Breaking News
Home / Recent Posts / ‘ಮನುಷ್ಯ ಸತ್ಕಾರ್ಯಗಳ ಮೂಲಕ ಜೀವನ ಸುಂದರಗೊಳಿಸಿಕೊಳ್ಳಬೇಕು’

‘ಮನುಷ್ಯ ಸತ್ಕಾರ್ಯಗಳ ಮೂಲಕ ಜೀವನ ಸುಂದರಗೊಳಿಸಿಕೊಳ್ಳಬೇಕು’

Spread the love

ಮೂಡಲಗಿಯ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಮನೆ, ಮನೆಗೆ ಶಿವಾನುಭವ ಗೋಷ್ಠಿಯು ಪ್ರೊ. ಶಾಸ್ತ್ರೀಮಠ ಅವರ ಮನೆಯ ಅಂಗಳದಲ್ಲಿ ಜರುಗಿತು

‘ಮನುಷ್ಯ ಸತ್ಕಾರ್ಯಗಳ ಮೂಲಕ ಜೀವನ ಸುಂದರಗೊಳಿಸಿಕೊಳ್ಳಬೇಕು’

ಮೂಡಲಗಿ: ‘ಧರ್ಮ, ಸಂಸ್ಕøತಿಯ ಧ್ಯೇಯ, ತತ್ವಾದರ್ಶಗಳನ್ನು ಅನುಸರಿಕೊಂಡು ನಡೆದರೆ ಮಾನವನ ಬದುಕು ಸಾರ್ಥಕತೆಪಡೆದುಕೊಳ್ಳುತ್ತದೆ’ ಎಂದು ಮುನ್ಯಾಳ, ರಂಗಾಪುರ, ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಇಲ್ಲಿಯ ಪ್ರೊ. ಶಾಸ್ತ್ರೀಮಠ ಸಹೋದರರ ಆತಿಥ್ಯದಲ್ಲಿ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಿಂದ ಏರ್ಪಡಿಸಿದ್ದ 37ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಸತ್‍ಚಿಂತನೆ, ಸತ್ಕರ್ಮಗಳ ಮೂಲಕ ಶಾಂತಿ, ನೆಮ್ಮದಿ ಗಳಿಸಬಹುದು ಎಂದರು.
ಅರಿಷಡ್ವರ್ಗಗಳನ್ನು ಮೀರಿದಾಗ ಭಕ್ತಿ ಮಾರ್ಗವು ಸುಲಭವಾಗತ್ತದೆ, ಆತ್ಮೋದ್ಧಾರಕ್ಕೆ ಅದು ದಾರಿದೀಪವಾಗುತ್ತದೆ. ಕಾಯಕ ಮತ್ತು ದಾಸೋಹದ ಮೂಲಕ ಸುಂದರ ಬದುಕು ನಿರ್ಮಿಸಿಕೊಳ್ಳಬೇಕು ಎಂದರು.
ಕಂಕಣವಾಡಿಯ ಮಾರುತಿ ಶರಣರು ಮತ್ತು ನಾಗನೂರಿನ ಕಾವ್ಯಶ್ರೀ ಅಮ್ಮನವರು ‘ಮರವಿದ್ದು ಫಲವೇನು ನೆÀಳಲಿಲ್ಲದನ್ನಕ್ಕ’ ವಿಷಯದ ಕುರಿತು ಪ್ರವಚನ ನೀಡಿದರು.
ಆಕಾಶವಾಣಿ ಭಜನಾ ಕಲಾವಿದ ಇಟ್ನಾಳದ ನಾಗೇಶ ಐಹೊಳಿ, ಮಹಾನಿಂಗಪ್ಪ ಯಡವಣ್ಣವರ, ಶಿವಲಿಂಗ ಮುನ್ಯಾಳ, ಸತ್ಯಪ್ಪ ಮಾದರ, ಪಾಲಬಾವಿಯ ಅರ್ಜುನ ತುಪ್ಪದ, ಮುತ್ತಪ್ಪ ಸಂಗಾನಟ್ಟಿ, ಗುರ್ಲಾಪುರದ ರಾಚಯ್ಯ ಹಿರೇಮಠ ಇವರು ಪ್ರಸ್ತುತಪಡಿಸಿದ ಭಜನೆ ಮತ್ತು ಸಂಗೀತವು ಎಲ್ಲರ ಗಮನಸೆಳೆಯಿತು.
ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದ ಸಂಚಾಲಕ ಶಿವಪುತ್ರಯ್ಯ ಮಠಪತಿ ಮತ್ತು ಪ್ರೊ. ಸಂಗಮೇಶ ಗುಜಗೊಂಡ ಪ್ರಾಸ್ತಾವಿಕ ಮಾತನಾಡಿದರು.

ಡಾ. ಆರ್.ಎಸ್. ಶಾಸ್ತ್ರೀಮಠ ಸ್ವಾಗತಿಸಿದರು, ಪ್ರೊ. ಸುರೇಶ ಲಂಕೆಪ್ಪನ್ನವರ ನಿರೂಪಿಸಿದರು, ಪ್ರೊ. ಎಸ್.ಎ. ಶಾಸ್ತ್ರೀಮಠ ವಂದಿಸಿದರು.
ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ