Breaking News
Home / Recent Posts / ಅಂಜುಮನ ಎ ಇಸ್ಲಾಂ ಸೊಸೈಟಿಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭ

ಅಂಜುಮನ ಎ ಇಸ್ಲಾಂ ಸೊಸೈಟಿಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭ

Spread the love

ಮೂಡಲಗಿಯ ಅಂಜುಮನ ಎ ಇಸ್ಲಾಂ ಸೊಸೈಟಿಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಬೆಳಗಾವಿಯ ವಕ್ಫ ಬೋರ್ಡದ ಉಪಾಧ್ಯಕ್ಷ ಆಜಾದ ಮುಲ್ಲಾ ಮಾತನಾಡಿದರು
ಜಿಲ್ಲಾ ವಕ್ಫ ಬೋರ್ಡ್ ಉಪಾಧ್ಯಕ್ಷ ಆಜಾದ ಮುಲ್ಲಾ ಅಭಿಪ್ರಾಯ
ಅಂಜುಮನ ಸೊಸೈಟಿಯು ಸಮಾಜ ಮೆಚ್ಚುವಂತ ಕಾರ್ಯಮಾಡಬೇಕು
ಮೂಡಲಗಿ: ‘ಮುಸ್ಲಿಂ ಸಮಾಜದ ಎಲ್ಲ ಪಂಗಡಗಳು ಸೇರಿದಂತೆ ಎಲ್ಲ ಸಮಾಜದ ಜನರನ್ನು ವಿಶ್ವಾಸಕ್ಕೆ ಪಡೆದು ಅಂಜುಮನ ಎ. ಇಸ್ಲಾಂ ಸಮಿತಿಯನ್ನು ಬೆಳೆಸಬೇಕು’ ಎಂದು ಬೆಳಗಾವಿಯ ವಕ್ಫ ಬೋರ್ಡದ ಉಪಾಧ್ಯಕ್ಷ ಆಜಾದ ಮುಲ್ಲಾ ಹೇಳಿದರು.
ಇಲ್ಲಿಯ ಅಂಜುಮನ್ ಎ ಇಸ್ಲಾಂ ಸೊಸೈಟಿಯ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಮಾಡಿ ಸಮಾಜವು ಮೆಚ್ಚುವಂತೆ ಕಾರ್ಯಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಅಂಜುಮನ ಸಮಿತಿಯವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಸಮಾಜದ ಎಲ್ಲ ಯುವಕರು ಜ್ಞಾನ, ಕೌಶಲತೆಯಲ್ಲಿ ಪರಿಣಿತರನ್ನಾಗಿಸುವ ಮತ್ತು ಸಚ್ಛಾರಿತ್ರ್ಯದಲ್ಲಿ ನಡೆಯುವಂತ ಪರಿಸರ ನಿರ್ಮಿಸುವ ಮೂಲಕ ಭಾರತ ದೇಶವನ್ನು ಬಲಿಷ್ಠವನ್ನಾಗಿಸಬೇಕು ಎಂದರು.
ಸಂಘ, ಸಂಸ್ಥೆಗಳು ಬೆಳೆಯಲು ಕೇವಲ ಅಧ್ಯಕ್ಷ, ಉಪಾಧ್ಯಕ್ಷರಿಂದ ಮಾತ್ರ ಸಾಧ್ಯವಿಲ್ಲ, ಸಂಘದ ಪ್ರತಿಯೊಬ್ಬ ಸದಸ್ಯನೂ ಸಂಸ್ಥೆಯ ಬೆಳವಣಿಗೆಗೆ ಪರಿಶ್ರಮಪಡಬೇಕು. ಅಂದರೆ ಮಾತ್ರ ಸಂಸ್ಥೆಗಳು ಬೆಳೆಯುತ್ತವೆ ಎಂದರು.
ಮೂಡಲಗಿ ಅಂಜುಮನ್ ಎ ಇಸ್ಲಾಂ ಸೊಸೈಟಿಯಲ್ಲಿ ಎಲ್ಲರೂ ಕ್ರೀಯಾಶೀಲರಾಗಿದ್ದು, ಉತ್ತಮ ಭವಿಷ್ಯವಿದೆ ಎಂದು ಆಜಾದ ಮುಲ್ಲಾ ಹಾರೈಸಿದರು.
ಸಾಹಿತಿ ಬಾಲಶೇಖರ ಬಂದಿ ಹಾಗೂ ಪುರಸಭೆ ಮಾಜಿ ಸದಸ್ಯ ರಮೇಶ ಸಣ್ಣಕ್ಕಿ ಮಾತನಾಡಿದರು.
ಎನ್‍ಎಸ್‍ಎಫದ ದಾಸಪ್ಪ ನಾಯಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಮಲೀಕ ಹುಣಶ್ಯಾಳ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಧರ್ಮ ಗುರು ಖುತುಬುದ್ದಿನ ಬಸಾಪುರೆ,
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಜಿಆರ್‍ಬಿಸಿ ನಿವೃತ್ತ ಅಭಿಯಂತರರು ಎಸ್.ಡಿ. ಮುಲ್ಲಾ ಭಾಗವಹಿಸಿದ್ದರು.
ಸಂಘದ ಸದಸ್ಯ ಲಾಲಸಾಬ ಸಿದ್ದಾಪುರ ಪ್ರಾಸ್ತಾವಿಕ ಮಾತನಾಡಿ ಸಂಘದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ವೈದ್ಯಕೀಯ ಅಂಬುಲೆನ್ಸ್ ಸೇವೆ ಪ್ರಾರಂಭಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.
ಆರ್.ಪಿ. ಸೋನವಾಲಕರ, ರವೀಂದ್ರ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ಪುರಸಭೆ ಸದಸ್ಯರಾದ ಶಿವಪ್ಪ ಚಂಡಕಿ, ಸಂತೋಷ ಸೋನವಾಲಕರ, ಗಫಾರ ಡಾಂಗೆ, ಅನ್ವರ ನಧಾಪ, ಜಯಾನಂದ ಪಾಟೀಲ, ಮರೆಪ್ಪ ಮರೆಪ್ಪಗೋಳ, ಪ್ರಭು ಬಂಗೆನ್ನವರ, ಸಾಬೂ ಸಣ್ಣಕ್ಕಿ, ನನ್ನುಸಾಬ ಶೇಖ, ಹುಸೇನಸಾಬ ಶೇಖ, ಮುನ್ನಾ ಬಾಗವಾನ, ಸಂಘದ ಉಪಾಧ್ಯಕ್ಷ ಮೌಲಾಸಾಬ ಮೊಗಲ, ಕಾರ್ಯದರ್ಶಿ ಶಕೀಲ ಬೇಪಾರಿ, ಖಜಾಂಚಿ ಅಕ್ಬರಸಾಬ ಪಾಶ್ಚಾಪುರ ಮತ್ತು ಸದಸ್ಯರು ಭಾಗವಹಿಸಿದ್ದರು.
ಶಿಕ್ಷಕ ಎ.ಎಲ್. ತಹವೀಲ್ದಾರ್ ನಿರೂಪಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ