ್ರೋಹವೆಸಗಿದ್ದಾರೆ ಎಂದರು.

ಗುರುರಾಜ ಪೂಜೇರಿ ನ್ಯಾಯಾಲಯದ್ಲಿ ಓಡಾಡಿಕೊಂಡಿದ್ದ ಈತನನ್ನು ದಳವಾಯಿಯವರೇ ಕರೆದು ಬ್ಲಾಕ್ ಆಧ್ಯಕ್ಷನನ್ನಾಗಿ ಮಾಡಿಸಿದ್ದರು. ಆದರೆ ಅವರ ವಿರುದ್ದವೇ ತಂತ್ರಗಾರಿಕೆ ಮಾಡುವ ಮೂಲಕ ತಾನೊಬ್ಬ ಕೃತಘ್ನ ಎಂದು ಸಾಬೀತು ಮಾಡುತ್ತಿದ್ದಾನೆ. ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ತನ್ನ ಸ್ವಂತ ಗ್ರಾಮದಲ್ಲೇ ಕಾರ್ಯಕ್ರಮ ಮಾಡದೇ ಬ್ಲಾಕ್ ಅಧ್ಯಕ್ಷನಾಗಲು ತಾನು ಅನರ್ಹನೆಂದು ಸಾಬೀತು ಮಾಡಿದ್ದಾನೆ ಎಂದರು.

ದಳವಾಯಿಯವರ ಸತತ ಪರಿಶ್ರಮದಿಂದಾಗಿ ಅರಭಾವಿಯಲ್ಲಿ ಮತ್ತೆ ಕಾಗ್ರೆಸ್ ಪಕ್ಷ ಚಿಗುರುತ್ತಿದೆ. ಆದ್ದರಿಂದ ಎದುರಾಳಿ ಪಕ್ಷದವರು ಇಂತಹ ಪಕ್ಷದ್ರೋಹಿಗಳನ್ನು ಕಟ್ಟಿಕೊಂಡು ಆಟವಾಡುತ್ತಿದ್ದಾರೆ. ಕಾರ್ಯಕರ್ತರು ಇವರ ಬಣ್ಣದ ಮಾತಿಗೆ ಮರುಳಾಗಬಾರೆಂದು ಹಾಘೂ ದಳವಾಯಿಯವರ ನೇತೃತ್ವದಲ್ಲಿ ವಿಶ್ವಾಸವಿದಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕಾ.ಕೌಜಲಗಿ ಬ್ಲಾಕ್ ಕಾ.ಸಮೀತಿ ಕಾರ್ಯಧ್ಯಕ್ಷ ಸಲೀಮ ಇನಾಮದಾರ ಮಾತನಾಡಿ, ಅಕ್ಟೋಬರ 2ರಂದು ಅರಭಾವಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರಯವರ ಬಳಿ ಅನಧಿಕೃತ ಸಭೆ ನಡೆಸಿರುವ ಬಗ್ಗೆ ಚರ್ಚೆ ಮಾಡಲಾಗುವುದು. ಅವಾಗಲೇ ಅವರವರ ಬಣ್ಣ ಬಯಲಾಗುತ್ತದೆ ಎಂದು ಹೇಳಿದರು.

ಈ ಪತ್ರಿಕಾ ಗೋಷ್ಠಿಯಲ್ಲಿ ಕಾ.ಅ.ಬ್ಲಾಕ್ ಓಬಿಸಿ ಘಟಕದ ಅಧ್ಯಕ್ಷ ಚೌಡಯ್ಯ ತಳವಾರ, ಕಾ.ಕೌಜಲಗಿ ಅ.ಸಂ. ಘಟಕದ ಅಧ್ಯಕ್ಷ ಇಮಾಮಸಾಬ ಹುನ್ನೂರ, ಲಕ್ಷ್ಮಣ ಅಲಕನೂರ, ಎಮ್ ವಾಯ್ ಶಿವಾನಂದ, ರಾಘವೇಂದ್ರ ಬಡಿಗೇರ, ಆರೀಪ್ ಬಳಿಗಾರ, ಮಲ್ಲಿಕ್ ಕಳ್ಳಿಮನಿ ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ