ಸಾಲಗಾರರು ಅವಶ್ಯಕತೆ ತಕ್ಕಂತೆ ಸಾಲ ಪಡೆಯಬೇಕು-ಗಾಣಿಗೇರ
ಮೂಡಲಗಿ: ಸಹಕಾರ ಸಂಘಗಳು ಬೆಳೆಯಲು ಸಾಲಗಾರರ ಪಾತ್ರ ಬಹಳ ಮುಖ್ಯ, ಸಾಲಗಾರರು ಅವಶ್ಯಕತೆವಿದ್ದಷ್ಟು ಸಾಲ ಪಡೆದು ತಾವೂ ಆರ್ಥಿಕ ಪ್ರಗತಿ ಹೊಂದುವುದರ ಜೊತೆಗೆ ಸೊಸಾಯಟಿಯ ಪ್ರಗತಿಗೆ ಪಾತ್ರರಾಗಬೇಕು ಎಂದು ಮೂಡಲಗಿಯ ಮಹಾಲಕ್ಷ್ಮೀ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಟಿಯ ಅಧ್ಯಕ್ಷ ಮಲ್ಲಪ್ಪ ಗು.ಗಾಣಿಗೇರ ಹೇಳಿದರು.
ಅವರು ಪಟ್ಟಣದಲ್ಲಿ ಶ್ರೀ ಮಹಾಲಕ್ಷ್ಮೀ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಿಟಿಯ 32ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಮಾರ್ಚ ಅಂತ್ಯಕ್ಕೆ 2.28 ಕೋಟಿ ಶೇರು ಬಂಡವಾಳ, 108 ಕೋಟಿ ರೂ ಠೇವು ಸಂಗ್ರಹಿಸಿ, 93.60 ಕೋಟಿ ರೂ ಸಾಲ ನೀಡಿ 3.79 ಕೋಟಿ ಲಾಭ ಗಳಿಸಿ 135 ಕೋಟಿ ರೂ ದುಡಿಯುವ ಬಂಡವಾಳ ಹೊಂದಿ ಕಳೆದ 10 ವರ್ಷಗಳಿಂದ ತನ್ನ ಶೇರುದಾರರಿಗೆ ಶೇ.15 ರಷ್ಟು ಲಾಭಾಂಶ ವಿತರಿಸುತ್ತಾ ಬಂದಿರುವದು ಸಂಸ್ಥೆಯ ಪ್ರಗತಿಯ ಧೋತಕವಾಗಿದೆ ಎಂದರು.
ಸೊಸಾಯಟಿಯ ಪ್ರಗತಿಗೆ ಶೇರುದಾರರ ಜೊತೆ ಮತ್ತು ಆಡಳಿತ ಮಂಡಳಿಯ, ಸಿಬ್ಬಂದಿ ವರ್ಗದವರು ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸಬೇಕು. ಅಂದು ದನಗಳ ಪೇಟೆಗೆ ಹೆಸರುವಾಸಿಗಿದ್ದ ಮೂಡಲಗಿ ಇಂದು ಸಹಕಾರಿ ನಗರ ಎಂದು ಸಹಕಾರಿ ಕ್ಷೇತ್ರದಲ್ಲಿ ಹೆಸರು ಗಳಿಸುತ್ತಿರುವದು ಶ್ಲಾಘನೀಯ ಎಂದರು. ನಮ್ಮ ಸೊಸಾಯಟಿಯ ಎಲ್ಲ ಶಾಖೆಗಳು ಪ್ರಗತಿ ಪಥದತ್ತ ನಡೆಯಲು ಅಲ್ಲಿನ ಸಲಹಾ ಸಮಿತಿಯ ನಿಶ್ವಾರ್ಥ ಸೇವೆ ಮುಖ್ಯವಾಗಿದೆ ಎಂದರು.
ರಾಮದುರ್ಗ ಶಾಖಾ ಅಧ್ಯಕ್ಷ ಎಸ್.ವ್ಹಿಹೊನುಂಗರ ಮತ್ತು ಸಾಲಹಳ್ಳಿ ಶಾಖೆಯ ಅಧ್ಯಕ್ಷ ಶಂಕರಗೌಡ ಹೊಸಗೌಡ್ರ ಮಾತನಾಡಿದರು.
ಪ್ರಧಾನ ವವ್ಯಸ್ಥಾಪಕ ಚನಬಸು ಎಸ್ ಬಗನಾಳ, ಸೊಸಾಯಟಿಯ ಬೆಳೆವಣಿಗೆಯಲ್ಲಿ ಶೇರುದಾರರು ಪಾತ್ರ ಬಹಳ ಮುಖ್ಯವಾಗಿದೆ. ಸಂಘದಿಂದ ಸದಸ್ಯರಿಗೆ ಆಗುವ ಲಾಭಗಳ ಮತ್ತು ಕಾನೂನು ಪಾಲನೆ ನಿಯಮಗಳ ಕುರಿತು ಮಾತನಾಡಿದರು. ಸೊಸಾಯಟಿಯ ಉಪಾಧ್ಯಕ್ಷ ಡಾ|| ಪ್ರಕಾಶ ನಿಡಗುಂದಿ ವರದಿ ವಾಚನ, ಸಹಾಯಕ ವ್ಯವಸ್ಥಾಪಕ ಹಣಮಂತ ದೇಸಾಯಿ ಕ್ರೋಡಿಕೃತ ಅಢಾವೆ ಪತ್ರಿಕೆ,ಸುಭಾಸ ಪುಟ್ಟಿ ಲಾಭ ಹಾನಿ, ಅರ್ಜುನ ಗೋಕಾಕ ಅಂಧಾಜು ಲಾಭಹಾನಿ, ಮಡಿವಾಳಪ್ಪ ಬಡಿಗೇರ ಲಾಭ ವಿಭಾಗಣೆ ಮಂಡಿಸಿದರು.
ಸಭೆಯಲ್ಲಿ ಮಹಾಲಕ್ಷ್ಮೀ ಸೊಸಾಯಟಿಯ ಉಪಾಧ್ಯಕ್ಷ ಡಾ|| ಪ್ರಕಾಶ ನಿಡಗುಂದಿ, ನಿರ್ದೇಶಕರಾದ ಶಿವಬಸು ಆರ್.ಖಾನಟ್ಟಿ, ಮುತ್ತಪ್ಪ ಬಿ.ಈರಪ್ಪನವರ,ಸಂತೋಷ ಟಿ.ಫಾರ್ಶಿ, ಮಹಾದೇವ ಸಿ.ಗೋಕಾಕ, ಸಚೀನ.ಪಿ.ಮುನ್ಯಾಳ, ಸಾಂವಕ್ಕಾ ಎಮ್.ಶಕ್ಕಿ, ಭಾರತಿ ಆರ್. ಫಾಟೀಲ, ವಿದ್ಯಾಶ್ರೀ ಎಸ್ ಮುರಗೋಡ,ಗೌರವ್ವಾ ಪಾಟೀಲ, ಶೋಭಾ ಕದಮ್ ಕಾನೂನು ಸಲಹೆಗಾರ ಎಸ್.ವಾಯ್ ಹೊಸಟ್ಟಿ, ಬೆಳಗಾವಿ ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ವರ್ಧಮಾನ ಬೋಳಿ ಹಾಗೂ ವಿವಿಧ ಶಾಖಾ ಸಲಹಾ ಸಮೀತಿಯ ಅಧ್ಯಕ್ಷರು ಉಪಸ್ಥಿತರಿದ್ದರು,
ಪ್ರಧಾನ ವ್ಯವಸ್ಥಾಪಕ ಚನಬಸು ಬಗನಾಳ ಸ್ವಾಗತಿಸಿದರು. ಮಾರಾಟಾಧಿಕಾರಿ ಅರ್ಜುನ ಗಾಣಿಗೇರ ನಿರೂಪಿಸಿದರು. ಸುಭಾಸ ಪೂಜೇರಿ ವಂದಿಸಿದರು.