ಇಬ್ಬರು ಜಾನುವಾರು ಕಳ್ಳರ ಬಂಧನ,ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ನೇತೃತ್ವದ ತನಿಖಾ ತಂಡದಿಂದ ಯಶ್ವಿಸಿ ಕಾರ್ಯಾಚರಣೆ
ಮೂಡಲಗಿ: ಇಲ್ಲಿಯ ದನಗಳ ಪೇಟಿಯಲ್ಲಿ ಮಾರಾಟಕ್ಕೆ ಕಟ್ಟಿದ ಎರಡು ಎಮ್ಮೆ ಒಂದು ಆಕಳವನ್ನು ಕಳ್ಳತನ ಮಾಡುತ್ತಿದ ಇಬ್ಬರು ಆರೋಪಿಗಳನ್ನು ಗುರುವಾರ ಪೊಲೀಸರು ಜಾರನುವರಗಳ ಸಮೇತ ಕಳ್ಳರನ್ನು ಹಿಡಿಯಲು ಯಶ್ವಿಸಿಯಾಗಿದ್ದಾರೆ.
ರವಿವಾರ ನ.1ರಂದು ರಾತ್ರಿ ವೇಳೆ ಕಳ್ಳತನವಾಗಿರುವ ಕುರಿತು ನ.2ರಂದು ಪೀರಸಾಬ ಇಸ್ಮಾಯಿಲ್ ಬೇಪಾರಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು, ನ.5ರಂದು ಗೋಕಾಕ ಸಂತೆಗೆ ಮಾರಾಟ ಮಾಡಲು ಆರೋಪಿಗಳು ಬಲೋರೊ ಪಿಕಫ್ ವಾಹನದಲ್ಲಿ ಜಾನುವಾಗಳನ್ನು ತೆಗೆದುಕೊಂಡು ಹೋಗವ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿ, 85000 ಸಾವಿರ ರೂ, ಕಿಮ್ಮತ್ತಿನ ಜಾನುವಾರಗಳು ಹಾಗೂ ಕೃತ್ಯಕ್ಕೆ ಬಳಸಿದ 3ಲಕ್ಷದ ಕಿಮ್ಮತ್ತಿನ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಮೂಡಲಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 180/2020 ಕಲಂ: 379 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಳಲಿಸಿಕೊಂಡು ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಕೊಂಡು ಎಮ್,ಎಸ್.ಬಡಿಗೇರ, ಆರ್.ಎಸ್.ಪೂಜೇರಿ, ಎನ್.ಎಸ್.ವಡೆಯರ, ಡಿ.ಜಿ.ಕೊಣ್ಣೂರ, ಎಸ್.ಪಿ.ಪೂಜೇರಿ, ಜಿ,ಎನ್,ಕಾಗವಾಡರವರ ತಂಡ ರಚನೆ ಮಾಡಿ ಕಲ್ಲೋಳಿ ಪಟ್ಟಣದ ರವಿಂದ್ರ ತೆಳಗಡೆ(34) ಹಾಗೂ ಮೂಡಲಗಿ ಪಟ್ಟಣದ ಉಸ್ಮಾನ ಶೇಖ(20) ಎಂಬ ಆರೋಪಿಗಲನ್ನು ಬಂಧಿಸಿದ್ದಾರೆ.