Breaking News
Home / Uncategorized / ಬನವಾಸಿಯಲ್ಲಿ “ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭು”ಚಲನಚಿತ್ರದ ಚಿತ್ರೀಕರಣ

ಬನವಾಸಿಯಲ್ಲಿ “ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭು”ಚಲನಚಿತ್ರದ ಚಿತ್ರೀಕರಣ

Spread the love

ಬನವಾಸಿಯಲ್ಲಿ “ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭು”ಚಲನಚಿತ್ರದ ಚಿತ್ರೀಕರಣ

ಬನವಾಸಿ: ಧರ್ಮರಕ್ಷಣೆಯ ಹಾಗೂ ಹಿಂದೂ ಧರ್ಮವನ್ನು ಎತ್ತಿ ಹಿಡಿಯುವ ಉದ್ದೇಶದಿಂದ “ವ್ಯೋಮಕಾಯ ಸಿದ್ದ ಶ್ರೀ ಅಲ್ಲಮಪ್ರಭು” ಎಂಬ ಚಲನಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕ ಮಾಧವನಂದ ಶೆಗುಣಸಿ ಹೇಳಿದರು.


ಅವರು ಬನವಾಸಿ ಶ್ರೀ ಮಧುಕೇಶ್ವರ ದೇವಾಲಯದಲ್ಲಿ ನಡೆದ ಚಿತ್ರೀಕರಣದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 12ನೇ ಶತಮಾನದಲ್ಲಿ ಬಹಳಷ್ಟು ಶರಣರು ಇದ್ದರು ಅವರನ್ನು ಶರಣರು ಎನ್ನುವರೇ ವಿನಃ ದೇವರು ಎಂದು ಯಾರು ಹೇಳುವುದಿಲ್ಲ. ಆದರೆ ಶ್ರೀ ಅಲ್ಲಮಪ್ರಭುಗಳನ್ನು ಶರಣರಂತೆ ಕಾಣದೇ ದೇವರೆಂದೂ ಜನ ಕೈಮುಗಿಯುತ್ತಾರೆ. ಅವರ ಜೀವನಧಾರ ಕುರಿತು 4 ವರ್ಷ ಅಧ್ಯಾಯನ ನಡೆಸಿ, ಹರಿಹರನ ರಗಳೆ, ಚಾಮರಸನ ಪ್ರಭುಲಿಂಗ ಲೀಲೆ ಹಾಗೂ ಅನೇಕ ಮಠಾಧೀಶರ ಪ್ರವಚನಗಳನ್ನು ಅಧ್ಯಾಯನಗೈದು ಈ ಚಲನಚಿತ್ರಕ್ಕೆ ಕಥೆ ರಚಿಸಲಾಗಿದೆ. ರಾಜರ ಅಳ್ವಿಕೆಯ ಕಾಲದಲ್ಲಿ ಬನವಾಸಿಯ ಮಧುಕೇಶ್ವರ ದೇವಾಸ್ಥಾನದಲ್ಲಿ ಅಲ್ಲಮಪ್ರಭುಗಳು ಮದ್ದಲೆ ನುಡಿಸಿದಾಗ ಅಲ್ಲಿರುವ ಮಾಯೆಮಂಟಪದಲ್ಲಿ ರಾಣಿ ಮಾಯೆಯೂ ನೃತ್ಯ ಮಾಡಿದ್ದಳು ಈ ನೈಜ ಘಟನೆ ನಡೆದ ಸ್ಥಳದಲ್ಲಿಯೇ ಚಿತ್ರೀಕರಣ ಮಾಡಲಾಗಿದ್ದು ಚಿತ್ರರಂಗದಲ್ಲಿಯೇ ಅಚ್ಚರಿಯ ವಿಷಯ ಇಲ್ಲಿಯವರೆಗೆ ಬನವಾಸಿ ಮಧುಕೇಶ್ವರ ದೇವಾಲಯದ ಒಳಂಗಣದಲ್ಲಿ ಚಿತ್ರೀಕರಣ ಮಾಡಲು ಅನುಮತಿ ನೀಡಿರಲಿಲ್ಲ. ಆದರೆ ನಮ್ಮ ಚಿತ್ರದ ಕಥೆಗೆ ಈ ದೇವಾಲಯದಲ್ಲಿ ಅನುಮತಿ ಸಿಕ್ಕಿರುವುದು ಆನಂದ ತಂದಿದೆ.
ಈ ಚಲನಚಿತ್ರವೂ ಬನವಾಸಿ ಶ್ರೀ ಉಮಾಮಧುಕೇಶ್ವರ ದೇವಾಲಯವಲ್ಲದೇ ಆದಿ ಮಧುಕೇಶ್ವರ ದೇವಾಲಯ, ಪಂಪವನ ಹಾಗೂ ಸುತ್ತಲಿನ ಹಚ್ಚಹಸಿರು ತಾಣಗಳಾದ ಮೊಗವಳ್ಳಿ, ಭಾಶಿ, ಸಹಸ್ರಲಿಂಗಗಳಲ್ಲಿ ಚಿತ್ರೀಕರಣಗೊಂಡಿದೆ. ಬನವಾಸಿಯ ಶ್ರೀ ಉಮಾಮಧುಕೇಶ್ವರ ದೇವಾಲಯ ಆಡಳಿತ ಮಂಡಳಿಯ ರಾಜಶೇಖರ ಓಡೆಯರ್ ಹಾಗು ಜನತೆ ತುಂಬಾ ಸಹಕಾರ ನೀಡಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳು.
ಅಮರಜ್ಯೋತಿ ಫಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಶರಣ್ ಗದ್ದವಾಲ ನಿರ್ದೇಶನ ಮಾಡುತ್ತಿದ್ದಾರೆ. ಎನ್‍ಕೌಂಟರ್ ದಯಾನಾಯಕ್ ಚಿತ್ರದ ನಾಯಕನಟರಾಗಿರುವ ಸಚೀನ್ ಸುವರ್ಣ ಅವರು ಅಲ್ಲಮಪ್ರಭು ಪಾತ್ರ ಮಾಡುತ್ತಿದ್ದು, ರಾಣಿ ಮಾಯೆಯಾಗಿ ಸಂಭ್ರಮಶ್ರೀ ಅಭಿನಯಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಜಶೇಖರ ಓಡೆಯರ್, ಹಂಚಿಕೆದಾರ ಸೋಮಣ್ಣ ಫಿಲಂಸ್ ಶುಕ್ರ, ನಿರ್ದೇಶಕ ಶರಣ್ ಗದ್ದವಾಲ, ನಟ ಸಚೀನ್ ಸುವರ್ಣ, ನಟಿ ಸಂಭ್ರಮಶ್ರೀ, ಚಂದ್ರು ಉಡುಪಿ, ಛಾಯಗ್ರಹಕ ಆರ್ ಗಿರಿ, ಸಂಕಲನಗಾರ ಕೆಂಪರಾಜು ಹಾಗೂ ಚಿತ್ರತಂಡದ ಸದಸ್ಯರು ಇದ್ದರು.


Spread the love

About inmudalgi

Check Also

ಲಯನ್ಸ್ ಕ್ಲಬ್‍ನ 100ನೇ ಅನ್ನದಾಸೋಹ

Spread the loveಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ