ಕನಕದಾಸರು ಭಕ್ತಿ ಪರಂಪರೆಯ ರೂವಾರಿಗಳು – ಕಡಾಡಿ
ಮೂಡಲಗಿ: ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸಭಾ ಭವನದಲ್ಲಿ ಬುಧವಾರ ಡಿ-03 ರಂದು ನಡೆದ 526 ನೇ ಕನಕದಾಸರ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಧುರಿಣರಾದ ಬಸವರಾಜ ಕಡಾಡಿ ಮಾತನಾಡಿ ಕನಕದಾಸರು ಭಕ್ತಿ ಪರಂಪರೆಗೆ ಮಾತ್ರ ಸೀಮಿತರಾಗದೇ, ಮಾನವತಾದಿ ಎಂಬುದನ್ನು ಬಿಂಬಿಸುತ್ತದೆ. 12 ಮತ್ತು 15 ನೇ ಶತಮಾನಗಳ ವಚನ ಮತ್ತು ದಾಸ ಸಾಹಿತ್ಯಗಳ ಬಹುಪಾಲು ಭಕ್ತಿ ಸಾಹಿತ್ಯಗಳೆಂದು ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ 15-16 ನೇಯ ಶತಮಾನಗಳಲ್ಲಿ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಒಬ್ಬರು. ಇವರ ಮೂಲ ಹೆಸರು ತಿಮ್ಮಪ್ಪ ನಾಯಕ. 1509 ರಲ್ಲಿ ಬಚ್ಚಮ್ಮ ಮತ್ತು ಬೀರಪ್ಪ ನಾಯಕ ಎಂಬ ದಂಪತಿಗಳ ಮಗನಾಗಿ ಹಾವೇರಿ ಜಿಲ್ಲೆಯಲ್ಲಿ ಜನಿಸಿದ ಕನಕದಾಸರು, ಕೀರ್ತನಕಾರರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಸಹಕಾರಿಯ ಉಪಾಧ್ಯಕ್ಷ ರಾಜಪ್ಪ ಗೋಸಬಾಳ ಅಧ್ಯಕ್ಷತೆ ವಹಿಸಿದ್ದರು, ನಿರ್ದೆಶಕರಾದ ಪರಪ್ಪ ಮಳವಾಡ, ಮ್ಲಲಿಕಾರ್ಜುನ ಹುಲೆನ್ನವರ, ಸೋಮನಿಂಗ ಹಡಗಿನಾಳ, ಸಿದ್ದಪ್ಪ ಹೆಬ್ಬಾಳ, ಅಡಿವೆಪ್ಪ ಕುರಬೇಟ, ತುಕಾರಾಮ ಪಾಲ್ಕಿ, ಪ್ರಧಾನ ವ್ಯವಸ್ಥಾಪಕರಾದ ಹಣಮಂತ ಕಲಕುಟ್ರಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಸಹಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …