Breaking News
Home / Recent Posts / ‘ನಿಸ್ವಾರ್ಥದ ಸಮಾಜ ಸೇವೆಯು ಅಮೂಲ್ಯವಾದದ್ದು’

‘ನಿಸ್ವಾರ್ಥದ ಸಮಾಜ ಸೇವೆಯು ಅಮೂಲ್ಯವಾದದ್ದು’

Spread the love

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರ ಕಾರ್ಯಚಟುವಟಿಕೆಗಳ ಪರಿವೀಕ್ಷಣೆ ಭೇಟ್ಟಿ ನೀಡಿದ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಡಾ. ಗಿರೀಶ ಕುಚಿನಾಡ ಮಾತನಾಡಿದರು

‘ನಿಸ್ವಾರ್ಥದ ಸಮಾಜ ಸೇವೆಯು ಅಮೂಲ್ಯವಾದದ್ದು’

ಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯಲ್ಲಿ ದೊರೆಯುವ ಸಂತೋಷಕ್ಕೆ ಬೆಲೆಕಟ್ಟಲಿಕ್ಕಾಗದು’ ಎಂದು ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಡಾ. ಗಿರೀಶ ಕುಚಿನಾಡ ಹೇಳಿದರು.
ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರಕ್ಕೆ ಭೇಟ್ಟಿ ನೀಡಿ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದ ನಂತರ ಶಿವಬೋಧರಂಗ ಕೋ.ಆಫ್. ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು ಸಮಾಜದ ಸೇವೆ ಮಾಡಲಿಕ್ಕೆ ಲಯನ್ಸ್ ಕ್ಲಬ್‍ವು ಉತ್ತಮವಾದ ಪರಿಸರವನ್ನು ನಿರ್ಮಿಸಿಕೊಡುತ್ತದೆ ಎಂದರು.
ಶ್ರದ್ಧೆಯಿಂದ ಮಾಡುವ ಕೆಲಸದಲ್ಲಿ ಯಶಸ್ಸು ಇರುತ್ತದೆ. ಸಮಾಜ ಸೇವೆಗಳು ಕೇವಲ ತೋರಿಕೆಯಾಗಬಾರದು. ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಕಾರ್ಯಮಾಡಿದಾಗ ಮಾತ್ರ ಸೇವೆಗೆ ಅರ್ಥ ಬರುವುದು ಎಂದರು.
ಲಯನ್ಸ್ ಕ್ಲಬ್‍ದಿಂದ ದೇಶದಲ್ಲಿ ಸದ್ಯ 73 ಕಣ್ಣಿನ ಚಿಕಿತ್ಸಾ ಆಸ್ಪತ್ರೆಗಳು ಜನಸೇವೆ ಮಾಡುತ್ತಲಿವೆ. ದೇಶ ಮತ್ತು ವಿದೇಶಗಳಲ್ಲಿ ಲಯನ್ಸ್ ಕ್ಲಬ್‍ಗಳ ಸೇವೆಯು ಅಪಾರವಾಗಿದೆ ಎಂದರು.
ಮೂಡಲಗಿ ಲಯನ್ಸ್ ಕ್ಲಬ್‍ವು ರೋಗಿಗಳಿಗೆ ಅನ್ನದಾಸೋಹ, ಸಸಿಗಳನ್ನು ನೆಡುವುದು, ಉಚಿತ ಆರೋಗ್ಯ ತಪಾಸಣೆ, ಸ್ವಚ್ಛತಾ ಕಾರ್ಯ ಸೇರಿದಂತೆ ನಿರಂತರ ವೈವಿಧ್ಯಮಯವಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡು ಶ್ಲಾಘನೀಯ ಕಾರ್ಯಮಾಡುತ್ತಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನೂತನ ಸದಸ್ಯರಾದ ಡಾ. ಸಂಜಯ ಶಿಂದಿಹಟ್ಟಿ, ಡಾ. ತಿಮ್ಮಣ್ಣ ಗಿರಡ್ಡಿ, ಡಾ. ರಾಜೇಂದ್ರ ಗಿರಡ್ಡಿ, ಡಾ. ಪ್ರಶಾಂತ ಬಾಬಣ್ಣವರ, ಪ್ರಮೋದ ಪಾಟೀಲ, ಸುಪ್ರೀತ ಸೋನವಾಲಕರ, ಮಲ್ಲಿಕಾರ್ಜುನ ಸಸಾಲಟ್ಟಿ ಅವರಿಗೆ ಲಯನ್ಸ್ ಕ್ಲಬ್‍ದ ಪಿನ್ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದರು.
ಲಯನ್ಸ್ ಕ್ಲಬ್ ರಿಜಿನಲ್ ಚೇರ್‍ಪರಸನ್ ವೆಂಕಟೇಶ ಸೋನವಾಲಕರ, ಅಧ್ಯಕ್ಷತೆವಹಿಸಿದ್ದ ಮೂಡಲಗಿ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿದರು.
ಬಾಲಶೇಖರ ಬಂದಿ ಪರಿಚಯಿಸಿ, ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಂಜಯ ಮೋಕಾಶಿ ಇದ್ದರು.
ಡಾ. ಎಸ್.ಎಸ್. ಪಾಟೀಲ, ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕನ್ನವರ, ಡಾ. ಪ್ರಕಾಶ ನಿಡಗುಂದಿ, ಸುರೇಶ ನಾವಿ, ಮಹಾಂತೇಶ ಹೊಸೂರ, ಅಬ್ದುಲ್ ಬಾಗವಾನ, ವಿಶಾಲ ಶೀಲವಂತ ಭಾಗವಹಿಸಿದ್ದರು.
ಮಹಾವೀರ ಸಲ್ಲಾಗೋಳ, ಮಲ್ಲಿನಾಥ ಶೆಟ್ಟಿ, ಸುಪ್ರೀತ ಸೋನವಾಲಕರ ಕಾರ್ಯಕ್ರಮ ನಿರೂಪಿಸಿದರು.

 


Spread the love

About inmudalgi

Check Also

‘ಮಕ್ಕಳ ಶಿಕ್ಷಣ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಜವಾಬ್ದಾರಿ ಇದೆ”- ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ

Spread the love ಮೂಡಲಗಿ: ‘ಮಕ್ಕಳ ಶಿಕ್ಷಣ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಜವಾಬ್ದಾರಿಯು ಮುಖ್ಯವಾಗಿದೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ