ಕೊರೊನಾ ಸೋಂಕು ಹಿನ್ನೆಲೆ:
ಸಾವಳಗಿ ಪೀಠದಲ್ಲಿ ದಸರಾ ಉತ್ಸವ ರದ್ದು
ಗೋಕಾಕ: ಸರ್ಕಾರದ ನಿರ್ದೇಶನ ಹಾಗೂ ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಕ್ಷೇತ್ರ ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠದಲ್ಲಿ ಈ ವರ್ಷದ ‘ದಸರಾ ಉತ್ಸವ-2020’ವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸನ್ನಿಧಿಯವರು ತಿಳಿಸಿದ್ದಾರೆ.
ವೇದಿಕೆ ಕಾರ್ಯಕ್ರಮಗಳು ಸೇರಿದಂತೆ, ಮೆರವಣಿಗೆ, ಸೀಮೋಲ್ಲಂಘನ ಇವು ಯಾವು ಇರುವುದಿಲ್ಲ ಎಂದು ತಿಳಿಸಿದ್ದಾರೆ. ಭಕ್ತರಿಗೂ ಸನ್ನಿಧಿಯವರ ದರ್ಶನವು ನಿಷೇಧಿಸಲಾಗಿದೆ, ನಾಡಿನ ಭಕ್ತರು ಸಹಕರಿಸಬೇಕು ಎಂದು ಪೀಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
