ಕಾಶೀಮಅಲಿ ಸೊಸಾಯಿಟಿಯಿಂದ ಬಿಡಿಸಿಸಿ ನೂತನ ನಿರ್ದೇಶಕರಿಗೆ ಸನ್ಮಾನ
ಮೂಡಲಗಿ : ಸಹಕಾರಿ ಸಂಘಗಳ ಪ್ರಗತಿಗೆ ಸೊಸಾಯಿಟಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ನಿಸ್ವಾರ್ಥ ಸೇವೆಯೇ ಮುಖ್ಯವಾವುದು ಎಂದು ಬಿಡಿಸಿಸಿ ಬ್ಯಾಂಕಿಗೆ ಸತತವಾಗಿ ನಾಲ್ಕನೆ ಬಾರಿಗೆ ಆಯ್ಕೆಯಾದ ದಿ.ಮೂಡಲಗಿ ಸಹಕಾರಿ ಬ್ಯಾಂಕ ಅಧ್ಯಕ್ಷ ಸುಭಾಸ ಢವಳೇಶ್ವರ ಹೇಳಿದರು.
ಶನಿವಾರದಂದು ಪಟ್ಟಣದ ಕಾಶೀಮಅಲಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ವತಿಯಿಂದ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಸೊಸಾಯಿಟಿ ಅಧ್ಯಕ್ಷ ಅನ್ವರ ನದಾಫ್ ಮತ್ತು ಆಡಳಿ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನದಿಂದ ಕಾಶೀಮಅಲಿ ಸೊಸಾಯಿಟಿಯು ಉತ್ತಮ ಹೆಸರು ಪಡೆದಿದೆ ಎಂದರು.
ಸಮಾರಂಭದಲ್ಲಿ ದಿ.ಮೂಡಲಗಿ ಸಹಕಾರಿ ಬ್ಯಾಂಕಿನ ನಿರ್ದೇಶಕ ರುದ್ರಪ್ಪ ವಾಲಿ ಅವರನ್ನು ಸತ್ಕರಿಸಿದರು.
ಸೊಸಾಯಿಟಿ ಉಪಾಧ್ಯಕ್ಷ ಅಪ್ಪಾಸಾಬ ನದಾಫ, ಆಡಳಿತ ಮಂಡಳಿಯ ಎಮ್ ಎ ನದಾಫ್, ಇಸಾಕಅಹ್ಮದ ನದಾಫ, ಮೀರಾಸಾಬ ನದಾಫ, ಮಲೀಕಜಾನ ನದಾಫ, ದಸ್ತಗೀರಸಾಬ ನದಾಫ, ಮುಬಾರಕ ಪಿಂಜಾರ, ಕಾರ್ಯರ್ಶಿ ಮಹ್ಮದ ಇರ್ಫಾನ ನದಾಫ, ಸಿಬ್ಬಂದಿ ವರ್ಗ ಹಾಗೂ ಮತ್ತಿತರರು ಇದ್ದರು.