Breaking News
Home / Recent Posts / ಅಂಜುಮನ್ ಕಮೀಟಿಯಿಂದ ಉಚಿತ ಅಂಬ್ಯುಲೆನ್ಸ ಸೇವೆ, ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ

ಅಂಜುಮನ್ ಕಮೀಟಿಯಿಂದ ಉಚಿತ ಅಂಬ್ಯುಲೆನ್ಸ ಸೇವೆ, ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ

Spread the love

ಅಂಜುಮನ್ ಕಮೀಟಿಯಿಂದ ಉಚಿತ ಅಂಬ್ಯುಲೆನ್ಸ ಸೇವೆ, ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ

ಮೂಡಲಗಿ: ಅರಭಾಂವಿ ಶಾಸಕ ಹಾಗೂ ಕೆ ಎಮ್ ಎಪ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನ ಹಾಗೂÀ ಅವರ ಪ್ರೋತ್ಸಹದಿಂದ ಇಲ್ಲಿಯ ಅಂಜುಮನ ಕಮೀಟಿಯು ವಿವಿಧ ಜನಪರ ಕಾರ್ಯ ಮಾಡುತ್ತಿದ್ದು ಬಡ ಜನತೆಗೆ ಆರ್ಥಿಕ ಸಹಾಯ,ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಹೆಚ್ಚಿನ ವ್ಯಾಸಾಂಗಕ್ಕೆ ಧನ ಸಹಾಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದ್ದು ಈಗ ಬಡ ಜನತೆಗಾಗಿಯೆ ಅಂಬ್ಯುಲೆನ್ಸ ವಾಹನವನ್ನು ಪ್ರಥಮ ಬಾರಿಗೆ ಬಡ ಜನತೆಯ ಸೇವೆಗಾಗಿ ಪಟ್ಟಣ ಹಾಗೂ ಸಮೀಪದ ಗ್ರಾಮಸ್ಥರಿಗೆ ಇರಿಸಲಾಗಿದೆ ಇದರ ಪ್ರಯೋಜನ ಪಡೆಯಬೇಕೆಂದು ಕಮಿಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಹೇಳಿದರು.
ಇಲ್ಲಿಯ ಅಂಜುಮನ್-ಎ-ಇಸ್ಲಾಂ ಎಜ್ಯಕೇಶನ್ ಮತ್ತು ಸೋಶಿಯಲ್ ಡೆವಲಮೆಂಟ ಸೋಸೈಟಿ ನೂತನ ಕಚೇರಿಯಲ್ಲಿ ಹಮ್ಮಿಕೊಂಡ ಅರಭಾವಿ ಮತಕ್ಷೇತ್ರದ ಮುಸ್ಲಿಂ ಸಮಾಜದ ನೂತನ ಗ್ರಾ.ಪಂ ಸದಸ್ಯರಿಗೆ ಮತ್ತು ಎಮ್.ಬಿ.ಬಿ.ಎಸ್ ವ್ಯಾಸಾಂಗಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮತ್ತು ನೂತನ ಶಿಕ್ಷಕ ಸಂಘಟನೆ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ಸೋಸ್ಯಟಿಯಿಂದ ಉಚಿತ ಅಂಬ್ಯಲೆನ್ಸ್ ಸೇವೆಯ ವಾಹನದ ಚಾಲನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಥಿ ಬಾಲಶೇಖರ ಬಂದಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಹಾಗೂ ಶಾಂತಿ, ನೆಮ್ಮದಿಗೆ ಶಿಕ್ಷಣದ ಅವಶ್ಯಕತೆ ಬಹಳವಿದೆ ಕಾರಣ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಅಂಜುಮನ ಕಮಿಟಿಯ ವಿವಿಧ ಸಮಾಜಮುಖಿ ಕಾರ್ಯಗಳು ಶ್ಲಾಘನೀಯವಾಗಿವೆ ಎಂದರು.
ಸೋಸೈಟಿಯ ಖಜಾಂಚಿ ಲಾಲಸಾಬ ಸಿದ್ದಾಪೂರ ಮಾತನಾಡಿ, ನೂತನ ಗ್ರಾ.ಪಂ ಸದಸ್ಯರು ತಮ್ಮ ಗ್ರಾಮದ ಮತ್ತು ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು. ಮತ್ತು ನಮ್ಮ ಜನಪ್ರೀಯ ಶಾಸಕರ ಪ್ರೋತ್ಸಾಹದೊಂದಿಗೆ ಸೋಸೈಟಿಯಿಂದ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕೌಜಲಗಿ ತಾ.ಪಂ ಸದಸ್ಯ ಲಕ್ಷಣ ಮುಸಗುಪ್ಪಿ, ಶಿಕ್ಷಣ ಸಂಯೋಜ ಕರಿ ಬಸವರಾಜ ಮಾತಾನಡಿದರು.
ಗೋಕಾಕ ಮತ್ತು ಕೊಣ್ಣೂರದ ಧರ್ಮ ಗುರುಗಳು ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಅರಭಾವಿ ಕ್ಷೇತ್ರದ ವಿವಿಧ ಗ್ರಾಮದ ನೂತನ ಗ್ರಾ.ಪಂ ನ 21ಸದಸ್ಯರನ್ನು, ನೂತನವಾಗಿ ಶಿಕ್ಷಕರ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಬಿ.ಎ.ಡಾಂಗೆ, ಎಸ್.ಎಮ್.ದಬಾಡಿ ಹಾಗೂ ವಿದ್ಯಾರ್ಥಿಗಳಾದ ಜುನೇದ ಪಶ್ಚಾಪೂರ, ಮಹಮ್ಮದ ಶೇಖ, ಪತ್ರಕರ್ತರ ಸಂಘದ ಅಧ್ಯಕ್ಷ ಅಕಬ್ಬರ ಪಿರಜಾದೆ ಅವರನ್ನು ಸೋಸೈಟಿ ವತಿಯಿಂದ ಸತ್ಕರಿಸಿದರು.
ಗೋಕಾಕದ ಎಚ್.ಡಿ.ಮುಲ್ಲಾ, ಸೋಸೈಟಿಯ ಕಾರ್ಯದರ್ಶಿ ಶಕೀಲ ಬೇಪಾರಿ, ಉಪಾಧ್ಯಕ್ಷ ಮೌಲಾಸಾಬ ಮೊಗಲ ಪದಾಧಿಕಾರಿಗಳು, ಸಮಾಜ ಮುಖಂಡರು ಭಾಗವಹಿಸಿದ್ದರು. ಶಿಕ್ಷಕ ಶಾಹನವಾಜ ದಬಾಡಿ ಸ್ವಾಗತಿಸಿ ನಿರೂಪಿಸಿದರು.


Spread the love

About inmudalgi

Check Also

ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ

Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ