ಬನವಾಸಿ: ಹದಿಹರೆಯದ ಹೆಣ್ಣು ಮಕ್ಕಳು ದೇಶದ ಮುಂದಿನ ಪ್ರಜೆಗಳು, ದೇಶದ ಅಭಿವೃದ್ದಿಯ ದೃಷ್ಟಿಯಿಂದ ಅವರ ದೈಹಿಕ, ಮಾನಸಿಕ ಹಾಗೂ ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ರಾಘವೇಂದ್ರ ನಾಯ್ಕ್ ಹೇಳಿದರು.
ಅವರು ಸಮೀಪದ ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸುಗಾವಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಇತ್ತಿಚಿನ ದಿನಗಳಲ್ಲಿ ದೇಹಕ್ಕೆ ಶ್ರಮ ನೀಡುವ ಕೆಲಸ ಮಾಡದಿರುವುದರಿಂದ ದೇಹಕ್ಕೆ ಬೇಕಾದ ಸಮಗ್ರ ಪೋಷಕಾಂಶ ದೊರೆಯುತ್ತಿಲ್ಲ ಇದರಿಂದ ಅನೇಕ ಕಾಯಿಲೆಗೆ ಒಳಪಡಬೇಕಾಗಿದೆ. ಹದಿಹರೆಯದ ಹೆಣ್ಣು ಮಕ್ಕಳು ಆರೋಗ್ಯವಂತರಾಗಿರಲು ಎಲ್ಲಾ ರೀತಿಯ ಮೊಳಕೆ ಕಾಳು, ಸೊಪ್ಪು, ದ್ವಿದಳ ಧಾನ್ಯದಿಂದ ತಯಾರಿಸಿದ ಆಹಾರ, ಹಣ್ಣು, ಮೊಟ್ಟೆ, ಹಾಲು ಸೇವಿಸಬೇಕು. ಧೂಮಪಾನ, ತಂಬಾಕು ಸೇವನೆ ಮಾಡಬಾರದು ಇದರಿಂದ ಕ್ಯಾನ್ಸರ್‍ನಂತಹ ಕಾಯಿಲೆ ಬರಲಿದೆ. ಹೆಣ್ಣು ಮಕ್ಕಳು ವೈಯಕ್ತಿಕ ಸ್ವಚ್ಛತೆ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯದ ಬದಲಾವಣೆಗಳ ಬಗ್ಗೆ ತಿಳಿದುಕೊಂಡು ವ್ಶೆದ್ಯರಿಂದ ಸೂಕ್ತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯಧಿಕಾರಿಗಳಾದ ಪದ್ಮಾವತಿ ಮತ್ತು ಗೌರಿ ಸಿ. ನಾಯ್ಕ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುಗಾವಿ ಗ್ರಾಮ ಪಂಚಾಯಿತಿಯ ಪಿಡಿಓ ವಿಜಯಲಕ್ಷ್ಮಿ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಲಲಿತಾ ಭಟ್ಟ ಹಾಗೂ ಕಿರಿಯ ಆರೋಗ್ಯ ಸಹಾಯಕಿ, ಆಶಾಕಾರ್ಯಕರ್ತರು, ಮಹಿಳೆಯರು, ಹೆಣ್ಣು ಮಕ್ಕಳು ಭಾಗವಹಿಸಿದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …