Breaking News
Home / Recent Posts / ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ

Spread the love

ಮೂಡಲಗಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳ ಚುನಾವಣೆಯಲ್ಲಿ ಪದಾಧಿಕಾರಿಗಳ ಆಯ್ಕೆಯು 2020-25ರ ಅವಧಿಗೆ ಅವಿರೋಧವಾಗಿ ನಡೆದಿದ್ದು ಲಕ್ಷ್ಮಣ ಮುದಕಪ್ಪ ಬಡಕಲ್ ತಾಲೂಕಾ ನೂತನ ಅಧ್ಯಕ್ಷರಾಗಿ ಮತ್ತು ಎ.ಪಿ.ಪರಸನ್ನವರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಬುಡನ್‍ಸಾಬ್ ಡಾಂಗೆ ಮತ್ತು ಎಂ.ಎಂ.ಕಳಸನ್ನವರ ಉಪಾಧ್ಯಕ್ಷರಾಗಿ, ಬಿ.ಬಿ.ಕೆವಟಿ ಖಜಾಂಚಿ, ಬಿ.ಎಲ್.ನಾಯಿಕ ಮತ್ತು ಆರ್.ಎಂ.ಹುಣಶ್ಯಾಳ್ಕರ ಸಹಕಾರ್ಯದರ್ಶಿ, ವಾಯ್.ಡಿ.ಜಲ್ಲಿ ಮತ್ತು ವಿದ್ಯಾಶ್ರೀ ಎಂ. ಪೂಜಾರಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಎಸ್.ಬಿ.ತುಪ್ಪದ ಕಾರ್ಯನಿರ್ವಹಿಸಿದರು. ನೂತನ ಪದಾಧಿಕಾರಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮತ್ತು ವಲಯದ ಶಿಕ್ಷಕ ಸಮುದಾಯದವರು ಅಭಿನಂದಿಸಿದ್ದಾರೆ.


Spread the love

About inmudalgi

Check Also

ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ

Spread the loveSpread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ